ಲಾಕ್ ಡೌನ್ ಚುಟುಕಗಳು
ಲಾಕ್ ಡೌನ್ ಕಾಲದಲ್ಲಿ ಬರೆದ ಚುಟುಕಗಳು
ರಾಜು
ನನ್ನ ಫ್ರೆಂಡ್ ಎಂಎನ್ಎಚ್ ರಾಜು ಅಂತ
ಓದಿಕೊಂಡಿಲ್ಲವಾದ್ರೂ ಸಹಜ ಬುದ್ಧಿವಂತ
ಹುಟ್ಟಿದ್ದು ಮಾಗಡಿಯ ನಗುವಳ್ಳಿ ಅಂತ
ಅವನ ತಂದೆಯ ಹೆಸರು ಹನುಮಂತ
ಎಂದೂ ಬರೆದದ್ದು ಕಾಣೆ ಮಾ.ನ.ಹ. ರಾಜು ಅಂತ
ಥ್ರೋ ಬ್ಯಾಕ್
ಮ್ಯಾನೇಜರ್ ನೀಡಿದ ಸಮಸ್ಯೆಗೆ ಪರಿಹಾರ
ಇಂಜಿನಿಯರ್ ಕೊಡಬಾರದಾಗಿತ್ತು ಗುರುವಾರ
ಸೂಕ್ತವಾಗಿದ್ದರೂ ವಾಪಸ್ ಬಂತು ರೀಬೌಂಡು
ಯೋಚಿಸಲು ತಿಳಿದುಬಂತು ಯಾಕೆಂದು
ಅಂದು ಮ್ಯಾನೇಜರ್‌ಗೆ ಥ್ರೋ ಬ್ಯಾಕ್ ಥರ್ಸ್ಡೇ ಆಚಾರ
ಮೂರು
ರುಕ್ಮಿಣಿಗೆ ಎಷ್ಟಿತ್ತು ಗೊತ್ತೇ ಮುತುವರ್ಜಿ
ಪತಿದೇವ ಕೃಷ್ಣನ ತೂಕ ಕುರಿತು ಕಾಳಜಿ
ತಂದಾಗ ಸುದಾಮ ಖಾರದವಲಕ್ಕಿ
ಕೃಷ್ಣ ತಿಂದದ್ದು ಎರಡೇ ಹಿಡಿ ಮುಕ್ಕಿ
ಮೂರನೇ ಹಿಡಿಗೇ ಬಸ್ ಕರೋ ಸರ್ ಜೀ.
ಲಾಕ್ ಡೌನ್ ಅಲೆಮಾರಿ
ಕೆಲವರು ಅಲೆಮಾರಿ ಜನಾಂಗ
ಮನೆಯ ಹೊರಗೇ ಪಟ್ಟಾಂಗ
ಈಗ "ಅಲ್ಲಿದೆ ನಮ್ಮ ಮನೆ
ಇಲ್ಲಿಗೆ ಬಂದೆವು ಸುಮ್ಮನೆ"
ಎಂದು ದಾಸರ ರಾಗ ಹಾಡುತ್ತಿರುವರೀಗ!
ಕಳಪೆ ಕಿಟ್ಟು
ಯಾವಾಗ ಹೋದ ಭಾರತ ಬಿಟ್ಟು
ನಮ್ಮ ಕಿಟ್ಟು ಚೈನಾಗೆ, ಮಾನಗೆಟ್ಟು!
ಇಲ್ಲಿ ಕನಕಪುರದಲ್ಲಿದ್ದಾಗಲೂ
ಮಾರುತ್ತಿದ್ದದ್ದು ಕಳಪೆ ಮಾಲು
ಈಗಂತೂ ಹೆಡ್ಲೈನ್ ನ್ಯೂಸ್ "ಕಳಪೆ ಚೈನಾ ಕಿಟ್ಟು"
ಡೌನ್ ಡೌನ್
ಅದು ಡೌನು ಇದು ಡೌನು
ಲಾಕ್ ಡೌನು ಸೀಲ್ ಡೌನು
ಬರಲಿದೆಯೋ ಏನೇನು
ಚಿಂತಿಸೆನು ನಾನಿನ್ನು
ಏನು ಫಲ, ಲೋಕವೇ ಆದಾಗ ಅಪ್ ಸೈಡ್ ಡೌನು!!
