ಪೋಸ್ಟ್‌ಗಳು

2026 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ರೆಸಿಪಿ ರತ್ನ

ಇಮೇಜ್
 ರೀಲುಗಳಲ್ಲಿ ನೋಡು ಎಷ್ಟು ಸುಲಭ ಅಡುಗೆ! ಎಂದು ಹಾಗೆ ನೋಡದಿರಿ ನನ್ನ ಕಡೆಗೆ. ನೋಡಿಯೇ ಬಿಡುತ್ತೇನೆ ಒಂದು ಕೈ ಎಂದು ಮಾಡಲು ಹೊರಟೆ ಆಪಲ್ ಪೈ  ಸಂಪೂರ್ಣ ಸೋತಾಗ ನನ್ನ ಪ್ರಯತ್ನ ತಿಳಿದು ಬಂದಿದ್ದು ಫೇಕ್ ಅಂತೆ "ರೆಸಿಪಿ ರತ್ನ" ಅವರು ಹಾಕಿದ ಆಪಲ್ ಪೈ ವಿಧಾನ! ನನ್ನಂತೆ ಎಷ್ಟೋ ಜನರ ಪೈ ಆಯ್ತಂತೆ ಅಧ್ವಾನ ರೆಸಿಪಿ ಮಾಡಿದ್ದು ಯಾವುದೋ ಏಐ  ನಾನು ಸುಮ್ಮಸುಮ್ಮನೆ ಮೋಸ ಹೋದೆನೈ  ಹಾಗೆಲ್ಲ ಉಬ್ಬುವುದಿಲ್ಲ ಪೂರಿ  ಮುರಿದರೆ ಕರಕರ ಎನ್ನದು ಕಚೋರಿ ಕತ್ತರಿಸದು ಜಗತ್ತಿನ ಯಾವುದೇ ಚಾಕು ಹಾಗೆ ನೀಟಾಗಿ ಮೈಸೂರು ಪಾಕು  ಹಾಗೆ ಹೊಂಬಣ್ಣ ಪಡೆದ ಕ್ಯಾರೆಟ್ ಹಲ್ವಾ ನಾನಂತೂ ನೋಡಿಲ್ಲ! ಸಾಧ್ಯವೇ ಇಲ್ಲ! ತೋಟಗಾರಿಕೆ ರೀಲ್ ನನಗೆ ಯಾರೂ ಕಳಿಸಬೇಡಿ  ಎಲ್ಲೂ ಬೆಳೆಯುವುದಿಲ್ಲ ಅಂಥ ಪರ್ಫೆಕ್ಟ್ ಗುಲಾಬಿ ಹೀಗೆ ಉದುರಿಸಿ ಬೀಜ ಹಾಗೆ ಹನಿಸಿದರೆ ನೀರು ಎದ್ದು ಬಿಡೋದಿಲ್ಲ ಕೂಡಲೇ ಕೊತ್ತಂಬರಿ ಪೈರು ನಾನೂ ಪ್ರಯತ್ನಿಸಿದ್ದೇನೆ ಬೇಕಾದಷ್ಟು  ಮತ್ತು ಮಾಡಿದ್ದೇನೆ ಹಣ ಮತ್ತು ಸಮಯ ವೇಸ್ಟು ಶುದ್ಧ ಸುಳ್ಳಿನ ಕಂತೆ ಈ ತೋಟ ಎಲ್ಲವೂ ಯಾರೋ ತಯಾರಿಸಿದ ಡೇಟಾ ಪ್ರೋಟೀನ್ ಬಗ್ಗೆ ಇನ್ನೊಂದು ವಿಡಿಯೋ ಕಳಿಸುವ ಮುಂಚೆ ಸ್ವಲ್ಪ ತಡಿಯೋ! ಎಲ್ಲ ಸರಿ ಡ್ರೈ ಫ್ರೂಟು ಬಾದಾಮಿ ಅಖರೋಟು  ಎಂದಾದರೂ ನೋಡಿದ್ದೀರಾ ಕೇಜಿಯಲ್ಲಿ ರೇಟು ಖಂಡಿತಾ ಕೆಲಸ ಮಾಡಿತು ಆ ನೋವಿನ ಎಣ್ಣೆ ಮಾಡುವಾಗಲೇ ನೋವು ಶುರುವಾಯಿತು ನೆನ್ನೆ ಇಲ್ಲ! ಮುಂಚೆ ನೋವಿ...

ಫೇಕ್

ಇಮೇಜ್
ಫೇಕ್ ವಿಡಿಯೋ ನೋಡುತ್ತಾ ನನಗೆ ಬರುತ್ತದೆ ಅನುಮಾನ ಹಿಂದೊಮ್ಮೆ ಫೇಕ್ ಬರವಣಿಗೆ ಬರೆದವರು ಎಷ್ಟು ಜನ? ಆಗ ಗೊತ್ತಿರಲಿಲ್ಲ ಜನರಿಗೆ ಫೇಕ್ ಎಂಬ ಪದ ಮುಗ್ಧವಾಗಿತ್ತು ಅಂದಿನ ಜನಪದ ಅಚ್ಚಾದುದೆಲ್ಲ ನಿಜವೇ ಎಂದು ನಂಬಿದ ಕಾಲ. ಕೆಲವೊಮ್ಮೆ ತಲೆಯೆತ್ತುವ ನಕಲಿ ನೋಟ್ ಜಾಲ ಹೊರತಾಗಿ ಎಲ್ಲವೂ ಅವರ ವಿಶ್ವಾಸಪಾತ್ರ. ಇಂದು ಈ ಮುಗ್ಧತೆ ಒಂದು ನೆನಪು ಮಾತ್ರ ಚಂದ್ರನ ಮೇಲೆ ಇರುವ ಮೊಲವನ್ನು ಕುರಿತು ಹೇಳಿದರೆ ಕಥೆ ನಿಮ್ಮ ಮಗು ಕೇಳಿ ನಕ್ಕೀತು ತೆರೆದು ಬಿಟ್ಟಿವೆ ತೆರೆಯಬಹುದಾದ ಎಲ್ಲ ಕಿಟಕಿ ಬಾಗಿಲು ಗುಟೆನ್ ಬರ್ಗ್ ಯಂತ್ರ ಮತ್ತು ತದನಂತರ ಗೂಗಲು  ಕತ್ತಲಲ್ಲಿ ಯಾಕಿರಬೇಕು? ಈಗ ಕೋರೈಸುವ ಬೆಳಕು ಆಯಾಸವಾದರೆ ಹುಡುಕಿ ನೋಡಿಕೋ ಫೇಕು. ಸಿ ಪಿ ರವಿಕುಮಾರ್

