ನೇಯ್ಗೆಯ ಹಾಡು

ನೇಯ್ಗೆಯ ಹಾಡು 


ಮೂಲ ಹಿಂದಿ ಕವಿತೆ: ಕೇದಾರನಾಥ್ ಸಿಂಗ್ 
ಕನ್ನಡ ಅನುವಾದ: ಸಿ. ಪಿ. ರವಿಕುಮಾರ್ 

ಎದ್ದೇಳಿ ಮಲಗಿರುವ ದಾರಗಳೇ ಎದ್ದೇಳಿ 
ಎದ್ದೇಳಿ, ಚಕಚಕಿಸುತ್ತಿದೆ ಆಗಲೇ ದರ್ಜಿಯ ಯಂತ್ರ 
ಎದ್ದೇಳಿ, ಕೆರೆಯ ಕಟ್ಟೆಗೆ ಬಂದಾಗಿದೆ ಮಡಿವಾಳ
ಎದ್ದೇಳಿ, ಶಾಲೆಗೆ ಹೊರಟುನಿಂತಿದ್ದಾರೆ  ಮಕ್ಕಳು ಬೆತ್ತಲೆ
ಎದ್ದೇಳಿ, ನನ್ನ ಬೆಳಗಿನ ದಾರಗಳೇ  
ಮತ್ತು ನನ್ನ ಸಂಜೆಯ ದಾರಗಳೇ ಎದ್ದೇಳಿ 

ಎದ್ದೇಳಿ, ಎಲ್ಲೋ ಸಿಕ್ಕಿಹಾಕಿಕೊಳ್ಳುತ್ತಿದೆ ಎಳೆ 
ಎದ್ದೇಳಿ, ಗಂಟಾಗಿದೆ ಎಲ್ಲೋ ಏನೋ 
ಎದ್ದೇಳಿ, ಎಳೆದು ಕಟ್ಟಲು 
ಕೊಂಚ ಕಡಿಮೆಯಾಗಿದೆ ಯಂತ್ರದಲ್ಲಿ ಸೂತ್ರ

ಏಳಿ 
ಅಂಗಿಗಳಲ್ಲಿ
ಕಾಲುಚೀಲಗಳಲ್ಲಿ
ಜೋಳಿಗೆಗಳಲ್ಲಿ
ಹಾಸಿಗೆಗಳಲ್ಲಿ
ಅದುಮಿಟ್ಟ ದಾರಗಳೇ ಏಳಿ
ಏಳಿ, ಏಕೆಂದರೆ ಏನೋ ತಪ್ಪಾಗಿಹೋಗಿದೆ
ಏಳಿ, ಏಕೆಂದರೆ  ನೇಯಬೇಕಾಗಿದೆ
ಈ ಪ್ರಪಂಚದ ಎಲ್ಲಾ ಬಟ್ಟೆ ಮತ್ತೆ ಹೊಸದಾಗಿ
ಏಳಿ ನನ್ನ ತುಂಡಾದ ದಾರಗಳೇ
ನನ್ನ ಗೋಜಲಾದ ದಾರಗಳೇ ಏಳಿ

ಏಳಿ
ಏಕೆಂದರೆ ಆಗುತ್ತಿದೆ ನೇಯ್ಗೆಯ ಸಮಯ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)