ಪೋಸ್ಟ್‌ಗಳು

brother ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಗುರುತು

ಇಮೇಜ್
ಸಣ್ಣ ಊರಿನ ಶಾಲೆಯಲ್ಲಿ ಐಡಿ ಕಾರ್ಡ್ ನಿಜಕ್ಕೂ ಬೇಕೋ ಬೇಡವೋ! ಶಾಲೆಯ ಅಧಿಕಾರವರ್ಗದವರು ಎಲ್ಲಾ ಮಕ್ಕಳಿಗೂ ಐಡಿ ಕಾರ್ಡ್ ಕೊಟ್ಟು ಅದರಲ್ಲಿ ಹೆಸರು ಬರೆದು ಪ್ರತಿನಿತ್ಯವೂ ಹಾಕಿಕೊಂಡು ಬರಬೇಕೆಂದು ಮಕ್ಕಳಿಗೆ ಹೇಳಿಕಳಿಸಿದರು.ಮೂರನೇ ಕ್ಲಾಸು ಓದುವ ತಂಗಿಗೆ ನಾನೇ ಅವಳ ಹೆಸರನ್ನು ಬರೆದುಕೊಟ್ಟೆ. ಮಾಲೆಯಂತೆ ಅವಳ ಕೊರಳಿಗೆ ಅವಳ ಗುರುತಿನ ಕಾರ್ಡನ್ನು ಹಾಕಿ  "ಇನ್ನು ಮುಂದೆ ಎಲ್ಲರೂ ನಿನ್ನನ್ನು ಇದೇ ಹೆಸರಿನಿಂದ ಕರೆಯುತ್ತಾರೆ!" ಎಂದು ಅವಳ ಬೆನ್ನು ಚಪ್ಪರಿಸಿದೆ. ಯಾವುದೋ ನಿಧಿ ದೊರೆತಂತೆ ಅವಳು ಬೀಗಿದಳು. ಮಧ್ಯಾಹ್ನ ಹಿಂದಿರುಗಿದವಳು ಐಡಿ ಕಾರ್ಡ್ ತೆಗೆದು ಜೋಪಾನ ಮಾಡಿದಳು. "ನೀನು ಹೇಳಿದ್ದು ನಿಜ, ಅಣ್ಣ! ಇವತ್ತು ನನ್ನ ಗುರುತಿನ ಚೀಟಿ ನೋಡಿ ನೀನು ಪಾಂಡೆ ಅವರ ಮಗಳೇ ಎಂದು ಇಬ್ಬರು ಕೇಳಿದರು!" ಎಂದು ಉತ್ಸಾಹದಿಂದ ಹೇಳಿ ಊಟಕ್ಕೆ ಹೋದಳು.  ನಾನು ಓದಿನಲ್ಲಿ ಮಗ್ನನಾದೆ. ಸ್ವಲ್ಪ ಹೊತ್ತಿನ ಬಳಿಕ ಅವಳು ಮತ್ತೆ ಬಂದು "ಅಣ್ಣಾ!" ಅಂದಳು. ನಾನು ಪುಸ್ತಕದಿಂದ ಕಣ್ಣು ಸರಿಸಿ ಏನೆಂದು ಕೇಳಿದೆ. "ನಿನ್ನ ಹತ್ತಿರವೂ ಗುರುತಿನ ಚೀಟಿ ಇದೆಯಾ ಅಣ್ಣ?" ಎಂದಳು. "ಇಲ್ಲ" ಎಂದು ಸುಮ್ಮನಾದೆ. "ಮತ್ತೆ ನೀನು ಯಾರು ಅಂತ ಹೇಗೆ ಗೊತ್ತಾಗತ್ತೆ ಎಲ್ಲರಿಗೂ?" ನಾನು ಪುಸ್ತಕ ಕೆಳಗಿಟ್ಟು ದೀರ್ಘ ಶ್ವಾಸ ಎಳೆದುಕೊಂಡೆ. "ನಿಜ! ಇವತ್ತು ನನ್ನನ್ನು ಯಾರೂ ಗುರುತಿಸುವುದಿಲ್ಲ" ಎಂದೆ...

ಬೊಂಬೆಯ ಸ್ನಾನ

ಇಮೇಜ್
ತಮ್ಮಾ ತಾರೋ ನೀರು, ಒಂದು ಕೊಡಪಾನ, ಸುಮ್ಮನೆ ನಿಲ್ಲಬೇಡ ನೋಡುತ್ತಾ! ಈವತ್ತು ವಿಶೇಷ ಏನೆಂದು ಗೊತ್ತಾ? ನನ್ನ ಗೊಂಬೆಗೆ ನಾನು ಮಾಡಿಸುವೆ ಸ್ನಾನ! ತೊಗೊಂಡು ಬಾ ಹಾಗೇ ಸ್ಯಾಂಡಲ್ ಸೋಪು, ಹಾಗೂ ಬಿಳಿಯ ಟರ್ಕಿ ಟವಲ್ಲು! ಓಡಿಬಿಡವೋ, ಕೇಳಿಸಿಕೋ, ನಿಲ್ಲು! ಹಾಗೇ ತೊಗೊಂಡು ಬಾ ಕೂದಲಿಗೆ ಶಾಂಪೂ! ಹಾಗೆಲ್ಲ ಸ್ನಾನಕ್ಕೆ ಅಳಬಾರದು ಕಣೇ  ಕಣ್ಣಲ್ಲಿ ಹೋಗಿಬಿಡುತ್ತೆ ಸೋಪು  ನೀನಲ್ಲವೇ ನನ್ನ ಮುದ್ದು ಪಾಪು ಅಳುವುದೇ ಇಲ್ಲ, ತುಂಬಾ ಜಾಣೆ  ತಲೆ ಒರೆಸುತ್ತೇನೆ ತಾಳು  ಶೀತಗೀತ ಆದೀತು ಎಲ್ಲಾದರೂ ಹಾಕುತ್ತೇನೆ ಹಿಡಿ ಘಮಘಮ ಪೌಡರು ಬಾಚುವುದೇ ಕಷ್ಟ, ಗುಂಗುರು ಕೂದಲು! ತಮ್ಮಾ ನೋಡೋ ಹೇಗೆ ಕಾಣುತ್ತಿದೆ ಮಗು! ಇಡುತ್ತೇನೆ ಗಲ್ಲಕ್ಕೆ ದೃಷ್ಟಿ ಬೊಟ್ಟು, ತಾಳು! ಓಡಿ ಹೋಗಬೇಡವೋ, ನಿಲ್ಲು ನಿಲ್ಲು! ಸ್ನಾನ ಮಾಡಿಸುತ್ತೇನೆ ಬಾ ಇಲ್ಲಿ ನಿನಗೂ!