ಕನ್ನಡ ಪದಗೋಳು

"ಕನ್ನಡ ಪದಗೋಳ್ ನುಗ್ಲಿ" ಅಂತ ರಾಜರತ್ನಂ ಹಾಡಿದಾಗ "ಕನ್ನಡ ಪದ" ಎಂದರೆ ಬಹುಶಃ "ಕನ್ನಡದ ಹಾಡು" ಎಂಬ ಅರ್ಥ ಅವರ ಮನಸ್ಸಿನಲ್ಲಿತ್ತು. ಪದಗಳು ಅನ್ನುವುದನ್ನೇ ಅವರು ರತ್ನನ ಭಾಷೆಯಲ್ಲಿ "ಪದಗೋಳ್" ಎಂದು ಸ್ವಲ್ಪ ತಿರುಚಿದರು. ಆದರೆ ಮುಂದೆ ನುಗ್ಗಿ ಬರಲಿರುವ  ಕನ್ನಡ "ಪದಗೋಳಿನ" ಬಗ್ಗೆ ಮಾತ್ರ ಅವರಿಗೆ ಖಂಡಿತಾ ಗೊತ್ತಿರಲಿಲ್ಲ. ಇಂಟರ್ ನೆಟ್ ಯುಗದಲ್ಲಿ ಕನ್ನಡವನ್ನು ಉಪಯೋಗಿಸಲು ಸಾಕಷ್ಟು ಅನುಕೂಲಗಳಿವೆ. ಗೂಗಲ್, ಫೇಸ್ ಬುಕ್ ಮೊದಲಾದ ಅನೇಕ ವೆಬ್ ತಾಣಗಳನ್ನು ಬೇಕಾದವರು ಕನ್ನಡದಲ್ಲಿ ಓದಬಹುದು.  ಕನ್ನಡ ಬರೆಯಲು ಯೂನಿಕೋಡ್ ತಂತ್ರಾಂಶ ಈಗ ಮುಕ್ತವಾಗಿ ಲಭ್ಯವಾಗಿದೆ - ಉದಾಹರಣೆಗೆ ಗೂಗಲ್ ಮತ್ತು ಮೈಕ್ರೋಸಾಫ್ಟ್ ಸಂಸ್ಥೆಗಳ ತಂತ್ರಾಂಶಗಳನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು. ದಿನಪತ್ರಿಕೆ, ವಾರಪತ್ರಿಕೆ, ಮಾಸಪತ್ರಿಕೆಗಳು ತಮ್ಮ "ಈ-ಪರಿಯ" ಸೊಬಗನ್ನು ಮೆರೆಯುತ್ತಿವೆ. ಮೊಬೈಲ್ ಫೋನ್ ಮೇಲೂ ಕನ್ನಡ ಹರಿದಾಡುತ್ತಿದೆ.  ಇನ್ನೂ ಬೇಕಾದಷ್ಟು ತಂತ್ರಾಂಶಗಳನ್ನು ನಾವು ಕಲ್ಪಿಸಿಕೊಳ್ಳಬಹುದು - ಉದಾ. ಕನ್ನಡ ಪದಗಳಿಗೆ ಸ್ಪೆಲ್ ಚೆಕರ್, ಕನ್ನಡ ಉಕ್ತಲೇಖನ, ಇತ್ಯಾದಿ. ಯಾರೋ ಸಾಹಸಿಗಳು ಇಂಥ ತಂತ್ರಾಂಶಗಳನ್ನು ರಚಿಸಿಯೂ ಬಿಡಬಹುದು. ಆದರೆ ಬೆಕ್ಕಿಗೆ ಗಂಟೆ ಕಟ್ಟುವವರೂ ಬೇಕಲ್ಲ! ನಮ್ಮ ಮುಂದೆ ಬರುವ  ಪ್ರಶ್ನೆಗಳು - ಈ ತಂತ್ರಾಂಶಗಳನ್ನು ಎಷ್ಟು ಜನ ಉಪಯೋಗಿಸುತ್ತಿದ್ದಾರೆ?...

ಕಾಯವೇ ದೇವರು

ಇಮೇಜ್
 ಸಂತ ಕಬೀರನ ಗುರುವಾಗಿದ್ದ ರಾಮಾನಂದರ ಮತ್ತೊಬ್ಬ ಶಿಷ್ಯ ಸಂತ ಪೀಪಾ ಅವರ ರಚನೆಯನ್ನು ಗಮನಿಸಿ. ಕಾಯವೇ ದೇವರು, ಕಾಯ ದೇವಸ್ಥಾನ, ಕಾಯವೇ ಭಕ್ತಯಾತ್ರಿ| ಕಾಯವೇ ಧೂಪ ದೀಪ ನೈವೇದ್ಯ, ಕಾಯವೇ ಪೂಜಾಪತ್ರಿ|| ಜಗವೆಲ್ಲ ಅರಸಿ ಪಡೆದುಕೊಂಡೆ ನವರತ್ನಗಳ ನನ್ನ ಕಾಯದಲ್ಲೇ|  ಬರದು ಯಾವುದೂ ಹೋಗದು ಏನೂ, ಆಣೆ ರಾಮನ ಮೇಲೆ || ಬ್ರಹ್ಮಾಂಡ ಯಾವುದೋ ಅದೇ ಪಿಂಡ, ಅರಸಿದವರಿಗೆ ಲಬ್ಧ| ಬರೆಸಿದನು ಸದ್ಗುರು, ಪೀಪಾ, ತಿಳಿದುಕೋ ಇದೇ ಪರಮ ತತ್ವ||  काया देवा काया देवल, काया जंगम जाती। काया धूप दीप नइबेदा, काया पूजा पाती॥ काया बहु खंड खोजते, नव निधि पाई। ना कछु आइबो ना कछु जाइबो, राम की दुहाई॥ जो ब्रह्माण्डे सोई पिण्डे, जो खोजै सो पावै। पीपा प्रणवै परम ततु है, सतगुरु होई लखावै॥ ಯಾವುದೂ ಬರದು, ಯಾವುದೂ ಹೋಗದು ಎಂಬುದು ಪುನರ್ಜನ್ಮದ ಬಗ್ಗೆ ಹೇಳಿದ ಮಾತು.

ಮಗುವಿನ ಅಪಹರಣ

ಇಮೇಜ್
  ಮೂಲ: ಡಬ್ಲ್ಯೂ ಬಿ ಯೇಟ್ಸ್  ಕನ್ನಡಕ್ಕೆ: ಸಿ ಪಿ ರವಿಕುಮಾರ್  ಬಂಡೆಗಲ್ಲುಗಳ ಮಲೆನಾಡು ಎಲ್ಲಿ ಅದ್ದುವುದೋ ಬಿದಿರುಮೆಳೆ ಕಾಡನ್ನು ಸರೋವರದಲ್ಲಿ ನಳನಳಿಸುವ ಎಲೆಮರೆಯ ದ್ವೀಪವಿದೆ ಅಲ್ಲೊಂದು. ಅಲ್ಲಿ ಕೊಕ್ಕರೆ ಹಿಂಡು ರೆಕ್ಕೆ ಬಡಿಯುತ್ತ ಎಬ್ಬಿಸುತ್ತದೆ ತೂಕಡಿಸುವ ನೀರಿಲಿಗಳನ್ನು. ಬಚ್ಚಿಟ್ಟಿದ್ದೇವೆ ನಾವಲ್ಲಿ ದೊಡ್ಡ ಹೂಜಿಗಳಲ್ಲಿ ಹಿಪ್ಪುನೇರಳೆ ಹಣ್ಣು, ಸಿಹಿ ಎಲಚಿ,  ದ್ರಾಕ್ಷಿ,  ಮತ್ತು ಕದ್ದು ಶೇಖರಿಸಿಟ್ಟ  ಅಚ್ಚಗೆಂಪು ದಾಳಿಂಬೆ. ಬಂದುಬಿಡು ನಮ್ಮೊಂದಿಗೆ ಓ ಮಾನವ ಶಿಶು! ನಿರ್ಭಿಡೆಯ ವನರಾಜಿಗೆ, ಹುಚ್ಚುನಡೆಯ ವಾರಾಶಿಗೆ, ಕರೆದೊಯ್ಯುವಳು ಯಕ್ಷಿ  ನಿನ್ನ ಕೈ ಹಿಡಿದು! ನೀನರಿಯೆ ಈ ಜಗದೊಳಗೆ ನಿನ್ನ ಊಹೆಗೂ ಮೀರಿ  ತುಂಬಿಕೊಂಡಿದೆ ಗೋಳು ಕಣ್ಣೀರು ಎಂದು.

