ಕುಂಭದ ಹಲವು ಮುಖಗಳು
ಕುಂಭದ ಹಲವು ಮುಖಗಳು ಸಿ ಪಿ ರವಿಕುಮಾರ್ ೧ ಪ್ರತಿದಿನವೂ ಓದುತ್ತಾರೆ ಪ್ರತಿದಿನವೂ ನೋಡುತ್ತಾರೆ ಕೋಟ್ಯಂತರ ಜನ. ಮುದುಡಿದೆ ಮನ ತಾವು ಹೋಗಲಾರದ ಮಹಾಕುಂಭಕ್ಕೆ ತುಡಿದು. ಕಟ್ಟಿ ಹಾಕಿದ್ದಾರೆ ಯಾರೋ ಕಂಭಕ್ಕೆ ಹಿಡಿದು ಎಂದು ನಿಡುಸುಯ್ಯುತ್ತಾರೆ ಹೇಗೆ ಹೋಗುವುದು ಅಲ್ಲಿಗೆ ದೂರದ ದಿಲ್ಲಿಗೆ ಇರಲು ಎಲ್ಲಿ ಸ್ಥಳ ಯೋಚಿಸಿ ವ್ಯಾಕುಲ ಹೋಗಲಾರದು ಮಹಾಕುಂಭಕ್ಕೆಂದು ಮಿಡಿದು. ಕಟ್ಟಿ ಹಾಕಿದ್ದಾರೆ ಯಾರೋ ಕಂಭಕ್ಕೆ ಹಿಡಿದು ಎಂದು ನಿಡುಸುಯ್ಯುತ್ತಾರೆ. ಪುಣ್ಯವಂತರು ಹೋಗಿ ಬಂದರು ಅಲ್ಲಿಂದ ಗಂಗೆ ತಂದರು ಪಾಪಿಗೆ ಇಷ್ಟೇ ಪ್ರಾಪ್ತಿ ಇಷ್ಟೇ ನಮ್ಮ ವ್ಯಾಪ್ತಿ ಶಿವರಾತ್ರಿ ಜಾಗರಣೆ ಉಪವಾಸ ಪಾರಣೆ ಡೊಂಕು ಮಣ್ಣು ನೆಲಕ್ಕೆ ಸಗಣಿ ಸಾರಣೆ ಎಂದು ಹತಾಶರಾಗುತ್ತಾರೆ. ೨ ಮೇಳಕ್ಕೆ ಬಂದಿಳಿದ ಜನ ಭದ್ರಮಾಡುತ್ತಾರೆ ಜೋಬಿನ ಧನ ಕಳೆದುಹೋಗುವ ಭಯ ಭದ್ರವಾಗಿ ಹಿಡಿದು ಕೈಯ ಮುಳುಗಿ ಏಳುತ್ತಾರೆ ಮೂಗು ಮುಚ್ಚಿಕೊಂಡು ಹಣೆಗೆ ವಿಭೂತಿ ಹಚ್ಚಿಕೊಂಡು ಗೆದ್ದೆವು ಎಂದು ಬೀಗುತ್ತಾರೆ ಇಲ್ಲಿ ನಿಲ್ಲಿ ಬಂದು ಹತ್ತಿರ ಸರಿಯಾಗಿ ಉಟ್ಟುಕೊಳ್ಳಿ ಧೋತರ ತೆಗೆಯುತ್ತೇನೆ ಚಿತ್ರ, ನಗಬೇಕು, ಹಾಗೇಕೆ ಗಂಭೀರವಾಗಿರಬೇಕು ಎಲ್ಲರಿಗೂ ಸಿಕ್ಕುವುದೇ ಇಂಥ ಮಹಾಪ್ರವಾಸ ವಿಮಾನದಲ್ಲಿ ಕೂತು ಹೀಗೆ ನಿರಾಯಾಸ ಎಂದು ಕ್ಯಾಮೆರಾದಲ್ಲಿ ಸೆರೆಯಾಗುತ್ತಾರೆ ಅಷ್ಟೆಲ್ಲಾ ಕೋಟಿ ಹಣ ಗಳಿಸಿ ಏನು ಪ್ರಯೋಜನ ಅಮೇರಿಕಾದಲ್ಲಿ ಸಿಕ್ಕುವುದೇ ಮಹಾಕುಂಭ ಡಿಸ್ನಿ ಲ್ಯಾಂಡ್, ಲೇಕ್ ಟಾಹೋ ಅಂತೆಲ್ಲಾ ಜಂ...