ಪೋಸ್ಟ್‌ಗಳು

Library ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಗ್ರಂಥಾಲಯ

ಇಮೇಜ್
ಮೂಲ ಕವಿತೆ: ಆಲ್ವಿ ಗ್ಯಾಲಘರ್ ಅನುವಾದ: ಸಿ ಪಿ ರವಿಕುಮಾರ್ ನಮ್ಮನ್ನು ಇಲ್ಲೇಕೆ ಕರೆತರುತ್ತಿದ್ದಳೋ ಅವಳು ಪ್ರತಿದಿನ ಅಷ್ಟೊಂದು ಆಸ್ಥೆಯಿಂದ. ಆಗ ಅವಳಿನ್ನೂ ಯುವತಿ, ಸಮಾಜದಲ್ಲಿ ಹಿಂದೆ ಬಿದ್ದವಳು, ಆದರೆ ನಾವು ಬದುಕುತ್ತಿದ್ದ ಬದುಕಿಗಿಂತಲೂ ಭಿನ್ನವಾದ ವಿವರಗಳು ಈ ಪುಸ್ತಕಗಳಲ್ಲಿ ಇದ್ದವೆಂದು ಅವಳಿಗೆ ತಿಳಿದಿತ್ತು.  ತಪ್ಪಿಸಿಕೊಳ್ಳುವ ಮಾರ್ಗ ತೋರುವುದು ಮಾತ್ರ ಕೆಲವರಿಂದ ಸಾಧ್ಯವೇನೋ. ಹಾಗೂ ಅಷ್ಟು ಸಾಕೆಂಬ ತಿಳಿವಳಿಕೆಯೇ ಕ್ಷಮೆಯೇನೋ. ನೋಡಿ, ನಾನು ಮೂವತ್ತು ವರ್ಷ ಓದಿ ಇಲ್ಲಿಗೆ ತಲುಪಿರುವೆ. ನನ್ನದು ಪುಸ್ತಕಗಳಿಂದ ಕಟ್ಟಿಕೊಂಡ ಬದುಕು. ನನ್ನನ್ನು ನಾನು ಒಳಗಿನಿಂದ ತಳಕಂಪಳಕ ಮಾಡಿಕೊಂಡರೂ ಯಾರೂ ಸಾಯಲಿಲ್ಲ. ಯಾರ ಬೆರಳಿಗೂ ಚುಚ್ಚಿದ ಗಾಯ ಆಗಲಿಲ್ಲ. ಇದನ್ನು ಕಲ್ಪಿಸಿಕೊಳ್ಳಿ. ಮಾತಾಡಬಲ್ಲೆನೋ ಇಲ್ಲವೋ ಎಂಬ ಆತಂಕದಲ್ಲಿ ಇರುತ್ತಿದ್ದೆ ಹಿಂದೊಮ್ಮೆ. ನಾನು ಹೇಳಿದ್ದಕ್ಕೂ  ಬೇರೆಯವರು ಕೇಳಿದ್ದಕ್ಕೂ ನಡುವೆ ಇರುತ್ತಿತ್ತು ಒಂದು ಗೋಡೆ. ಕಾಗದಕ್ಕೆ ಲೇಖನಿ ಹಚ್ಚುವ ತನಕ ಆಗುತ್ತಲೇ ಇರಲಿಲ್ಲ ನನ್ನ ಕೈಯಲ್ಲಿ ಅನುವಾದ ಕಾರ್ಯ. ಆಗ ಎದುರಾಗಿದ್ದು ನನ್ನ ತಾಯಿನುಡಿ. ನಾನು ನನ್ನ ಜೀವವನ್ನು ಕೆಳಗಿಟ್ಟು ಹೊದ್ದಿಕೆಗಳ ಕೆಳಗೆ ನಡೆದು ಸಾಗಿದೆ ಇನ್ನೊಂದರ ಕಡೆಗೆ.