ದುಃಖ

ಇಮೇಜ್
   ಮೂಲ: ರೇಮಂಡ್ ಕಾರ್ವರ್  ಅನುವಾದ: ಸಿ ಪಿ ರವಿಕುಮಾರ್ ಇಂದು ಬೆಳಗ್ಗೆ ಬೇಗ ಎಚ್ಚರವಾಗಿ  ಹಾಸಿಗೆಯ ಮೇಲೆ ಎದ್ದು ಕೂತಾಗ ದೂರದಲ್ಲಿ ಕಂಡಿತು ಸಮುದ್ರದ ಮೇಲೆ ಒಂಟಿ ದೋಣಿಯೊಂದು  ಒಂದೇ ದೀಪದ ಬೆಳಕಿನಲ್ಲಿ ಅಲೆಗಳ ಮೇಲೆ ತಡವರಿಸುತ್ತಾ ಸಾಗುತ್ತಿತ್ತು. ನನಗೆ ಒಮ್ಮೆಲೇ ನೆನಪಾಯಿತು ನನ್ನ ಸ್ನೇಹಿತನೊಬ್ಬ ಪೆರುಜಿಯಾ ಪ್ರದೇಶದ ಬೆಟ್ಟಗಳ ಮೇಲಿಂದ ತನ್ನ ಸ್ವರ್ಗಸ್ಥ ಹೆಂಡತಿಯ ಹೆಸರು ಕೂಗಿ ಕರೆಯುತ್ತಿದ್ದ. ಅವಳು ಸತ್ತ ಎಷ್ಟೋ ವರ್ಷಗಳ ತನಕ ಊಟ ಮಾಡುವಾಗ  ಟೇಬಲ್ ಮೇಲೆ ಅವಳಿಗಾಗಿ ಬಡಿಸಿ ಕೂಡುತ್ತಿದ್ದ. ಅವಳಿಗೆ ಶುದ್ಧಗಾಳಿ ಬೇಕೆಂದು ಕಿಟಕಿ ತೆರೆಯುತ್ತಿದ್ದ. ಈ ಬಗೆಯ ಪ್ರದರ್ಶನ ನನಗೆ ಮುಜುಗರ ಎನ್ನಿಸುತ್ತಿತ್ತು. ಅವನ ಇನ್ನಿತರ ಸ್ನೇಹಿತರಿಗೂ ಕೂಡ. ನನಗೆ ಅದೇನೆಂದು ಅರ್ಥವಾಗುತ್ತಿರಲಿಲ್ಲ. ಇಂದು ಬೆಳಗಿನವರೆಗೂ.

ದಶಸಹಸ್ರ ಹೂರಾಶಿ ಸಂಭ್ರಮ

ಇಮೇಜ್
ವಸಂತದಲ್ಲಿ ದಶಸಹಸ್ರ ಹೂರಾಶಿ ಸಂಭ್ರಮ ಶರತ್ಕಾಲ ಬೆಳ್ದಿಂಗಳ ನೊರೆ ಹಾಲು ಚಂದ್ರಮ ವೈಶಾಖದಲ್ಲಿ ತಂಗಾಳಿ ಸುಳಿದಾಗ ಹರ್ಷ ಹಿತವೆನ್ನಿಸುವುದು ಹೇಮಂತದ ಹಿಮವರ್ಷ ಹೇಳು ಯಾವ ಋತು ನಿನಗೆ ಅತ್ಯಂತ ಆಪ್ಯಾಯಮಾನ? ಯಾವಾಗ ಅನಗತ್ಯ ಆಲೋಚನೆಯಿಂದ ಮುಕ್ತವೋ ಮನ! ಮೂಲ: ವು ಮೆನ್  ಕನ್ನಡಕ್ಕೆ: ಸಿ ಪಿ ರವಿಕುಮಾರ್ 

ಚೈನೀಸ್ ಟೀ ಕುಡಿಯುತ್ತಾ

ಇಮೇಜ್
  ಹಿಂದಿ ಮೂಲ: ಅಜ್ಞೇಯ ಕನ್ನಡ ಅನುವಾದ: ಸಿ ಪಿ ರವಿಕುಮಾರ್ ಚಹಾ ಕುಡಿಯುತ್ತಾ ನಾನು ಅಪ್ಪನ ಬಗ್ಗೆ ಯೋಚಿಸುತ್ತಿದ್ದೇನೆ. ನೀವು ಎಂದಾದರೂ  ಚಹಾ ಕುಡಿಯುವಾಗ ನಿಮ್ಮ ತಂದೆಯ ಬಗ್ಗೆ ಯೋಚಿಸಿದ್ದೀರಾ? ಒಳ್ಳೆಯದಲ್ಲ ಅಪ್ಪಂದಿರ ಬಗ್ಗೆ ಯೋಚಿಸುವುದು. ನಮ್ಮ ಕಲಾಯಿ ಇಳಿದು ಹೋಗುತ್ತದೆ. ನಾವು ಬೇರೆ ಏನಾದರೂ ಆಗಬಹುದಿತ್ತು. ಈ ಆಲೋಚನೆಯ ತೊಂದರೆ ಏನೆಂದರೆ ನಾವು ಬೇರೇನಾದರೂ ಆಗಿದ್ದರೆ  ಬಹುಶಃ ನಮ್ಮ ತಂದೆಗೆ ಇನ್ನಷ್ಟು ಹತ್ತಿರವಾಗುತ್ತಿದ್ದೆವು ಇನ್ನಷ್ಟು ಅಪ್ಪನಂತೆ ಆಗುತ್ತಿದ್ದೆವು  ಎಂಬ ಸಾಕ್ಷಾತ್ಕಾರವಾಗುವುದು. ಅಪ್ಪನಂತೆ ಆಗಲು ಎಷ್ಟು  ದೂರ ಹೋಗಬೇಕಾಗುತ್ತದೆ ಅಪ್ಪನಿಂದ. ಅಪ್ಪನಿಗೂ ಬೆಳಗ್ಗೆ ಚಹಾ ಕುಡಿಯುವ ಅಭ್ಯಾಸವಿತ್ತು. ಅವರೂ ಯೋಚಿಸುತ್ತಿದ್ದರೆ  ತಮ್ಮ ಅಪ್ಪನ ಕುರಿತು? ಹತ್ತಿರವಾಗಿಯೋ ಅಥವಾ ದೂರವಾಗಿಯೋ?