ಏಕಲವ್ಯನ ಬೆಟ್
ಅರ್ಜುನನ ಜೊತೆ ಪಂಥ
ಏನು ಸುಮ್ಮನೇ ಬಂತಾ
ಗುರುಗಳು ಬೇರೆ
ಶಿಷ್ಯನ ಪರವಾಗಿದಾರೆ
ಏಕಲವ್ಯ ಪಾಪ ಕಟ್ಟಿ ಬೆಟ್ ಸೋತ
ಭಾಗ್ಯ
ಹಿಂದಿಯಲ್ಲಿ "ಭಾಗ್ಯವಾನ್"
ನಮ್ಮ ಕನ್ನಡದಲ್ಲಿ ಭಾಗ್ಯವಂತ
ಯೋಚಿಸ್ತಾ ಇದ್ದೆ ಹಾಗೇ
ಹೀಗೆ ಯಾಕೆ ಅಂತ
"ಭಾಗ್ಯವಾನರ ಪಾದಗಳಿಗೆ ನಮಸ್ಕಾರ"
ಎಂದಾಗ ಭಾಗ್ಯದೊಂದಿಗೆ ಬರುವ ಜೀವಪ್ರಕಾರ
ನೋಡಿಯೇ ಬದಲಾಯಿಸಿದ ಒಬ್ಬ ಬುದ್ಧಿವಂತ
ಬಂಗಾರದ ಮನುಷ್ಯ
ನನಗೆ ಸಿಕ್ಕರು ಇಬ್ಬರು ಮೆಕಾನಿಕ್ಸ್
ಮಾಡ್ಸೋಕೆ ಕಾರ್ ರಿಪೇರಿ
ಒಬ್ಬನ ಹೆಸರು ಕ್ಲಾಸಿಕಲ್
ಇನ್ನೊಬ್ಬ ಕ್ವಾಂಟಂ ಅಂತೆ ರೀ
ಊಟಮಾಡಲು ಹೊರಟ ಕ್ಲಾಸಿಕಲ್
ಕೆಲಸವನ್ನು ಅರ್ಧದಲ್ಲೇ ಬಿಟ್ಟು
ಕ್ವಾಂಟಂ ಬಹಳ ಸ್ಟೈಲಾಗಿ.ಕೇಳಿದನು
ತರಿಸಿಕೊಡಿ ಊಟದ ಪ್ಯಾಕೆಟ್ಟು
- ಸಿ ಪಿ ರವಿಕುಮಾರ್
ರಾಜು
ನನ್ನ ಫ್ರೆಂಡ್ ಎಂಎನ್ಎಚ್ ರಾಜು ಅಂತ
ಓದಿಕೊಂಡಿಲ್ಲವಾದ್ರೂ ಸಹಜ ಬುದ್ಧಿವಂತ
ಹುಟ್ಟಿದ್ದು ಮಾಗಡಿಯ ನಗುವಳ್ಳಿ ಅಂತ
ಅವನ ತಂದೆಯ ಹೆಸರು ಹನುಮಂತ
ಎಂದೂ ಬರೆದದ್ದು ಕಾಣೆ ಮಾ.ನ.ಹ. ರಾಜು ಅಂತ
ಥ್ರೋ ಬ್ಯಾಕ್
ಮ್ಯಾನೇಜರ್ ನೀಡಿದ ಸಮಸ್ಯೆಗೆ ಪರಿಹಾರ
ಇಂಜಿನಿಯರ್ ಕೊಡಬಾರದಾಗಿತ್ತು ಗುರುವಾರ
ಸೂಕ್ತವಾಗಿದ್ದರೂ ವಾಪಸ್ ಬಂತು ರೀಬೌಂಡು
ಯೋಚಿಸಲು ತಿಳಿದುಬಂತು ಯಾಕೆಂದು
ಅಂದು ಮ್ಯಾನೇಜರ್‌ಗೆ ಥ್ರೋ ಬ್ಯಾಕ್ ಥರ್ಸ್ಡೇ ಆಚಾರ
ಮೂರು
ರುಕ್ಮಿಣಿಗೆ ಎಷ್ಟಿತ್ತು ಗೊತ್ತೇ ಮುತುವರ್ಜಿ
ಪತಿದೇವ ಕೃಷ್ಣನ ತೂಕ ಕುರಿತು ಕಾಳಜಿ
ತಂದಾಗ ಸುದಾಮ ಖಾರದವಲಕ್ಕಿ
ಕೃಷ್ಣ ತಿಂದದ್ದು ಎರಡೇ ಹಿಡಿ ಮುಕ್ಕಿ
ಮೂರನೇ ಹಿಡಿಗೇ ಬಸ್ ಕರೋ ಸರ್ ಜೀ.