ಟೆಲಿಫೋನ್ ಬೂತ್ ಸ್ವಗತ

ಇಮೇಜ್
  ಹಿಂದೊಮ್ಮೆ  ಹೊರಗೆ ಕಾಯುತ್ತಿದ್ದರು ಜನ ತಮ್ಮ ಸರದಿಗೆ ನೂರೆಂಟು ಕಾರಣಗಳಿದ್ದವು ಒಳಗೆ ಬಂದವರಿಗೆ. ಅವಸರವಿಲ್ಲದೆ ಪ್ರೇಮಾಲಾಪದಲ್ಲಿ ತೊಡಗಿದ ಯುವಕ ಹೊರಗೆ ನಿಂತವರ ಹಣೆಯಲ್ಲಿ ಕಾಣುತ್ತಿದೆ ತವಕ. ತಡವಾಗಿ ಬರುತ್ತೇನೆ ಕಚೇರಿಯಲ್ಲಿ ಕೆಲಸ ಹೆಚ್ಚಿದೆ ಎಂದು ಗೆಳತಿಯ ಜೊತೆ ಹೊರಟವನದು ಕೆಚ್ಚೆದೆ. ನಿಮ್ಮ ಹೆಂಡತಿಯನ್ನು ಅಪಹರಿಸಿದ್ದೇನೆ, ಬ್ರಿಜ್ ಬಳಿಗೆ ತಂದರೆ ಐದು ಸಾವಿರ ಪೌಂಡ್ ಬಿಡುಗಡೆ ನಿಮ್ಮವಳಿಗೆ ಚೌಕಾಸಿ ಇಲ್ಲ! ತಡವಾದರೆ ಮಧ್ಯರಾತ್ರಿಗೆ ಒಂದೇ ಘಳಿಗೆ ಗುಂಡು ಉಗುಳುವುದು ನನ್ನ ಬಂದೂಕಿನ ನಳಿಗೆ! ನಾನೇ ಇಟ್ಟುಕೊಳ್ಳಬೇಕೇ?!  ಏನಾಗಿದೆ ನಿಮ್ಮ ತಲೆಗೆ! (ದೊಡ್ಡ ಮೀನು ಬಿತ್ತೆಂದುಕೊಂಡಿದ್ದೆ ಬಲೆಗೆ! ಇದೊಳ್ಳೆ ಸಿಕ್ಕಿಕೊಂಡೆ ಶಾರ್ಕ್ ಹಲ್ಗೆ) ಐನೂರು ಪೌಂಡ್ ಆದೀತೆ? ಹೋಗಲಿ ಐವತ್ತು? ಏನೆಂದಿರಿ ನಾನೇ ಕೊಡಬೇಕೆ ಮತ್ತೂ! ಅಮ್ಮಾ ನಾನಿರಲಾರೆ ಇವನ ಜೊತೆ ಇನ್ನು. ತಪ್ಪು ಮಾಡಿದೆ ಮೀರಿ ನಿನ್ನ ಮಾತನ್ನು. ಪ್ರತಿದಿನವೂ ಕುಡಿದು ಬರುತ್ತಾನೆ ಮನೆಗೆ ಕೇಳಿದರೆ ಕೋಪ, ವಾಗ್ವಾದ, ಕೊನೆಗೆ ನಾಚಿಕೆಗೆಟ್ಟವನು ಕೆನ್ನೆಗೆ ಹೊಡೆದ ನನಗೆ. ನಾನು ನಗುತ್ತಿದ್ದೆ ಅಳುತ್ತಿದ್ದೆ ಇದನ್ನೆಲ್ಲ ಕೇಳುತ್ತಾ. ಅದೆಷ್ಟು ರಹಸ್ಯಗಳು ನನ್ನಲ್ಲಿ ಅಡಗಿವೆ ಗೊತ್ತಾ! ಎಷ್ಟು ಜನ ಮರೆತು ಹೋಗುತ್ತಿದ್ದರು ತಮ್ಮ ಕೊಡೆ! ಈಗ ಯಾರೂ ಸುಳಿಯುವುದಿಲ್ಲ ನನ್ನ ಕಡೆ. ಎಲ್ಲರ ಕೈಯಲ್ಲೂ ಈಗ ಸಂಚಾರಿ ಫೋನು ನಿರರ್ಥಕವಾಗಿ ನಿಂತಿದ್ದೇನೆ ನಾನು. ಯಾರಿಗೋ ಹೊಳೆಯಿತು ...