ಮಳೆ

ಇಮೇಜ್
ಮೂಲ : ರೇಮಂಡ್ ಕಾರ್ವರ್ ಅನುವಾದ: ಸಿ ಪಿ ರವಿಕುಮಾರ್  ಇವತ್ತು ಎದ್ದಾಗ ಯಾಕೋ ಇಡೀ ದಿವಸ ಮಲಗಿ ಹಾಸಿಗೆಯಲ್ಲೇ ಓದುವ ಖಯಾಲಿ. ಒಂದು ನಿಮಿಷ ಹೋರಾಡಿದೆ  ಅದಮ್ಯ ಆಸೆಯ ಜೊತೆಗೆ. ನಂತರ ಕಿಟಕಿಯಿಂದ ಹೊರಗೆ ಇಣುಕಿ ಸುರಿಯುವ ಮಳೆಯನ್ನು ನೋಡಿ ಸೋಲೊಪ್ಪಿಕೊಂಡೆ. ಇಡೀ ದಿವಸ ಬೆಳಗಿನ ಮಳೆಯ ಸುಪರ್ದಿಗೆ  ನನ್ನನ್ನು ಒಪ್ಪಿಸಿಕೊಂಡೆ. ನಾನು ಜೀವನವನ್ನು ಮತ್ತೊಮ್ಮೆ ಬದುಕಿದರೆ ಇಂಥ ತಪ್ಪನ್ನು ಮಾಡುವೆನೇ ಪುನಃ? ಅವಕಾಶ ಸಿಕ್ಕಿದರೆ ಖಂಡಿತಾ ಖಂಡಿತ.

ತಂತಿ (ಅನುವಾದಿತ ಕವಿತೆ)

ಇಮೇಜ್
ಕೆನಡಾ ಗಡಿಯಲ್ಲೊಂದು ಅ-ರಾಷ್ಟ್ರೀಯ ಸ್ಮಾರಕ  ಮೂಲ: ವಿಲಿಯಮ್ ಸ್ಟಾಫರ್ಡ್ (ಅಮೆರಿಕಾ ಸಂಸ್ಥಾನ)  ಕನ್ನಡಕ್ಕೆ: ಸಿ. ಪಿ. ರವಿಕುಮಾರ್  ಇದು ಯಾವ ಯುದ್ಧವೂ ನಡೆಯದ ಮೈದಾನ, ಯಾವ ಅನಾಮಧೇಯ ಸೈನಿಕನೂ ಇಲ್ಲಿ ಬಿಡಲಿಲ್ಲ ಪ್ರಾಣ, ಇಲ್ಲಿ ಕೈ ಹಿಡಿದವು ಎರಡೂ ಕಡೆ ಬೆಳೆದ ಹುಲ್ಲುಗರಿಕೆ, ಯಾವುದೇ ಸ್ಮಾರಕವನ್ನೂ ಕಟ್ಟಿಲ್ಲ ಅದಕ್ಕೆ, ಇಲ್ಲಿ ಕಾಣುವ ಏಕಮಾತ್ರ ವೀರ ಚಿಹ್ನೆ ಮುಕ್ತಗಗನ.   ಹಕ್ಕಿಗಳು ಹಾರಾಡುತ್ತವೆ ನಿಶ್ಶಬ್ದವಾಗಿ ಇಲ್ಲಿ  ರೆಕ್ಕೆ ಬಿಚ್ಚಿ ಮುಕ್ತವಾಗಿ ತೆರೆದ ಬಾನಿನಲ್ಲಿ, ಯಾರೊಬ್ಬರೂ ಸಾಯಲಿಲ್ಲ ಈ ಬಯಲಿನ ಮೇಲೆ, ಎಷ್ಟು ಪಳಗಿದೆ ಬಯಲುಗಾಳಿ, ನಿರ್ಲಕ್ಷ್ಯದಿಂದೆಷ್ಟು ಪವಿತ್ರವಾಗಿದೆ ಬಯಲೆಂದರೆ, ಇದರ ಹೆಸರನ್ನು ಮರೆಯುವುದೇ ಜನರು ಕೊಟ್ಟ ಬಳುವಳಿ.  At the Un-National Monument Along the Canadian Border Birds fly here without any sound, unfolding their wings across the open. No people killed — or were killed — on this ground hallowed by neglect and an air so tame that people celebrate it by forgetting its name. —William E. Stafford

ನಿನ್ನುಲಿಗೇ ಕಾದಿರಬಹುದು ಗದ್ದಲದ ಸಂತೆ!

ಇಮೇಜ್
  ಎಲ್ಲಿ ಕಾಣಲೇ ಇಲ್ಲವಲ್ಲ ಬಹಳ ದಿನ ಎಲ್ಲಿ ಹಾರಲು ಪ್ರೇರೇಪಿಸಿತು ಮನ! ಒಮ್ಮೊಮ್ಮೆಯಾದರೂ ಹಾಕುತ್ತಿರು ಸ್ವಂತಿ ಲೈಕ್ ಹಾಕಲಿ ಬಿಡಲಿ ಜನರು! ಏನಂತೀ? ಗೆಳೆಯರಾದ ಮೇಲೆ ಸ್ನೇಹ ಯಾಚಿಸಿ ಬಂದು ಕಾಣೆಯಾಗುವರಲ್ಲ ಕೆಲವು ಫೇಸ್ಬುಕ್ ಬಂಧು ಅವರಂತೆ ನೀನೂ ತಲೆ ಮರೆಸಿಕೊಂಡು ಹೋಗಿಬಿಟ್ಟೆಯೋ ಏನೋ ಮಾಡಿ ಅನ್ಫ್ರೆಂಡು! ಟ್ವೀಟ್ ಮಾಡುತ್ತಿರುವುದೆಲ್ಲ ಗೂಗೆ-ರಣಹದ್ದು ಎಂದು ನಿಲ್ಲಿಸಿಬಿಟ್ಟೆಯಾ ನಿನ್ನ ಚಿಲಿಪಿಲಿ ಸದ್ದು! ಯಾರೂ ಕಿವಿ ಮುಚ್ಚುವುದಿಲ್ಲ, ನಿನಗೇಕೆ ಚಿಂತೆ ನಿನ್ನುಲಿಗೇ ಕಾದಿರಬಹುದು ಗದ್ದಲದ ಸಂತೆ!

ಟಿ.ವಿ. (ರೋಆಲ್ಡ್ ಡಾಲ್ ಅವರ ರಚನೆ)

