ಒಂದು ಕಡುಬಿನ ಕಥೆ
ಅಮೆರಿಕನ್ನರು ಕಡುಬಿಗೆ ಪೈ ಎನ್ನುತ್ತಾರೆ. ಉದಾಹರಣೆಗೆ ಆಪಲ್ ಪೈ ಎಂದರೆ ಸೇಬಿನ ಹಣ್ಣಿನ ರಸಾಯನ ಹೂರಣವಾಗಿಟ್ಟು ಮಾಡಿದ ಕಡುಬು. ಇದೇ ರೀತಿ ಪಂಪ್ಕಿನ್ ಪೈ ಎಂದರೆ ಸಿಹಿಕುಂಬಳಕಾಯಿ ಕಡುಬು. ಅಮೆರಿಕಾದಲ್ಲಿ ವಾಸವಾಗಿದ್ದ ಕನ್ನಡಿಗರೊಬ್ಬರು ಒಮ್ಮೆ ಒಂದು ಜಾತ್ರೆಗೆ ಹೋಗಿದ್ದರು. ಅಮೆರಿಕಾದಲ್ಲಿ ಜಾತ್ರೆಗೆ ಫೇರ್ ಎನ್ನುತ್ತಾರೆ. ಹೌದು, ಫೇರ್ ಅಂಡ್ ಲವ್ಲಿ ಇದೆಯಲ್ಲ, ಅದೇ ಫೇರ್. ಸ್ಪೆಲಿಂಗ್ ಕೂಡಾ ಅದೇ. ಕೆಲವು ಕಡೆ ಕಾರ್ನಿವಾಲ್ ಎನ್ನುತ್ತಾರೆ. ಅಲ್ಲಿ ಸರ್ಕಸ್ ಮಾದರಿಯ ಪ್ರದರ್ಶನಗಳೂ ಇರುತ್ತವೆ. ಹಳ್ಳಿಗಳಲ್ಲಿ ನಡೆಸುವ ಜಾತ್ರೆಗಳಲ್ಲಿ ಹಸು, ಹಂದಿ ಇಂಥವುಗಳ ಮಾರಾಟ ನಡೆಯುತ್ತದೆ. ಇದಲ್ಲದೆ ಶೂಟಿಂಗ್ ಇತ್ಯಾದಿ ಆಟಗಳು ಕೂಡಾ ಇರುತ್ತವೆ. ಶೂಟಿಂಗ್ ಎಂದರೆ ಹೆದರಬೇಡಿ. ಆಟದ ಪಿಸ್ತೂಲು ಬಳಸಿ ನೀವು ಬಲೂನಿಗೆ ಗುರಿ ಇಟ್ಟು ಹೊಡೆದು ಅದನ್ನು ಒಡೆದರೆ ನಿಮಗೆ ಏನಾದರೂ ಬಹುಮಾನ ಸಿಕ್ಕುತ್ತದೆ. ಆದರೆ ಬಹಳ ಸಲ ಏನೂ ಸಿಕ್ಕದ ಅವಮಾನವೇ ಸಿಕ್ಕುತ್ತದೆ. ಏನು ಮಾಡುವುದು, ಗುರಿ ಇಲ್ಲದ ಜನರು ನಾವು! ಅರ್ಜುನನು ನೀರಿನಲ್ಲಿ ಕಾಣುವ ಪ್ರತಿಬಿಂಬ ನೋಡಿಯೇ ಹಕ್ಕಿಯ ಕಣ್ಣಿಗೆ ಗುರಿ ಇಟ್ಟು ಬಾಣ ಬಿಟ್ಟನಂತೆ. ಇಂಥ ಯಾವುದೇ ಆಟವನ್ನು ಒಲಿಂಪಿಕ್ಸ್ ಪಂದ್ಯಗಳಲ್ಲಿ ನೋಡಿರುವಿರಾ? ನಮ್ಮ ಹಳೆಯ ಸಂಪ್ರದಾಯಗಳನ್ನು ಮರೆತ ಗುರಿ ಇಲ್ಲದ ಬದುಕು ನಮ್ಮದು! ಬುಗುರಿಯನ್ನೇ ಆಡದ ಮಕ್ಕಳು ಗುರಿ ಹೇಗೆ ಸಾಧಿಸಿಯಾರು? ಇರಲಿ, ಅದೆ...