ನೀರ್ ರಸ ಹರಟೆ ಎಲ್ಲಾ ಕಡೆಗೂ ನೀರೇ ನೀರು ಎಂದು ಎಲ್ಲರೂ ಕಣ್ಣೀರು ಹಾಕುತ್ತಾ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತಿದೆ. ನೀರಿಗೆ ಏನಾದರೂ ಬೆರೆಸಿದರೆ ಅದು ವಸ್ತುವಿಶೇಷಗಳನ್ನು ನೀಡಬಲ್ಲದು. ಪ ಪ್ಲಸ್ ನೀರ್ ಈಕ್ವಲ್ಸ್ ಪನೀರ್ ಆದಾಗ ನಿಮಗೆ ಪನೀರ್ ಕೋಫ್ತಾ ನೆನಪಾಗಿ ಬಾಯಲ್ಲಿ ನೀರೂರಿ ಪರಿಸ್ಥಿತಿ ಇನ್ನಷ್ಟು ಕೆಡುವುದು ಎಂದು ನೀವು ಎಸ್ ಪ್ಲಸ್ ನೀರ್ ಈಕ್ವಲ್ಸ್ ಸ್ನೀರ್ ಮಾಡುವುದು ಬೇಡ. ಈಗಾಗಲೇ ಮಠದ ಸೀರ್ ಒಬ್ಬರ ಬಗ್ಗೆ ಟಿವಿ ವಾಹಿನಿಗಳು ಸಾಕಷ್ಟು ಸ್ನೀರ್ ಮಾಡಿ ಮುಖದಲ್ಲಿ ನೀರಿಳಿಸಿವೆ. ವಾಹಿನಿಗಳ ಈ ಸ್ಲೋಗ-ನೀರಿನಿಂದ ನೊಂದು ಕೆಲವರು ಕಣ್ಣೀರು ಹರಿಸಿ ಕಡಲಲ್ಲದಿದ್ದರೂ ಕೆರೆಕೋಡಿಗಳಂತೂ ಉಂಟಾಗಿವೆ. ಇನ್ನೂ ಕೆಲವರು ವಾಹಿನಿಗಳು ಪರಿಸ್ಥಿತಿಯನ್ನು ಕರುಣಾಜನಕ ಎಂದು ಕರೆಯುವ ಬದಲು ವರುಣಾಜನಕ ಎಂದು ತಪ್ಪಾಗಿ ಪ್ರಚಾರ ಮಾಡಿದ್ದರಿಂದಲೇ ಈ ರಣರಕ್ಕಸ ರುದ್ರ ರೌರವ ಮಳೆಗೆ ರೀಸನ್ ಎಂದೂ ಲಾಜಿಕ್ ಹಾಕುತ್ತಿದ್ದಾರೆ. ಪಯೋನಿಧಿ ಎನ್ನುವಾಗ ಪಯೋ ಅಂದರೆ ಹಾಲು ಎಂದಲ್ಲವೇ? ಪಾಯಸ ಎಂಬ ಪದವೂ ಈ pious ಶಬ್ದದಿಂದಲೇ ಹುಟ್ಟಿದ್ದೆಂದು ಓದಿದ್ದು ನೆನಪು. ಇರಲಿ, ಪಯೋ ಪ್ಲಸ್ ನೀರು ಈಕ್ವಲ್ಸ್ ನಿಧಿ ಎಂಬ ಕೆಮಿಕಲ್ ಸಮೀಕರಣವನ್ನು ಮೊದಲು ಮಾಡಿದ ಪಯೋನೀರ್ ಯಾರು, ಹೇಳಿ! ಹಾಲಿಗೆ ನೀರು ಬೆರೆಸಿ ಮಾರಬಹುದೆಂಬ ಕಲ್ಪನೆಯನ್ನು ನೋಡಿಯೂ ಹಾಲಲ್ಲಿ ನೀರನ್ನು ಮೊದಲಾರು ಕಂಡವರು ಎನ್ನದೆ ಡಿವಿಜಿ ಅವರು...