ಇಮೇಜ್
ಮೂಲ: ರೋಆಲ್ಡ್ ಡಾಲ್  ಅನುವಾದ: ಸಿ ಪಿ ರವಿಕುಮಾರ್  ಏನಪ್ಪಾ ಅಂದ್ರೆ ನಾವು ತಿಳಕೊಂಡ ಅತಿಮುಖ್ಯ ಸಂಗ್ತಿ  ಮಕ್ಕಳ ವಿಷಯದಲ್ಲಿ ನಾವು ಹಾಕಬೇಕಾದ ಮೇಲ್ಪಂಕ್ತಿ  ಅವರನ್ನು ಬಿಡಬಾರ್ದು ಬಿಲ್ಕುಲ್ ಖಡಾಖಂಡಿತ ಟೆಲಿವಿಷನ್ ಸೆಟ್ ಹತ್ತಿರವೂ ಗೊತ್ತಾಯ್ತ? ಅದಕ್ಕಿಂತಲೂ ಕೊಡ್ಲಾ ಇನ್ನೊಂದು ಸಲಹೆ? ತರಲೇ ಬೇಡಿ ಹಾಳಾದ್ದನ್ನು ಮನೆಗೆ. ನಾವು ಹೋಗಿ ನೋಡಿದ ಪ್ರತಿಯೊಂದು ಮನೆಯಲ್ಲೂ  ಕೂತಿದ್ದರು ಜನ ಸುರಿಸುತ್ತಾ ಜೊಲ್ಲು  ಚಪ್ಪರಿಸುತ್ತಾ ಬಾಯಿ ಕಣ್ಣು ಮಿಟುಕಿಸದೇ  ಹೊರಕ್ಕೆ ಬಂದು ಬಿಡುವಂತೆ ಕಣ್ಣುಗಳ ಗುಡ್ಡೆ - (ನೋಡಿದೆವು ಹೋದವಾರ ಒಬ್ಬರ ಮನೆಯಲ್ಲಿ  ನೆಲದ ಮೇಲೆ ಕಣ್ಗುಡ್ಡೆ ಹತ್ತಾರು ಚೆಲ್ಲಾಪಿಲ್ಲಿ) ಕುಳಿತು ದುರುಗುಟ್ಟುತ್ತಾರೆ, ಕೂಡುತ್ತಾರೆ ದುರುಗುಡ್ತಾ   ಹಾಗೇ ಅದರ ಮೋಡಿಗೆ ಒಳಗಾಗಿಬಿಡ್ತಾ  ಟೈಟ್ ಆಗುತ್ತಾರೆ ಕುಡಿ ಕುಡಿದು ಕುಡಿದು ಅದರಲ್ಲಿ ಬರುವ ಹೊಲಸು ಪ್ರತಿಯೊಂದೂ.  ಅವರೇಕೆ ಸ್ತಬ್ಧರಾಗಿದ್ದಾರೆ ನಮಗೀಗ ಗೊತ್ತು  ಹೊರಗೇ ಬರುವುದಿಲ್ಲ ಅವರು ಸಂಜೆ ಹೊತ್ತು  ಕೂತಿದ್ದಾರೆ ಕಬಡ್ಡಿ ಗಿರಗಿಟ್ಲೆ ಮರೆತು  ಅಡುಗೆ ಕೆಲಸವನ್ನೆಲ್ಲಾ ನಿಮಗೇ ಬಿಟ್ಬಿಟ್ಟು    ತೊಳೆ-ಬಳೆವ ಕೆಲಸವೂ ನಿಮ್ಮದೇ ಸ್ವತ್ತು  ಯೋಚಿಸಿದ್ದೀರಾ ಯಾವತ್ತಾದ್ರೂ ಸ್ವಲ್ಪ ಹೊತ್ತು  ಇದರ ಪರಿಣಾಮ ಮ...

ತೃಪ್ತರು

ಇಮೇಜ್
  ನಾವು ಅಡಿಗೆ ಕೆಲಸ ಮಾಡುವುದಿಲ್ಲ, ಏಕೆಂದರೆ  ಕುಳಿತಲ್ಲೇ ಬರುತ್ತದೆ ಆರ್ಡರ್ ಮಾಡಿದರೆ ನಾವು ಹೋಂ ವರ್ಕ್ ಮಾಡುವುದಿಲ್ಲ, ಏಕೆಂದರೆ ಮಾಡಿಕೊಡುತ್ತದೆ ಏಐ ನೀಡದೆ ಯಾವ ತೊಂದರೆ ಸ್ಕೂಲಿಗಾದರೂ ಯಾಕೆ ಹೋಗಬೇಕು ಹೇಳಿ ಕಲಿಯುತ್ತಿವೆಯಲ್ಲ ಮಶೀನ್ ದಿನಬೆಳಗಾದರೆ ಡ್ರೈವಿಂಗ್ ಕೂಡಾ ಈಗ ಬೇಕಾಗಿಲ್ಲ, ಏಕೆಂದರೆ ಬೇಕಿದ್ದರೆ ಹೋಗುತ್ತೇವೆ ಟ್ಯಾಕ್ಸಿ ಸರ್ವಿಸಿಗೆ ಮೊರೆ  ಹೊಲದಲ್ಲಿ ಕೆಲಸ ಮಾಡೆವು, ಏಕೆಂದರೆ ಇವೆಯಲ್ಲ ರೋಬಾಟ್ ಮಾಡುತ್ತವೆ ಹೇಳಿದರೆ ಗುಡಿಸಿ ಸಾರಿಸುವ ಕೆಲಸ ಕಲಿತಿಲ್ಲ ಏಕೆಂದರೆ  ಯಾಕೆ ಬೇಕು ಅವೆಲ್ಲ, ರೋಬಾಟ್ ಇರಬೇಕಾದರೆ ಎಲ್ಲವೂ ಬರುತ್ತದೆ ಬ್ರೋ ಆರ್ಡರ್ ಮಾಡಿದರೆ ಆರ್ಡರ್ ಮಾಡಲೂ ಆಪ್ ಇದೆಯಂತೆ ಬೇರೆ ಕೆಲಸವೇ ಕೈಲಾಸ ಎಂದೆಲ್ಲ ಹಲುಬಲು ನಾವು ಮುದುಕರೇ  ದುಡಿವ ರೋಬಾಟ್ ಹೋಗಲಿ ಕೈಲಾಸಕ್ಕೆ ಬೇಕಾದರೆ  ಸುಮ್ಮನೆ ಯಾಕೆ ಚಿಂತಿಸುತ್ತೀರಿ ಮಹಾಜನರೇ ರಾಜೀನಾಮೆ ಕೇಳಿದರಾಯ್ತು ಇವೆಲ್ಲ ಸಿಗದಿದ್ದರೆ ಇವರಲ್ಲದಿದ್ದರೆ ಅವರು, ಅವರಲ್ಲದಿದ್ದರೆ ಇನ್ನೊಬ್ಬರು ಯಾರಾದರೂ ಫ್ರೀ ಬೀ ಕೊಟ್ಟೇ ಕೊಡುತ್ತಾರೆ  ಪ್ರತಿಭಟಿಸಲು ಬೀದಿಗೆ ಇಳಿಯಬೇಕಿಲ್ಲ ಯಾರೂ  ರೋಬಾಟ್ ಬಂದಿವೆ ಅದಕ್ಕೂ ಎಂದು ಕೇಳಿರುವೆ.

