ಪೋಸ್ಟ್‌ಗಳು

Sufficient ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಬೇಕಾದಷ್ಟು

ಇಮೇಜ್
 ಬೇಕಾದಷ್ಟು ಮೂಲ: ಏಮಿ ಶ್ಮಿಟ್  ಅನುವಾದ: ಸಿ ಪಿ ರವಿಕುಮಾರ್ ಕೇಕ್ ತಯಾರಿಸಲು ಕಿತ್ತಳೆಯನ್ನು ಹೆರೆಯುವಾಗ ಒಂಟಿತನ ಬಾಧಿಸುವುದು ಸಾಧ್ಯವಿಲ್ಲ ಯಾರನ್ನೂ. ಮೆತ್ತನೆಯ ಸಿಪ್ಪೆಯನ್ನು ಉಜ್ಜಿದಾಗ ಮಣೆಗೆ  ಇಡೀ ಕೋಣೆಯನ್ನು ತುಂಬಿಕೊಳ್ಳುವುದು ಹಣ್ಣು. ಸುತ್ತಲೂ ಒಮ್ಮೆ ನೋಡಿಕೊಳ್ಳಿ: ಅಗತ್ಯಕ್ಕಿಂತಲೂ ಹೆಚ್ಚೇ ಇದೆ ನಿಮ್ಮಲ್ಲಿ ಎಲ್ಲಾ. ಅದು ಸದಾಕಾಲವೂ ಹಾಗೇ ಇತ್ತು, ಇದುವರೆಗೂ ಮನವರಿಕೆ ಆಗಿರಲಿಲ್ಲ.