ಪೋಸ್ಟ್‌ಗಳು

telephone ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಟೆಲಿಫೋನ್

ಇಮೇಜ್
ಮೂಲ: ಮೆಲ್ ಮೆಕ್ ಮಾಒನ್ ಕನ್ನಡ ಅನುವಾದ: ಸಿ. ಪಿ. ರವಿಕುಮಾರ್ ೧ ಬೆಳ್ಳಗೆ, ಬೃಹದಾಕಾರ, ಆನೆಯೊಂದು ನಿಲ್ಲಬಹುದಾದಷ್ಟು ದೊಡ್ಡ ಸಂಖ್ಯೆಗಳುಳ್ಳ ಅಪ್ಪನ ಕಡೆಯ ಫೋನ್. ಅದನ್ನು ಅವನು ಬಳಸಿದ್ದು ಅಷ್ಟಕ್ಕಷ್ಟೇ ತಾನು ಮಾತಾಡಬೇಕಾದಾಗ ಮನೆಗೇ ಹೋಗಿ ಮಾತಾಡುವುದು ಅವನ ಪದ್ಧತಿ. ಯಾರೋ ಫೋನ್ ಮಾಡಿದಾಗ ಟಿವಿ ಪರದೆ ಮೇಲೆ ಕುದುರೆ ರೇಸ್ ನೋಡುತ್ತಾ ಕುಳಿತಿರುತ್ತಿದ್ದ.  ಅಥವಾ ಹೊರಗೆ ಹೊರಡಲು ನಡೆಸುತ್ತಿದ್ದ ಸಿದ್ಧತೆ. ಫ್ರಾನ್ಸ್ ನಲ್ಲಿ ಒಂದು ಸಂಜೆ  ಇದೇ ಫೋನ್ ಬಳಸಿ ಒಮ್ಮೆಲೇ ಕರೆ ಮಾಡಿದ ಸಾಯುವ ಮೂರು ದಿವಸಗಳ ಮುನ್ನ. ನಾನು ಬೇಸಗೆ ರಜಕ್ಕೆ ಬಂದಾಗ ಎಲ್ಲೆಲ್ಲಿ ಹೋಗಬಹುದು ಎಂದೆಲ್ಲಾ ಮಾತಾಡಿದ, ಬಚ್ಚಿಡಲಾಗದೆ ಉತ್ಸಾಹವನ್ನ. ಈಗ ಅದೇ ಫೋನಿನ ರಿಸೀವರ್ ಹಿಡಿದು ಕೇಳಿಸಿಕೊಂಡಾಗ: ಸ್ಮಶಾನ ಮೌನ. ಅವನು ಕೇಳಿಸಿಕೊಳ್ಳುತ್ತಿರಬಹುದೆಂಬ ಕಲ್ಪನಾಯಾನ.  ನಾನು ಕಲ್ಪಿಸಿಕೊಳ್ಳುತ್ತೇನೆ ಸಂಖ್ಯೆಗಳ ಸರಣಿ. ನೀವು ಕರೆ ಮಾಡಿದ ವ್ಯಕ್ತಿ ವ್ಯಾಪ್ತಿಯ ಹೊರಗಿದ್ದಾರೆ ಎನ್ನುತ್ತದೆ ಅಶರೀರವಾಣಿ. ೨ ಎರಡು ನಿಮಿಷಕ್ಕಿಂತಲೂ ಹೆಚ್ಚು ಮಾತಾಡುವುದಿದ್ದರೆ  ಪತ್ರ ಬರೆಯುವುದೇ ಸರಿ ಎಂದು ಸಿಡಿಮಿಡಿಗೊಳ್ಳುತ್ತಿದ್ದ. ನಾವು ಹದಿಹರೆಯದಲ್ಲಿದ್ದಾಗ ಅವನ ಸಿಡಿಮಿಡಿಗೆ ಹೆದರಿ ಜಗಳವೇತಕ್ಕೆ ವ್ಯರ್ಥ ಎಂದು ನಮ್ಮ ಫೋನ್ ಕರೆಗಳು  ಎಷ್ಟು ಬೇಕೋ ಅಷ್ಟು, ಸಂಕ್ಷಿಪ್ತ. ಈಗ ಅವನೊಂದಿಗೆ ಮಾತಾಡಬೇಕೆಂಬ ಹಂಬಲವಾದಾಗ ಟೆಲಿಪೋನ್ ಕಡೆಗೆ ದಿಟ್ಟಿಸಿ ನೋಡಿ...