ವ್ಯಾನ್ ಗೋ ಕಂಡ ಹಳ್ಳಿಯ ಹಾದಿ

ಇಮೇಜ್
  ಕುಂಚ ಆಡಿಸಿದ ವ್ಯಾನ್ ಗೋ ಬಣ್ಣದಲ್ಲಿ ಅದ್ದಿ  ಹಸಿರು ನೀಲಿ ಬಂಗಾರ ಹಳದಿ. ಬಾನಲ್ಲಿ ಚಿನ್ನ ಕರಗುವ ಹೊತ್ತು ಶಾಂತಿ ಎಲ್ಲಾ ಕಡೆಗೆ ಪಸರಿಸಿತ್ತು ಸದ್ದು ಮಾಡುತ್ತಾ ಹೊರಟಿದೆ ಕುದುರೆ ಸಾರೋಟು  ಅಗೋ ಇನ್ನೇನು ನಮ್ಮ ಹಳ್ಳಿ ಬಂತು ಕಲ್ಲುಹಾದಿಯ ಮೇಲೆ ಕಠಿಣ ಪ್ರವಾಸ ಮರೆತುಹೋಯಿತು ಪ್ರಯಾಣದ ಆಯಾಸ ಕಂಡಾಗ ದೂರದಲ್ಲಿ ಪರಿಚಿತ ಹಳ್ಳಿ ಇಕ್ಕೆಡೆಗೂ ಕೈಬೀಸುವ ಮರಗಿಡಬಳ್ಳಿ ಸೈಪ್ರೆಸ್ ಮರದಲ್ಲಿ ಹೊಕ್ಕು ತಂಗಾಳಿ ಬಳುಕುತ್ತಿದೆ ಮರ ಇಟ್ಟಂತೆ ಕಚಗುಳಿ. ನನ್ನ ಮೈಯೊಳಗೂ ಸಂಚರಿಸಿ ಅದೇ ಪುಳಕ ಮರೆಯುತ್ತೇನೆ ಒಂದೆರಡು ಕ್ಷಣ ಎಲ್ಲ ನರಕ. ಮನೆಯಲ್ಲಿ ನನಗಾಗಿ ಕಾಯುತ್ತಿರುವ ಹಿರಿಯ ಕೇಳುತ್ತಾನೆ ನೂರಾರು ಪ್ರಶ್ನೆ: ಬಂದೆಯಾ? ಹೇಗಿತ್ತು ದೂರದ ಪಟ್ಟಣದಲ್ಲಿ ವಾಸ? ಏನೇನು ಮಾಡಿದೆ ಒಳ್ಳೆಯ ಕೆಲಸ? ಕುಂಚ ಹಿಡಿದ ಕೈ ನಡುಗಿತು ಸಣ್ಣಗೆ ಪ್ರತ್ಯುತ್ತರ ಒಂದೂ ತೋರುತ್ತಿಲ್ಲ ನನಗೆ ಚಿಮ್ಮಿತು ಕಣ್ಣುಗಳ ತುದಿಯಲ್ಲಿ ನೀರು  ಸ್ವೀಕರಿಸುವುದೇ ನನ್ನನ್ನು ನನ್ನ ತವರೂರು ? ಏನು ಉಸುರುತ್ತಿದೆ ಸೈಪ್ರೆಸ್ ಮರಕ್ಕೆ ತಂಗಾಳಿ? ಏನೂ ಕೇಳುತ್ತಿಲ್ಲ ಗಾಡಿಯ ಗಡಗಡದಲ್ಲಿ . ಸಿ ಪಿ ರವಿಕುಮಾರ್  ಅಕ್ಟೋಬರ್ ೬, ೨೦೨೬

ಗಾಂಧಿಯ ಕೊಲೆ ಎಂಬ ಫೇಕ್ ನ್ಯೂಸ್

ಇಮೇಜ್
ಸಿ ಪಿ ರವಿಕುಮಾರ್  ಗಾಂಧಿ, ನಿನ್ನ ಕೊಲೆಯಾದದ್ದು ಕೂಡಾ ಫೇಕ್ ನ್ಯೂಸ್ ಇರಬಹುದೇ ಎಂಬ ಅನುಮಾನ ಹುಟ್ಟುತ್ತಿದೆ ಏಕೆಂದರೆ ಇಂದಿಗೂ ನಿನ್ನ ಮೇಲೆ ಗುಂಡಿನ ಮಳೆ ಪ್ರತಿದಿನವೂ ಸುರಿಯುತ್ತಿದೆ ಭೀತಿ ಹುಟ್ಟಿಸುವ ದ್ಯೂತದಲ್ಲಿ ಸೋತು ಹೋದರೆ ಹೇಗೆಂದು ಕೀತುಹೋದದ್ದನ್ನು ಪ್ರತಿನಿತ್ಯವೂ ಕಿತ್ತುವ ಪೀತಪತ್ರಿಕೆಯ ಪಾತಕ ಬರಹಗಳಲ್ಲಿ ಮಾತಿಗೆ ಬೆಲೆಯಿಲ್ಲದ ಸಾಮಾಜಿಕ ತಾಣಗಳಲ್ಲಿ  ಪ್ರತಿದಿನವೂ ನಿನ್ನ ಕೊಲೆಯಾಗುತ್ತದೆ ನೀನು ಭೀಷ್ಮಪಿತಾಮಹ ಹಾಗೆ ರಣರಂಗದಲ್ಲಿ  ನೇರವಾಗಿ ಕಾದಾಡಿ ಸೋಲಿಸಲು ಅಸಾಧ್ಯ ಹೇಗೆ ಕೊಲ್ಲುವುದು ಎಂದು ನಿನ್ನನ್ನೇ ಕೇಳಿದರೆ ತೋರಿಸುತ್ತೀಯೆ ನೀನೇ ದಾರಿ ಬರುತ್ತವೆ ನಿನ್ನ ಪೂರ್ವಜನ್ಮದಲ್ಲಿ ನೀನು ತಿಂದ  ಮಾಂಸ ತಂದೆಗೆ ಮಾಡಿದ ಮೋಸ ನೀನೇ ಹೇಳಿಕೊಂಡ ಕಥೆಗಳು ತೊಟ್ಟು ಹೊಸಹೊಸ  ವೇಷ ಸತ್ಯದೊಂದಿಗೆ ಪ್ರಯೋಗ ನಡೆಸುವ ಜನ ಚಿತ್ರವನ್ನು ಫೋಟೋಶಾಪ್ ಮೂಸೆಯಲ್ಲಿ ಕಾಯಿಸಿ ಕುಟ್ಟಿ ಬಡಿದು ಬಗ್ಗಿಸಿ ತೆಗೆಯುತ್ತಾರೆ ಎಲ್ಲರಿಗೂ ಸ್ವಯಂ ಗೋಚರ ಸತ್ಯ ನೀನು ಬಾಲೆಯೊಬ್ಬಳೊಂದಿಗೆ ಮಾಡುತ್ತಿರುವೆ ನೃತ್ಯ ತಂದೆ ಎಂದಿಗೂ ಹೇಳಿಕೊಳ್ಳಬಾರದು ಮಕ್ಕಳಿಗೆ ತನ್ನ ಯೌವ್ವನದ  ಎಡವಟ್ಟುಗಳನ್ನು ಮಕ್ಕಳಿಗೆ ಅಷ್ಟೇ ಸಾಕು ಅಪ್ಪನೂ ಮಾಡಿಬಿಟ್ಟದ್ದೇ ಎಂಬ ಅಣಕು ರಾಷ್ಟ್ರಪಿತನಾಗಿ ನೀನೂ ಇದನ್ನು ಪಾಲಿಸಬೇಕಾಗಿತ್ತು ಆದರೆ ನೀನು ಭಯಂಕರ ಸತ್ಯಾಗ್ರಹಿ ನಿನ್ನ ಪರವಾಗಿ ...

