ಶಕ್ತಿ ಮತ್ತು ಕ್ಷಮೆ
ರಾಮಧಾರಿ ಸಿಂಗ್ 'ದಿನಕರ್' ಅವರ 'ಶಕ್ತಿ ಮತ್ತು ಕ್ಷಮೆ' ಎಂಬ ಪ್ರಸಿದ್ಧ ಕವಿತೆಯ ಅನುವಾದವನ್ನು ಕೆಳಗೆ ಕೊಟ್ಟಿದ್ದೇನೆ. ದಿನಕರ್ ಅವರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದವರು. ಬ್ರಿಟಿಷ್ ಸರಕಾರದ ವಿರುದ್ಧ ಅವರು ಜನರನ್ನು ರೊಚ್ಚಿಗೆಬ್ಬಿಸುವ ಕವಿತೆಗಳನ್ನು ಬರೆದವರು. ಗಾಂಧೀಜಿಯ ಅಹಿಂಸಾಮಾರ್ಗವನ್ನು ಕುರಿತು ಯುವಕವಿಗೆ ಅನುಮಾನಗಳಿವೆ. ಯಾರ ತೋಳಿನಲ್ಲಿ ಶಕ್ತಿ ಇಲ್ಲವೋ ಅವರ ವಿನಯ, ತ್ಯಾಗ, ಕ್ಷಮೆಗಳನ್ನು ಜನರು ಹೇಡಿತನವೆಂದೇ ಭಾವಿಸುತ್ತಾರೆ ಎನ್ನುವುದು ಕವಿಯ ವಾದ. ಕವಿತೆಯಲ್ಲಿ ಕವಿ ಯುಧಿಷ್ಥಿರನನ್ನು ಸಂಬೋಧಿಸುತ್ತಾನೆ. ಯುಧಿಷ್ಥಿರ ದುರ್ಯೋಧನನನ್ನೂ ಕ್ಷಮಿಸುವ ಸ್ವಭಾವದವನು. ಅವನನ್ನು ಸುಯೋಧನ ಎಂದು ಕರೆಯುತ್ತಿದ್ದವನು. ಆದರೆ ಅವನ ತಾಳ್ಮೆ ಅವನಿಗೆ ಕೊಟ್ಟ ಪ್ರತಿಫಲವೇನು ಎಂದು ಕವಿ ಮೂದಲಿಸುತ್ತಾನೆ. ರಾಮಾಯಣದ ಒಂದು ಕಥೆಯನ್ನು ಕವಿ ನೆನೆಯುತ್ತಾನೆ. ಕಡಲನ್ನು ದಾಟಬೇಕಾದಾಗ ರಾಮನು ಮೂರು ದಿವಸಗಳ ಕಾಲ "ಶಾಂತನಾಗು, ಸೇತುವೆಯನ್ನು ಕಟ್ಟಲು ಅವಕಾಶ ಮಾಡಿಕೊಡು" ಎಂದು ಬೇಡಿಕೊಂಡನಂತೆ. ಸಮುದ್ರವು ರಾಮನ ಪ್ರಾರ್ಥನೆಗೆ ಓಗೊಡದೆ ಭೋರ್ಗರೆಯುತ್ತಲೇ ಇತ್ತು. ಆಗ ರಾಮನ ಬಾಣವೇ ಮಾತಾಡಿತು. ತೋಳ್ಬಲಕ್ಕೆ ಮಣಿದ ಸಾಗರ ರಾಮನ ಕಾಲಿಗೆ ಬಂದು ನಮಸ್ಕರಿಸಿ ಸೇತುವೆ ಕಟ್ಟಲು ಅನುವು ಮಾಡಿಕೊಟ್ಟಿತು. ಮೂಲ ಕವಿತೆ - ರಾಮಧಾರಿ ಸಿಂಗ್ ದಿನಕರ್ ಕನ್ನಡ ಅನುವಾದ - ಸಿ. ಪಿ. ರವಿಕುಮಾರ್ ಕ್ಷಮೆ...