ಮನಸು ನಿಲ್ಲಿಸದೆ ಆಗದು, ನಿರ್ಮೋಹಿ!

ಮೂಲ: ಮಹಾತ್ಮಾ ಕಬೀರ್ 
ಕನ್ನಡಕ್ಕೆ : ಸಿ. ಪಿ. ರವಿಕುಮಾರ್ 


ಅಶ್ವಿನಿ ಭಿಡೆ ಅವರು ಅದ್ಭುತವಾಗಿ ಹಾಡಿರುವ ಕಬೀರನ ಈ ಭಜನೆಯನ್ನು (ಶಬದ್) ನೀವು ಇಲ್ಲಿ ಕೇಳಬಹುದು.    ಇದೇ ಭಜನೆಯನ್ನು ಅಶ್ವಿನಿ ಅಂಬೇಡ್ಕರ್ ಎಂಬ ಗಾಯಕಿ ಕೂಡಾ ಅದ್ಭುತವಾಗಿ ಹಾಡಿದ್ದಾರೆ

ಭಕ್ತಿಯಿಲ್ಲದ ಪೂಜೆಯನ್ನು ಕುರಿತು ನಮ್ಮ ಹರಿದಾಸರು ಮತ್ತು ವಚನಕಾರರು ಕೂಡಾ ಹಾಡಿದ್ದಾರೆ.  ಕಬೀರನು ಹೇಳುವುದೂ ಅದೇ - ಮೋಹ (ಭಕ್ತಿ) ಇಲ್ಲದೆ ಮನಸು ನಿಲ್ಲಿಸದೆ  ಪೂಜಿಸಿದರೆ ಅದರಿಂದ ಏನೂ ಸಿದ್ಧಿಸದು! ಇಷ್ಟಾಗಿ ಏನಾದರೂ ದೇವರ ಇಷ್ಟದಲ್ಲಿದ್ದಂತೆಯೇ ಆಗುತ್ತದೆ!  ದೇವನ ಕೃಪೆಯಿದ್ದರೆ ನಿನಗೆ ಸದ್ಗುರು ದೊರಕುತ್ತಾನೆ. ಗುರುವಿನಿಂದ ಮುಕ್ತಿ ದೊರಕುತ್ತದೆ, ಇಲ್ಲದಿದ್ದರೆ ಇಲ್ಲ!

ಮನಸು ನಿಲ್ಲಿಸದೆ ಆಗದು, ನಿರ್ಮೋಹಿ!

ಮನಸು ನಿಲ್ಲಿಸದ ಪ್ರೀತಿಯು ಹುಚ್ಚ,
ಇಬ್ಬನಿಯಿಂದ ಮೈ ತೊಳೆದಂತೆ!

ನಂಬಿ 
ರಾಮನನ್ನು ನಡೆಸುವ ಈ ಬದುಕು 
ನಡೆವುದು ಅವನ ಮನದೊಳಿರುವಂತೆ!

ಕೃಪೆಯಿಲ್ಲದೆ ಸಿಗುವನೇ 
ಸದ್ಗುರು,
ಎಷ್ಟು ಪ್ರಯತ್ನಿಸಿದರೆ ಏನಂತೆ!

ಹೇಳುವನು ಕಬೀರ ಕೇಳಿ ಸಂತರೇ, 
ಮುಕ್ತಿ ದೊರೆಯದು ಗುರುವಿಲ್ಲದೆ!

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)