ರೀಲ್ ಆರೋಗ್ಯ ಭಾಗ್ಯ

ಇಮೇಜ್
  ಸಿ ಪಿ ರವಿಕುಮಾರ್  ಎಲುಬು ಗಟ್ಟಿಯಾಗಿರಲು ಪ್ರತಿದಿನ ತಿನ್ನಿ ಒಂದು ಸ್ಪೂನು ಎನ್ನುವವರು ಹೇಳಲಿ ಹೇಗೆ ತಿನ್ನಲಿ ಸ್ಪೂನನ್ನು ನಾನು ವೆಜಿಟೇರಿಯನ್ ಡಯಟ್ಟಿನಲ್ಲಿ ಇಲ್ಲವಂತೆ ಸಾಕಷ್ಟು ಪ್ರೋಟೀನು  ಮತ್ತು ಇದೆಯಂತೆ ಅದರಲ್ಲಿ ಧಂಡಿಯಾಗಿ ಪ್ರೋಟೀನು    ಕುಂಬಳಕಾಯಿ ಬೀಜ ಬಾದಾಮಿ ಹುರಿಗಡಲೆಯನ್ನು ಕುಟ್ಟಿ ಪುಡಿಮಾಡಿ ತಿನ್ನಬೇಕಂತೆ ಎರಡೆರಡು ಸ್ಪೂನು       ಕೂದಲು ಗಟ್ಟಿಯಾಗಿರಲು ದಿನಾ ಬೆಳಗ್ಗೆ ರಾತ್ರಿ ಏನೋ ಸೇವಿಸಬೇಕಂತಲ್ಲ ಮರೆತುಹೋಯಿತು ಏನು ಮರೆವು ಹೆಚ್ಚಾದರೆ ಅದಕ್ಕೂ ಇದೆ ಒಂದು ಸ್ಪೂನು ಎಂಥದ್ದೋ ಪುಡಿ, ತಿನ್ನಬೇಕು ಜೊತೆಗೆ ಜೇನು ಕೂದಲು ಇರುವುದೇ ಒಂದೆರಡು ಬೆಳ್ಳಗಾಗಿವೆ ಅವೂನೂ  ಮ್ಯಾಜಿಕ್ ತೈಲದ ಭರವಸೆ ಮಾತ್ರ ತೊರೆದಿಲ್ಲ ಇನ್ನೂ ಮುಂದೆ ಬಂದರೆ ಹೊಟ್ಟೆ ಪಾಪ ಆದರೆ ತಪ್ಪೇನು ಮುಂದೆ ಬರುವ ಇಚ್ಛೆ ನಿಮಗಿಲ್ಲವೇನು? ಪ್ರತಿಯೊಂದು ಅಂಗಾಂಗಕ್ಕೂ ಒಂದೊಂದು ಸ್ಪೂನು  ತಿನ್ನುವುದು ಯಾವಾಗ ಲಂಚ್ ಮತ್ತು ಡಿನ್ನರ್ ನಾನು   

ಹೂವು ಕೊಳ್ಳುವಾಗ

ಇಮೇಜ್
ಮೂಲ: ಏಮಿ ಗ್ರಿಮ್  ಕನ್ನಡ ಅನುವಾದ: ಸಿ ಪಿ ರವಿಕುಮಾರ್  ಪ್ರಿನ್ಸ್ ರಸ್ತೆಯಲ್ಲಿರುವ ಹೂವಿನ ಅಂಗಡಿಯಲ್ಲಿ ಕೆಲಸ ಮಾಡುವ ಮಹಿಳೆ ಇದ್ದಾಳಲ್ಲ ಅವಳು ಕೊರಿಯಾದಲ್ಲಿ ಸೂಲಗಿತ್ತಿಯೇ ಆಗಿದ್ದಿರಬೇಕು. ಗುಲಾಬಿಗಳನ್ನು ಟಿಶ್ಯೂ ಕಾಗದದಲ್ಲಿ ಜಾಗರೂಕತೆಯಿಂದ ಸುತ್ತುವಾಗ ಎಷ್ಟು ಮಮತೆಯಿಂದ ನೋಡುತ್ತಾಳೆ ಅವುಗಳ ಕಡೆಗೆ ಮತ್ತು ಇಡುತ್ತಾಳೆ ನಮ್ಮ ಕೈಯಲ್ಲಿ ಹಗುರವಾಗಿ. ಎಷ್ಟೆಂದರೆ ಕೊಡುತ್ತಿರುವಳೇನೋ ನಮ್ಮ ಕೈಗೆ ನವಜಾತ ಶಿಶುವನ್ನು ಅಥವಾ ಒಂದು ಗ್ರೆನೇಡನ್ನು ಎಂಬಂತೆ. ನನಗೆ ತಾಯಾಗುವುದು ಬೇಡ. ಆದರೂ ನನ್ನ ಎಡಗೈ ಕಂಕುಳಿಗೆ ಮಗುವನ್ನು ಎತ್ತಿಕೊಳ್ಳುವುದು  ಸಹಜ ಕ್ರಿಯೆ. ನಡೆದು ಬರುವಾಗ ಒಬ್ಬ ನಿರ್ಗತಿಕ ನನ್ನ ಕಡೆ ನೋಡಿ ಹೇಳಿದ್ದು  ಮಗುವಿನ ಮುಖ ನಿಮ್ಮಂತೆಯೇ ಇದೆ.

ಎಪ್ಪತ್ತೈದರ ವಯಸ್ಸಿನಲ್ಲಿ ಹಳೆಯ ಪುಸ್ತಕದ ಮರುಓದು

ಇಮೇಜ್
  ಮೂಲ : ಹೇಡೆನ್ ಕಾರುತ್ ಅನುವಾದ: ಸಿ ಪಿ ರವಿಕುಮಾರ್  ನನ್ನ ಪ್ರಾರ್ಥನೆಗಳು ಫಲ ನೀಡಿವೆ. ಅವುಗಳನ್ನು ಪ್ರಾರ್ಥನೆ ಎನ್ನುವುದಾದರೆ. ನಾನು ಬದುಕಿದ್ದೇನೆ. ಇನ್ನೂ ಜೀವಂತವಾಗಿದ್ದೇನೆ. ಆರೋಗ್ಯವಾಗಿಯೇ ಇದ್ದೇನೆ ಎನ್ನಬಹುದು. ಸಿಗರೇಟ್ ಬಿಟ್ಟರೆ ನೂರು ವರ್ಷ ಬದುಕಿಯೇನು. ಇದು ನಿಜಕ್ಕೂ ಆಶ್ಚರ್ಯವೇ - ಅಷ್ಟೆಲ್ಲ ಬಡತನ, ನೋವು ಅನುಭವಿಸಿ, ನರಳಿ. ಯಃಕಶ್ಚಿತ್ ಸಹನೆಯಿಂದ ಇಷ್ಟೆಲ್ಲ ಸಾಧ್ಯವಾದೀತೆಂದು  ಎಣಿಸಿರಲಿಲ್ಲ. ಮತ್ತು ಪ್ರಾರ್ಥನೆಗಳು? ಅವು ಪ್ರಾರ್ಥನೆಗಳಾಗಿದ್ದವೆ? ನಾನು ಉದ್ದಕ್ಕೂ ಯಾವ ಧರ್ಮಕ್ಕೂ ಅಂಟಿಕೊಳ್ಳದ ಛಲಕ್ಕೆ ಬಲವಾಗಿ ಅಂಟಿಕೊಂಡವನು. ಅದಕ್ಕೆ ಕಾರಣವೂ ಇತ್ತು. ಇಷ್ಟಾದರೂ  ಈಗ ವಯಸ್ಸಾದ ಮೇಲೆ ನನಗೆ ಅರ್ಥವಾಗುತ್ತಿದೆ, ಪ್ರಾರ್ಥನೆ ಎಂದರೆ ಅದೊಂದು ಶಿಸ್ತಲ್ಲ, ಸಿದ್ಧಾಂತವಲ್ಲ, ಇನ್ನಿತರ ಪ್ರಾಣಿಗಳಿಗಿಂತ ವಿಭಿನ್ನವಾಗಿ  ಮನುಷ್ಯನ ಪ್ರಾಕೃತಿಕ ಬುದ್ಧಿಯ ಚಲನೆ. ನಾನು ಪ್ರಾರ್ಥಿಸಿದೆ. ಮತ್ತು ಹಾಳೆಗಳ ಮೇಲೆ ಬರೆದಿಟ್ಟುಕೊಂಡೆ ನಾನು ಉಸುರಿದ ಒಂದಿಷ್ಟು ಪದಗಳನ್ನು. ಅವೇ ಈ ಪದ್ಯಗಳು.

