ಪೋಸ್ಟ್‌ಗಳು

smile ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಮೋನಾಲೀಸಾ ಸ್ವಗತ

ಇಮೇಜ್
  ಇದು ಪ್ರತಿದಿನದ ಹಾಡು ಇವರು ಬಂದು ನನ್ನನ್ನೇ ನೋಡುತ್ತಾ ನಿಲ್ಲುವುದು. ಏನಿದೆ ನನ್ನ ಮುಗುಳುನಗೆಯ ಹಿಂದೆ ಎಂದು ಚರ್ಚಿಸುವುದೇ ಒಂದು ಧಂಧೆ. ಲಿಯೋನಾರ್ಡೋ ಏನು ಅಡಗಿಸಿರಬಹುದು ಇವಳ ನಗೆಯಲ್ಲಿ ರಹಸ್ಯ ಸಂಕೇತ? ಎಂದು ಕೇಳುತ್ತಾನೆ  ದ ಡಾ ವಿಂಚಿ ಕೋಡ್ ಓದಿ  ಜಾಣನಾಗಿದ್ದಾನೆ ವಿಪರೀತ. ನನಗೆ ಸಾಕಾಗಿದೆ ಈ ನೂಕುನುಗ್ಗಲು ಮತ್ತು ಕಲಾವಿಮರ್ಶೆಯ ಮುಗ್ಗಲು. ಚಿತ್ರ ತೆಗೆಯುತ್ತದೆ ನನ್ನ ಕಣ್ಣಿನ ಹಿಂದೆ  ಅಡಗಿಸಿಟ್ಟ ಮೈಕ್ರೋಕ್ಯಾಮೆರಾ. ಎಲ್ಲ ಗಮನಿಸುತ್ತಾ ನಕ್ಕರೂ ನಗದಂತೆ  ನಗುವ ನನ್ನ ನಗೆ ಅಜರಾಮರ. ಚಿತ್ರ: ಜೆರಾರ್ಡ್ ಗ್ಲಕ್  ಚಿತಕವಿತೆ: ಸಿ. ಪಿ. ರವಿಕುಮಾರ್

ಸೋನಾ ಮೇಡಂ

 ಮೂಲ: ಗೌರವ್ ಪಾಂಡೆ (ಹಿಂದಿ) ಬಹಳ ಒಳ್ಳೆಯವರು ಸೋನಾ ಮೇಡಂ! ಸದಾ ಮುಗುಳ್ನಗುತ್ತ ಮುಗುಳ್ನಗೆಗೆ ಉಪಮೆ. ವಿದ್ಯಾರ್ಥಿಗಳ ಅಚ್ಚುಮೆಚ್ಚು ಅವರ ಸರಳತೆ ಅವರ ಆತ್ಮೀಯತೆ ಮತ್ತು ಸ್ನೇಹ ಸೂಸುವ ಮುಗುಳ್ನಗೆ. ನಿಮ್ಮ ಮುಗುಳ್ನಗೆಯ ರಹಸ್ಯ ಏನೆಂದು ಕೇಳುತ್ತಾರೆ ಸಹ ಅಧ್ಯಾಪಕರು. ಮುಗುಳ್ನಗೆಯ ಉತ್ತರ ನೀಡಿ  ಸುಮ್ಮನಾಗುತ್ತಾರೆ ಸೋನಾ ಮೇಡಂ! ಮಕ್ಕಳಿಗೆ ಪ್ರೀತಿಯಿಂದ ಕಲಿಸುತ್ರಾರೆ  ಸೋನಾ ಮೇಡಂ  ಎಂದೂ ಹೊಡೆದಿಲ್ಲ ಒಂದು ಏಟು. ಮನೆಗೆ ಮರಳುವಾಗ ಹೊಡೆತದ ವಿಷಯ ಯೋಚಿಸಿಯೇ  ನಡುಗುತ್ತಾರೆ ಸೋನಾ ಮೇಡಂ.