ಶ್ರಾವಣ ಸುರಿಸುವ ಮಳೆಯ ಹನಿ

ಮೂಲ - ಮೀರಾ ಬಾಯಿ 
ಕನ್ನಡ ಭಾವಾನುವಾದ - ಸಿ. ಪಿ. ರವಿಕುಮಾರ್ 

Selective Focus Photo of Obalte Green-leafed Plants during Rain

(ಶ್ರಾವಣದ ಮಳೆಯ ಹನಿಗಳು ಮೈಮೇಲೆ ಬಿದ್ದಾಗ ಮೀರಾಬಾಯಿಯ ಮನಸ್ಸು ಕೃಷ್ಣನ ಸ್ಮರಣೆಯಿಂದ ತೊಯ್ಯುತ್ತದೆ.  ಬೇಸಗೆಯ ನಂತರ ತಂಗಾಳಿ ಮಳೆಯನ್ನು ತಂದ ಶ್ರಾವಣ ಅವಳಲ್ಲಿ ಉಲ್ಲಾಸ ತುಂಬುತ್ತದೆ. ಅವಳ ಮನಸ್ಸು ಗಿರಿಧರ ನಾಗರನನ್ನು ನೆನೆದು ಆನಂದದಿಂದ ತುಂಬುತ್ತದೆ.)


ನೆನೆಸುತ್ತಿದೆ ಮನಮೋಹನನ 
ಶ್ರಾವಣ ಸುರಿಸುವ ಮಳೆಯ ಹನಿ 

ಶ್ರಾವಣ ತಂದಿತು  ಹರ್ಷೋಲ್ಲಾಸ  
ಕೇಳಿದಂತೆ ಹರಿ ಗೆಜ್ಜೆ ದನಿ 

ಕವಿದು ಮುಗಿದು ನಾಲ್ಕೂ ದೆಸೆಯಿಂದ 
ಗುಡುಗುಮಿಂಚು ನಡುಗುವ ಅವನಿ

ಪುಟ್ಟಪುಟ್ಟ ಹನಿಗಳ ಸುರಿಸುವ ಮೋಡ 
ಶೀತಲ ಪವನ ಜೀವ ಸಂಚಯಿನಿ  
  
ಪ್ರಭು ಗಿರಿಧರ ನಾಗರನನು ನೆನೆದು 
ಮಂಗಳ ಹಾಡುವ ಮೀರಾ ಉನ್ಮಾದಿನಿ 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)