ಟೆಲಿಫೋನ್ ಬೂತ್ ಸ್ವಗತ

ಇಮೇಜ್
  ಹಿಂದೊಮ್ಮೆ  ಹೊರಗೆ ಕಾಯುತ್ತಿದ್ದರು ಜನ ತಮ್ಮ ಸರದಿಗೆ ನೂರೆಂಟು ಕಾರಣಗಳಿದ್ದವು ಒಳಗೆ ಬಂದವರಿಗೆ. ಅವಸರವಿಲ್ಲದೆ ಪ್ರೇಮಾಲಾಪದಲ್ಲಿ ತೊಡಗಿದ ಯುವಕ ಹೊರಗೆ ನಿಂತವರ ಹಣೆಯಲ್ಲಿ ಕಾಣುತ್ತಿದೆ ತವಕ. ತಡವಾಗಿ ಬರುತ್ತೇನೆ ಕಚೇರಿಯಲ್ಲಿ ಕೆಲಸ ಹೆಚ್ಚಿದೆ ಎಂದು ಗೆಳತಿಯ ಜೊತೆ ಹೊರಟವನದು ಕೆಚ್ಚೆದೆ. ನಿಮ್ಮ ಹೆಂಡತಿಯನ್ನು ಅಪಹರಿಸಿದ್ದೇನೆ, ಬ್ರಿಜ್ ಬಳಿಗೆ ತಂದರೆ ಐದು ಸಾವಿರ ಪೌಂಡ್ ಬಿಡುಗಡೆ ನಿಮ್ಮವಳಿಗೆ ಚೌಕಾಸಿ ಇಲ್ಲ! ತಡವಾದರೆ ಮಧ್ಯರಾತ್ರಿಗೆ ಒಂದೇ ಘಳಿಗೆ ಗುಂಡು ಉಗುಳುವುದು ನನ್ನ ಬಂದೂಕಿನ ನಳಿಗೆ! ನಾನೇ ಇಟ್ಟುಕೊಳ್ಳಬೇಕೇ?!  ಏನಾಗಿದೆ ನಿಮ್ಮ ತಲೆಗೆ! (ದೊಡ್ಡ ಮೀನು ಬಿತ್ತೆಂದುಕೊಂಡಿದ್ದೆ ಬಲೆಗೆ! ಇದೊಳ್ಳೆ ಸಿಕ್ಕಿಕೊಂಡೆ ಶಾರ್ಕ್ ಹಲ್ಗೆ) ಐನೂರು ಪೌಂಡ್ ಆದೀತೆ? ಹೋಗಲಿ ಐವತ್ತು? ಏನೆಂದಿರಿ ನಾನೇ ಕೊಡಬೇಕೆ ಮತ್ತೂ! ಅಮ್ಮಾ ನಾನಿರಲಾರೆ ಇವನ ಜೊತೆ ಇನ್ನು. ತಪ್ಪು ಮಾಡಿದೆ ಮೀರಿ ನಿನ್ನ ಮಾತನ್ನು. ಪ್ರತಿದಿನವೂ ಕುಡಿದು ಬರುತ್ತಾನೆ ಮನೆಗೆ ಕೇಳಿದರೆ ಕೋಪ, ವಾಗ್ವಾದ, ಕೊನೆಗೆ ನಾಚಿಕೆಗೆಟ್ಟವನು ಕೆನ್ನೆಗೆ ಹೊಡೆದ ನನಗೆ. ನಾನು ನಗುತ್ತಿದ್ದೆ ಅಳುತ್ತಿದ್ದೆ ಇದನ್ನೆಲ್ಲ ಕೇಳುತ್ತಾ. ಅದೆಷ್ಟು ರಹಸ್ಯಗಳು ನನ್ನಲ್ಲಿ ಅಡಗಿವೆ ಗೊತ್ತಾ! ಎಷ್ಟು ಜನ ಮರೆತು ಹೋಗುತ್ತಿದ್ದರು ತಮ್ಮ ಕೊಡೆ! ಈಗ ಯಾರೂ ಸುಳಿಯುವುದಿಲ್ಲ ನನ್ನ ಕಡೆ. ಎಲ್ಲರ ಕೈಯಲ್ಲೂ ಈಗ ಸಂಚಾರಿ ಫೋನು ನಿರರ್ಥಕವಾಗಿ ನಿಂತಿದ್ದೇನೆ ನಾನು. ಯಾರಿಗೋ ಹೊಳೆಯಿತು ...