ರೇಡಿಯೋ

ರೇಡಿಯೋ
ಮೂಲ: ಲಾರೆಲ್ ಬ್ಲಾಸಮ್
ಕನ್ನಡಕ್ಕೆ - ಸಿ. ಪಿ.  ರವಿಕುಮಾರ್ 


Image result for car radio

ಕಾರಿನಲ್ಲಿ ರೇಡಿಯೋ ಇಲ್ಲಪ್ಪಾ 
ಇಲ್ಲಿ ರೇಡಿಯೋ ಇಲ್ಲ

ರೇಡಿಯೋ ಖಂಡಿತಾ ಇಲ್ಲ!

ರೇಡಿಯೋ ಕೆಟ್ಟು  ಕೂತಿದೆ
ಅಲಾರಂ ಹೊಡಕೊಳ್ಳುವಂತೆ 

ಸೆಟ್ ಮಾಡಿದೆ

ರೇಡಿಯೋ ಇಲ್ಲ
ಹಣವೂ ಇಲ್ಲ

ರೇಡಿಯೋ ಇಲ್ಲ
ಬೆಲೆ ಬಾಳುವುದು ಏನೂ ಇಲ್ಲ

ರೇಡಿಯೋ ಆಗಲಿ
ಬೆಳೆಬಾಳುವುದಾಗಲಿ ಏನೂ ಇಲ್ಲ
ಕಾರಿನಲ್ಲಾಗಲಿ ಡಿಕ್ಕಿಯಲ್ಲಾಗಲಿ


ರೇಡಿಯೋ ಇಲ್ಲ
ಕಳುವಾಗಿದೆ, 
ಮೂರುಸಲ ಹೇಳುತ್ತೇನೆ

ರೇಡಿಯೋ ಇಲ್ಲ
ಡಿಕ್ಕಿ ಖಾಲಿ, ಡ್ರೈವರ್ ಕಂಪಾರ್ಟ್ಮೆಂಟ್ ಖಾಲಿ
ನಿಜ ಹೇಳುತ್ತಿದ್ದೀನಿ

ಕಾರಿನಲ್ಲಿ
ಬೆಲೆ ಬಾಳುವುದು ಏನೂ ಇಲ್ಲ
ರೇಡಿಯೋ ಇಲ್ಲ
ಎಂಥದ್ದೂ ಇಲ್ಲ
(ಸುಳ್ಳು ಹೇಳುತ್ತಿಲ್ಲ)


ಕೆಟ್ಟಿದೆ ರೇಡಿಯೋ
ಏನೂ ಉಳಿದಿಲ್ಲ.
ರೇಡಿಯೋ ಹೋಯಿತು
ಡ್ಯಾಷ್ ಬೋರ್ಡ್ ಮೇಲೆ ಖಾಲಿ ಜಾಗ ನೋಡಿ ಬೇಕಾದರೆ


ಹುಷಾರು!
ರೇಡಿಯೋ ಇಲ್ಲಿಂದ ತೆಗೆದರೆ
ಅದು ಕೆಲಸ ಮಾಡುವುದಿಲ್ಲ
ಅದಕ್ಕೆ ಸಂರಕ್ಷಣಾ ಕೋಡ್ ಬೇಕು

ಈ ಡಬ್ಬಾ ವಾಹನದಲ್ಲಿ
ಯಾರಾದರೂ ಬೆಲೆ ಬಾಳುವುದೇನನ್ನಾದರೂ ಇಡ್ತಾರಾ? 
ಬೆಲೆ ಬಾಳುವುದು ಏನೂ ಇಲ್ಲ
ಈ ವ್ಯಾನಿನಲ್ಲಿ 

ದಯವಿಟ್ಟು ಸುಮ್ಮಸುಮ್ಮನೆ
ಗಾಜು ಒಡೆಯಬೇಡಿ. 
ನಿಮ್ಮ ಸಹಕಾರಕ್ಕೆ ವಂದನೆಗಳು.


ಕಾರಿನಲ್ಲಿ ಬೆಲೆ ಬಾಳುವುದು ಏನೂ ಇಲ್ಲ
ರೇಡಿಯೋ ಇಲ್ಲ
ಟೇಪ್ ಇಲ್ಲ
ಫೋನ್ ಕೂಡಾ ಇಲ್ಲ.


ಕವಿತೆಯ ಸ್ವಾರಸ್ಯ: ತನ್ನ ಕಾರಿನಲ್ಲಿ ರೇಡಿಯೋ ಇಲ್ಲ ಎಂದು ಮತ್ತೆ ಮತ್ತೆ ಸಾರುವ ಮಾಲೀಕ ನಿಜ ಹೇಳುತ್ತಿದ್ದಾನೆ ಎಂದು ನಿಮಗೆ ಅನ್ನಿಸಿತೇ? ಸುಳ್ಳನ್ನೇ ಹೀಗೆ ಮತ್ತೆ ಮತ್ತೆ (ರೇಡಿಯೋದಂತೆ) ಪುನಃಪ್ರಸಾರ ಮಾಡಿದರೆ ಅದು ನಿಜವಾಗತ್ತದೆಯೇ? 


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)