ನಾನೂ ಹಕ್ಕಿ

(ಮಕ್ಕಳಪದ್ಯ)

ನಾನೂ ಹಕ್ಕಿ

Photo of Boy Looking Up to the Drone

ನಾನೂ ಹಕ್ಕಿ
ರೆಕ್ಕೆಯ ಬಿಚ್ಚಿ
ಹಾರುತ್ತಿರುವೆನು ಬಾನಲ್ಲಿ
ಅತ್ತಿಂದಿತ್ತ
ಅಲೆಯುವ ಚಿತ್ತ
ಊರು, ಕೇರಿ, ಕಾನನ,ಹಳ್ಳಿ!

ನಗುವಿರಿ ಏಕೆ
ಕೈಗಳ ರೆಕ್ಕೆ
ಎಬ್ಬಿಸಲಾರದೆ ಸುಳಿಗಾಳಿ?
ಓಡಿಸಿ ತಲೆಯ
ಗಳಿಸಿ ಐಡಿಯಾ
ಗುಟ್ಟು ನಿಮಗೂ ಹೇಳುವೆ ತಾಳಿ!

ಕಾಗದ ಪಿನ್ನು
ಕಡ್ಡಿ ತುಂಡನ್ನು
ಸೇರಿಸಿದರೆ ತಿರುಗುವ ರಾಟೆ
ತಲೆಯ ಮೇಲ್ಗಡೆ
ಡ್ರೋನಿನ ಹಾಗೆ
ಹಚ್ಚಿಕೊಂಡು ಇಗೋ ನಾ ಹೊರಟೆ!

ನಾನೂ ಡ್ರೋನು
ಹಾರಾಡುವೆನು
ಬರಿದಾಗಿವೆ ಕೈಗಳು ನೋಡಿ
ಕೊಡುವಳು ಅಮ್ಮ
ಕೊಬ್ಬರಿ  ಬೆಲ್ಲ
ತಿನ್ನುತ ಹಾರುವೆ ಬಾನಾಡಿ

-- ಸಿ.ಪಿ. ರವಿಕುಮಾರ್

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)