ನೀಡೌ, ವೀಣಾವಾದಿನಿ, ವರವ!
ಮೂಲ - ಸೂರ್ಯಕಾಂತ ತ್ರಿಪಾಠಿ "ನಿರಾಲಾ"
ಕನ್ನಡಕ್ಕೆ - ಸಿ. ಪಿ. ರವಿಕುಮಾರ್
ನೀಡೌ, ವೀಣಾವಾದಿನಿ, ವರವ!
ನವಸ್ವಾತಂತ್ರ್ಯದ ಅಮೃತಮಂತ್ರವು
ತುಂಬುವಂತೆ ಭಾರತವ!
ಸೀಳಿ ಅಂಧಕಾರದ ಎದೆಯನ್ನು
ಹರಿಸು ತಾಯೆ ಜ್ಯೋತಿರ್ಮಯವನ್ನು
ಭೇದವೆಂಬ ತಮವನು ಕತ್ತರಿಸಿ
ಎಲ್ಲೆಡೆ ಜ್ಞಾನಪ್ರಕಾಶವ ಹರಿಸಿ
ಬೆಳಗು ನಮ್ಮ ಮಾನಸವ!
ಕಂಠವು ಮರಿಮೋಡದ ಗುಡುಗಿನೊಲು,
ನೀಡೌ ಆಕಾಶದ ತುದಿಯೊಳಗೆ
ರೆಕ್ಕೆಯೊಡೆದು ಹಾರುವ ಖಗಗಳಿಗೆ
ಮಾಡಲಿ ಶುಭ ಕಲರವವ!
ನೀಡೌ, ವೀಣಾವಾದಿನಿ, ವರವ!
(ಹಿಂದಿಯ ಪ್ರಸಿದ್ಧ ಕವಿ "ನಿರಾಲಾ" ಅವರು ಬರೆದ ಈ ಸರಸ್ವತಿವಂದನೆಯನ್ನು ಅನೇಕ ಕಲಾವಿದರು ಹಾಡಿದ್ದಾರೆ. ನಿಮಗೆ ಯೂಟ್ಯೂಬಿನಲ್ಲಿ ಧ್ವನಿಮುದ್ರಿಕೆಗಳು ಸಿಕ್ಕುತ್ತವೆ. ಭಾರತಕ್ಕೆ ಸ್ವಾತಂತ್ರ್ಯಪ್ರಾಪ್ತಿಯಾದಾಗ ಬರೆದ ಈ ಕವಿತೆಯಲ್ಲಿ ಭಾರತವನ್ನು ಕುರಿತು ಕವಿಯ ಕನಸುಗಳಿವೆ.)
ಇಷ್ಟವಾಯಿತು...ಅಗಣಿತ ನಮನಗಳು
ಪ್ರತ್ಯುತ್ತರಅಳಿಸಿ