ನಿನ್ನನ್ನು ನೀನೇ ಹುಡುಕಿಕೋ
ಮೂಲ - ಎಮಿಲಿ ಮೆಕ್ ಡೊವೆಲ್
ಕನ್ನಡಕ್ಕೆ - ಸಿ. ಪಿ. ರವಿಕುಮಾರ್
ನಿನ್ನನ್ನು ನೀನು ಹುಡುಕಿಕೋ
ಎಂದು ಹೇಳುವರಲ್ಲ ಜನ
ನೀನೇನು ಕೋಟಿನ ಜೋಬಿನಲ್ಲಿಟ್ಟು ಮರೆತ
ನೂರು ರೂಪಾಯಿಯ ನೋಟೇ?
ಎಂದು ಹೇಳುವರಲ್ಲ ಜನ
ನೀನೇನು ಕೋಟಿನ ಜೋಬಿನಲ್ಲಿಟ್ಟು ಮರೆತ
ನೂರು ರೂಪಾಯಿಯ ನೋಟೇ?
ನೀನೆಲ್ಲೂ ಕಳೆದುಹೋಗಿಲ್ಲ
ನಿನ್ನ ನಿಜಸ್ವರೂಪ ಅಗೋ ಅಲ್ಲೇ ಇದೆ.
ಹುದುಗಿಹೋಗಿದೆ
ಸಂಸ್ಕಾರಗಳೆಂಬ ತಿದ್ದುಪಡಿ, ಒಪ್ಪಓರಣಗಳ ಕೆಳಗೆ,
ಪರರ ಅಭಿಪ್ರಾಯಗಳ ಕೆಳಗೆ,
ನೀನಿನ್ನೂ ಮಗುವಾಗಿದ್ದಾಗ
ನೀನು ಯಾರೆಂಬ ಪ್ರಶ್ನೆಗೆ ನೀನು
ಕಂಡುಕೊಂಡ ತಪ್ಪುತ್ತರಗಳಿಂದ
ಬೆಳೆದ ನಂಬಿಕೆಗಳ ಕೆಳಗೆ.
ನಿನ್ನನ್ನು ಹುಡುಕಿಕೊಳ್ಳುವುದೆಂದರೆ
ನಿನ್ನತನಕ್ಕೆ ಮರಳುವುದು, ಅಷ್ಟೇ.
ನಿನ್ನನ್ನು ಹುಡುಕಿಕೊಳ್ಳಬೇಕೇ?
ನಿನಗೆ ಬೇಕಾಗಿರುವುದು -
ಕಲಿತ ತಪ್ಪು ಪಾಠಗಳನ್ನು ಮರೆಯುವುದು,
ಅಗೆಯುವುದು,
ಮತ್ತು ಜಗತ್ತು ನಿನ್ನನ್ನು ಹಿಡಿಯುವ ಮೊದಲು
ನೀನು ಏನಾಗಿದ್ದೆ ಎಂದು ನೆನೆಯುವುದು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