ಪೋಸ್ಟ್‌ಗಳು

husband ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಗೋಲಿ ಆಟ

ಇಮೇಜ್
  ಜನವರಿಯ ಒಂದು ಸಂಜೆ. ಮೈ ಮರಗಟ್ಟುವ ಚಳಿ. ಅಮ್ಮ ನನ್ನ ಅತ್ತಿಗೆಯನ್ನು ಕರೆದು “ಎಲ್ಲರಿಗೂ ಶುಂಠಿ ಹಾಕಿ ಚಹಾ ಮಾಡಿಕೊಂಡು ಬಾ”ಎಂದಳು. ಅತ್ತಿಗೆ ಅಡುಗೆಕೋಣೆಗೆ ಹೊರಟರು. ಮದುವೆಯಾಗಿ ಕಳೆದ ವಾರ ನಮ್ಮ ಮನೆಗೆ ಕಾಲಿಟ್ಟಿದ್ದ ನನ್ನ ಹೆಂಡತಿ ಅವರನ್ನು ಹಿಂಬಾಲಿಸಿ ಹೋದಳು. ಸ್ವಲ್ಪ ಹೊತ್ತಿನ ನಂತರ ಇಬ್ಬರೂ ತಲೆಯ ಮೇಲೆ ಸೆರಗು ಹೊದ್ದು ಕೈಯಲ್ಲಿ ಟ್ರೇ ಹಿಡಿದು ಬಂದರು. ಹೊಗೆಯಾಡುವ ಚಹಾ ಜೊತೆಗೆ ತಿನ್ನಲು ಬಿಸ್ಕೆಟ್ ಇಟ್ಟುಕೊಂಡು ಎಲ್ಲರಿಗೂ ಸರಬರಾಜು ಮಾಡಿದರು. ಅಪ್ಪನಿಗೆ, ಅಮ್ಮನಿಗೆ, ಅಣ್ಣನಿಗೆ, ನನಗೆ, ತಂಗಿಗೆ. ನಂತರ ತಾವೂ ಚಹಾ ಕುಡಿಯಲು ಅಡುಗೆ ಮನೆಗೆ ಹೋದರು. ಅಪ್ಪ ಟಿವಿ ಮೇಲೆ ನ್ಯೂಸ್ ನೋಡುತ್ತಾ ಚಹಾ ಕುಡಿಯುತ್ತಿದ್ದರು. ಅಣ್ಣ ಮೊಬೈಲ್ ಮೇಲೆ ಏನೋ ನೋಡುತ್ತಿದ್ದ. ನಾನು ಟೇಬಲ್ ಮುಂದೆ ಕುಳಿತು ಒಂದು ಕವಿತೆಯ ಕೈಯನ್ನು ನಾಜೂಕಾಗಿ ಹಿಡಿದು  ನಡೆಸುವ ಹುನ್ನಾರದಲ್ಲಿದ್ದೆ. ಹೊರಗೆ ಮಕ್ಕಳು ಗೋಲಿ ಆಟ ಆಡುತ್ತಿದ್ದರು. ಅವರ ಗದ್ದಲ ನಮಗೆ ಕೇಳುತ್ತಿತ್ತು. ತಂಗಿ ಮತ್ತು ನನ್ನ ಹೆಂಡತಿ ಬಾಗಿಲಲ್ಲಿ  ಮಕ್ಕಳ ಆಟ ನೋಡುತ್ತಾ ನಿಂತರು. ಒಮ್ಮೆಲೇ ಅಮ್ಮನ ಉದ್ಗಾರ ಕೇಳಿಸಿತು. “ಅಯ್ಯೋ, ನೋಡಿ! ನಮ್ಮ ಸೊಸೆ ಮಕ್ಕಳ ಜೊತೆ ಸೇರಿಕೊಂಡು ಗೋಲಿ ಆಡ್ತಿದ್ದಾಳೆ!” ಅವಳ ಧ್ವನಿಯಲ್ಲಿ ನಗುವಿತ್ತು, ಒಂದು ಬಗೆಯ ಸಂತೋಷವಿತ್ತು. ಆದರೆ ನನ್ನ ಕಡೆ ನೋಡಿ “ನೋಡಿದವರು ಏನೆಂದುಕೊಂಡಾರು, ಹೊಸದಾಗಿ ಮನೆಗೆ ಬಂದ ಸೊಸೆ …” ಎಂದಾಗ ಅವಳನ್ನು ತಡೆ ಎನ್...