ಲಾಕ್ ಡೌನ್ ಅಲೆಮಾರಿ
ಕೆಲವರು ಅಲೆಮಾರಿ ಜನಾಂಗ
ಮನೆಯ ಹೊರಗೇ ಪಟ್ಟಾಂಗ
ಈಗ "ಅಲ್ಲಿದೆ ನಮ್ಮ ಮನೆ
ಇಲ್ಲಿಗೆ ಬಂದೆವು ಸುಮ್ಮನೆ"
ಎಂದು ದಾಸರ ರಾಗ ಹಾಡುತ್ತಿರುವರೀಗ!
ಕಳಪೆ ಕಿಟ್ಟು
ಯಾವಾಗ ಹೋದ ಭಾರತ ಬಿಟ್ಟು
ನಮ್ಮ ಕಿಟ್ಟು ಚೈನಾಗೆ, ಮಾನಗೆಟ್ಟು!
ಇಲ್ಲಿ ಕನಕಪುರದಲ್ಲಿದ್ದಾಗಲೂ
ಮಾರುತ್ತಿದ್ದದ್ದು ಕಳಪೆ ಮಾಲು
ಈಗಂತೂ ಹೆಡ್ಲೈನ್ ನ್ಯೂಸ್ "ಕಳಪೆ ಚೈನಾ ಕಿಟ್ಟು"
ಡೌನ್ ಡೌನ್
ಅದು ಡೌನು ಇದು ಡೌನು
ಲಾಕ್ ಡೌನು ಸೀಲ್ ಡೌನು
ಬರಲಿದೆಯೋ ಏನೇನು
ಚಿಂತಿಸೆನು ನಾನಿನ್ನು
ಏನು ಫಲ, ಲೋಕವೇ ಆದಾಗ ಅಪ್ ಸೈಡ್ ಡೌನು!!
ಏಕಲವ್ಯನ ಬೆಟ್
ಅರ್ಜುನನ ಜೊತೆ ಪಂಥ
ಏನು ಸುಮ್ಮನೇ ಬಂತಾ
ಗುರುಗಳು ಬೇರೆ
ಶಿಷ್ಯನ ಪರವಾಗಿದಾರೆ
ಏಕಲವ್ಯ ಪಾಪ ಕಟ್ಟಿ ಬೆಟ್ ಸೋತ
ಭಾಗ್ಯ
ಹಿಂದಿಯಲ್ಲಿ "ಭಾಗ್ಯವಾನ್"
ನಮ್ಮ ಕನ್ನಡದಲ್ಲಿ ಭಾಗ್ಯವಂತ
ಯೋಚಿಸ್ತಾ ಇದ್ದೆ ಹಾಗೇ
ಹೀಗೆ ಯಾಕೆ ಅಂತ
"ಭಾಗ್ಯವಾನರ ಪಾದಗಳಿಗೆ ನಮಸ್ಕಾರ"
ಎಂದಾಗ ಭಾಗ್ಯದೊಂದಿಗೆ ಬರುವ ಜೀವಪ್ರಕಾರ
ನೋಡಿಯೇ ಬದಲಾಯಿಸಿದ ಒಬ್ಬ ಬುದ್ಧಿವಂತ
ಬಂಗಾರದ ಮನುಷ್ಯ
ಅರ್ಥ್ ಡೇ ಅಂತ "ಬಂಗಾರದ ಮನುಷ್ಯ"
ಚಿತ್ರ ನೋಡಲು ಕುಳಿತ ನಮ್ಮ ವಿಶ್ವ ರಾಜ್ ಕುಮಾರ್ ರೈಲಿಂದ ಇಳಿದು ಆಹಾಹಾ ಅಂತ ಏಕಾಕಿ ಹಾಡಿ ಕುಣಿದು ಯಾಕೆ ಜನರೇ ಇಲ್ಲ ಲಾಕ್ ಡೌನ್ ಇತ್ತಾ, ಏನು ವಿಷ್ಯ?
