ಬೇಲಿ ಚಾತಕ
ಬೇಲಿ ದೀರ್ಘವಾದದ್ದೇನು ಬರೆಯಲಾದೀತು ನಿನ್ನನ್ನು ಕುರಿತು ಓ ಬೇಲಿ ಚಟಕ! ಬರೆಯಬಹುದೇನೋ ನಾಲ್ಕುಸಾಲಿನ ಚುಟಕ - ಬರೆಯಲೇನಿದೆ ಹೇಳು! ಭವ್ಯವಾದದ್ದುದೇನನ್ನೂ ಬ್ರಹ್ಮ ಬರೆಯಲಿಲ್ಲ ನಿನ್ನ ವಿಧಿಯಲ್ಲಿ! ಬಣ್ಣ ಏಕಪ್ರಕಾರ, ಕಡುಗಪ್ಪು. ಸಾಧಾರಣ ಗಾತ್ರ. ಎಲ್ಲರಿಗೂ ಕೊಡಲಾದೀತೆ ಹೀರೋ ಪಾತ್ರ! ಕೊಡಲಿಲ್ಲ ಕೋಗಿಲೆಯ ಕೂಜನದ ಕಂಠಸಿರಿ ಗಿಳಿಯ ಬಣ್ಣ, ಹದ್ದಿನ ಕಣ್ಣು, ನವಿಲಿನ ಗರಿ ಹಾಕಿಬಿಡುತ್ತಾನೆ ವಿಧಿ ಹೀಗೆ ಬಾಳಿಗೆ ಬೇಲಿ ಚೂರೇ ಚಿನ್ನದಲ್ಲಿ ಎಳೆ ಹೊಸೆವಂತೆ ಅಕ್ಕಸಾಲಿ! ಆದರೂ ನಿನ್ನ ಭಾಗ್ಯವೇ! ಕ್ಯಾಮೆರಾ ಕಣ್ಣಿಗೆ ಬಿದ್ದು ಭಗವತಿಯ ಕೃಪೆಯಲ್ಲಿ ಮುಳುಗಿ ಮಿಂದೆದ್ದು ದಾಟಿರುವೆಯಲ್ಲ ವಿಧಿಯ ಮುಳ್ಳುಬಳ್ಳಿಯಬೇಲಿ ನೀಡುತ್ತಿದೆ ಸಂದೇಶ ನಮ್ಮೆಲ್ಲರ ಬಾಳಲ್ಲಿ ಒಂದಾದರೂ ತಿರುವು, ಒಂದಾದರೂ ಭಾಗ್ಯರೇಖೆ ಬರೆದಿರುವನು, ಕಾಯೋಣ ಬರುವುದಮೃತಘಳಿಗೆ! ಸಿ.ಪಿ. ರವಿಕುಮಾರ್ (ಫೋಟೋಗ್ರಾಫರ್ ಭಗವತಿ ಅವರಿಗೆ)