ತಾರಸಿಕ
ತಾರಸಿಯಲ್ಲೇ ಹೂವು ಕಾಯಿ ಹಲವು ಹತ್ತು
ಬೆಳೆದುಕೊಳ್ಳುವರಲ್ಲ ಯಾಪಾಟಿ ಪಾಟ್ ಇಟ್ಟು ಇರಬಹುದಾ ಇವರ ಕೈಬೆರಳು ಹಸಿರು ತಾರಸಿಕರೆಂದೇ ಇವರಿಗೆ ಇಡೋಣ ಹೆಸರು ತಾರಸಿಕ ಕೈನ ಉದ್ಯಾನವೇ ತ್ರೀಡೀ ಹೊಲಗದ್ದೆ ಸಂಪತ್ತು
ಕೊರೋನಾ ತೊಂದ್ರೆ
ಇದು ಹೇಗಿದೆಯಪ್ಪಾ ಅಂದ್ರೆ
ಈ ಕೊರೊನಾ ತೊಂದ್ರೆ ಯುದ್ಧ ನಡೀತಿದ್ದಾಗ ಕುರುಕ್ಷೇತ್ರ ಏನಾಗ್ತಿದೆ ಅಂತ ಸಂಜಯನ ಹತ್ರ ಕೇಳಿ ತಿಳ್ಕೋತಿದ್ದ ಧೃತರಾಷ್ಟ್ರ ರಾಜ ನಂಬಿಕೊಂಡು ಪ್ರತೀ ಸಂಜಯ ಉವಾಚ ಮನೆಯಲ್ಲಿ ಕುಳಿತಿದ್ದೇವೆ ನಾವೂ ಕೂಡಾ ಕುರುಪಿತೃವಿನಂತೆ (ಅವನೇನೋ ಕುರುಡ) ಟೀವೀ ಉವಾಚ ಮೀಮ್ ಉವಾಚ ಅವರಿವರ ಉಚ್ಚನೀಚವಾಚ್ಯ ಉವಾಚ ಎಲ್ಲವನ್ನೂ ಕೇಳುತ್ತಾ ಉತ್ಸುಕರಾಗಿ ಕೂಗಿ ನಾವೂ ಯುದ್ಧದಲ್ಲಿ ಆಗುತ್ತಿದ್ದೇವೇನೋ ಭಾಗಿ ಎಂಬಂತೆ ಝಳಪಿಸುತ್ತಾ ಮಾತುಗಳ ಕತ್ತಿ ಪಡೆಯುತ್ತಿದ್ದೇವೆ ಒಂದಿಷ್ಟು ಸಮರತೃಪ್ತಿ ಅಷ್ಟರಲ್ಲಿ ಕೂಗುತ್ತದೆ ಹಸಿವೆಂದು ಹೊಟ್ಟೆ ಮೇಲೆದ್ದು ನೋಡಿದರೆ ಇವತ್ತೂ ಉಪ್ಪಿಟ್ಟೆ!
ಇಬ್ಬರು ಮೆಕಾನಿಕ್ಸ್
|
ಮಾಡ್ಸೋಕೆ ಕಾರ್ ರಿಪೇರಿ
ಒಬ್ಬನ ಹೆಸರು ಕ್ಲಾಸಿಕಲ್
ಇನ್ನೊಬ್ಬ ಕ್ವಾಂಟಂ ಅಂತೆ ರೀ
ಊಟಮಾಡಲು ಹೊರಟ ಕ್ಲಾಸಿಕಲ್
ಕೆಲಸವನ್ನು ಅರ್ಧದಲ್ಲೇ ಬಿಟ್ಟು
ಕ್ವಾಂಟಂ ಬಹಳ ಸ್ಟೈಲಾಗಿ.ಕೇಳಿದನು
ತರಿಸಿಕೊಡಿ ಊಟದ ಪ್ಯಾಕೆಟ್ಟು
- ಸಿ ಪಿ ರವಿಕುಮಾರ್
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