ಮಳೆ ಪದ್ಯ

 ಮಳೆ ಪದ್ಯ  ಮಳೆ ಬರುತ್ತಿದೆ, ಹೊಯ್ಯುತ್ತಿದೆ,  ಧೋ ಎಂದು ಸುರಿಯುತ್ತಿದೆ. ಟಪಟಪ ಉದುರುತ್ತಿದೆ. ತುಂತುರು ತುಂತುರಾಗಿ ಒಮ್ಮೆ ಪಟಪಟ ಬೀಳುವ ಹನಿ. ಧಾರಾಕಾರವಾಗಿ ಇನ್ನೊಮ್ಮೆ ದೇವರು ಸುರಿಸಿದಂತೆ ಕಂಬನಿ. ಮುಸಲಧಾರೆಯಾಗಿ ಒಮ್ಮೊಮ್ಮೆ ಓಬವ್ವನ ಒನಕೆ. ಹನಿಹನಿಯಾಗಿ ಒಮ್ಮೊಮ್ಮೆ ತನಿ ಆವರ್ತನೆ ವಿನಿಕೆ. ಜಿನುಗುತ್ತದೆ, ಆಕಾಶಕ್ಕೆ ತೂತು ಬಿದ್ದಂತೆ. ಕೆಲವೊಮ್ಮೆ ಪುಷ್ಪವೃಷ್ಟಿ  ಮಣ್ಣಿನ ಕಂಪು ಮೇಲೆದ್ದಂತೆ. ಕೆಲವೊಮ್ಮೆ ಕುಳಿರ್ಗಾಳಿ ಜೊತೆಯಾಗಿ ಬೆಚ್ಚಗೆ ಕಂಬಳಿ ಹೊದ್ದಂತೆ. ಕದ್ದಿಂಗಳು, ಕಗ್ಗತ್ತಲು, ಕಾರ್ಮೋಡದ ರಾತ್ರಿ ಕೋಲ್ಮಿಂಚು, ಗುಡುಗು, ಸಿಡಿಲುಗಳ ಜೊತೆ. ಹೂ ಬಿಸಿಲಲ್ಲಿ ಕೆಲವೊಮ್ಮೆ ಸಪ್ತವರ್ಣದ ಸ್ವರ್ಣಲತೆ. ಶ್ರಾವಣದ ಬಲ್ಸೋನೆಗೆ ಬೇಸತ್ತ  ಮನೋರಮೆಗೆ ಕತೆ ಕೇಳುವ ಉತ್ಸುಕತೆ. ಗೌರಿ ಹಬ್ಬದ ದಿವಸ  ಬೀಳುವ ಗೌರಿ ಜಡಿ. ಕಾಮದಹನದ ಬಳಿಕ   ತಣಿಸಲು ರತಿಯ ದಳ್ಳುರಿ. ನಂಬಲಾರದ ಚಿತ್ತಾ ಮಳೆ . ತುಂಬಿಕೊಡುವ ಉತ್ತರೆ ಮಳೆ. ಧೈರ್ಯವಾಗಿ ಮುಂದೆಯೇ ಕಾರುವ ಮುಂಗಾರು. ಬೆನ್ನಹಿಂದೆ ಕಾರುವ ಹಿಂಗಾರು. ಕಂಗೊಳಿಸುವ ಹಸಿರು ಹೊಳೆ. ಉತ್ತು ಬಿತ್ತು ಪೈರು ಬೆಳೆ. ಟಿವಿಯಲ್ಲಿ ಸದಾ ಕೂಗಾಡುವ ರಣಮಳೆ.

ಕರೆಯಂ ಕಟ್ಟಿಸು ಬಾಯಿಯಂ ಸವೆಸು

"ಕೆರೆಯಂ ಕಟ್ಟಿಸು, ಬಾವಿಯಂ ಸವೆಸು" ಎಂದು ಕನ್ನಡತಿ ತಾಯಿಯೊಬ್ಬಳು ಒಬ್ಬ ಮಗನಿಗೆ ಹಾಲೂಡಿಸುವಾಗ ಕಿವಿಯಲ್ಲಿ ಹೇಳಿದಳಂತೆ. ಅವನು ಮುಂದೆ ಅಮಾತ್ಯನಾಗಿ ಕೆರೆ-ಕಟ್ಟೆ-ಬಾವಿಗಳನ್ನು ತೋಡಿಸಿದನಂತೆ.  "ಕೆರೆಯಂ ಮುಚ್ಚಿಸು, ಕಟ್ಟಡಮಂ ಕಟ್ಟಿಸು" ಎಂದು ಅದು ಯಾರು ಯಾರ ಕಿವಿಯಲ್ಲಿ ಉಸುರಿದರೋ ಕಾಣೆ. ಬೆಂಗಳೂರಿನ ಅನೇಕ ಎ-ಕೆರೆಗಳು ಎಕರೆಗಳಾಗಿ ಬಿಕರಿಯಾಗಿದ್ದು ಈಗ ಹಳೆಯ ಕಥೆ. ತೊಂಬತ್ತರ ದಶಕದಲ್ಲಿ  ಬೆಂದಕಾಳೂರು ಸಿಲಿಕಾನ್ ವ್ಯಾಲಿಯಾಗಿ ಬದಲಾಗತೊಡಗಿದ್ದು ಅಕ್ಕಪಕ್ಕದ ಊರುಗಳ ಕೆರೆಗಳಿಂದ ಅಹೋರಾತ್ರಿ ಲಾರಿಗಳಲ್ಲಿ ಸಿಲಿಕಾನ್ ಅರ್ಥಾತ್ ಮರಳು ಬಂದು ಬೀಳತೊಡಗಿದಾಗ.  ಆ ಕೆರೆಯ ಮರಳನು ಈ ಕೆರೆಗೆ ಚೆಲ್ಲಿ ವರವ ಪಡೆದ ಭೂಪರು ಏಕಾಏಕಿ ಸಿರಿವಂತರಾದರು.  ತರೀಕೆರೆ ಏರಿ ಮೇಲೆ ಅದೆಷ್ಟು ಕುರಿಗಳು ಮೇಯುತ್ತಿದ್ದವೋ ಗೊತ್ತಿಲ್ಲ. ಬೆಂಗಳೂರಿನ ಕೆರೆ ಏರಿ ಮೇಲಂತೂ ತೋಳಗಳು ಕುರಿಗಳ ಕೈಕುಲುಕಿ ದೇಶಾವರಿ ನಗೆ ಬೀರಿದ್ದನ್ನು ನೋಡಿದವರು ಇದ್ದಾರೆ.   "ಇರುಳು ಕಂಡ ಬಾವಿಯಲ್ಲಿ ಹಗಲು ಬಿದ್ದರಂತೆ" ಎಂಬ ಗಾದೆಯನ್ನು "ಇರುಳು ಕಂಡ ಕೆರೆಯಲ್ಲಿ ಹಗಲು ಇದ್ದರಂತೆ" ಎಂದು ಬದಲಾಯಿಸಬೇಕಾಯಿತು.  ಒಂದು ಘಟನೆ ಹೀಗೂ ನಡೆಯಿತೆಂದು ಹೇಳುತ್ತಾರೆ.   ಅದೆಷ್ಟು ನಿಜವೋ ಕಾಣೆ. ಕೆರೆ-ಎಸ್ಟೇಟಿನ ಮೇಲೆ ಕಟ್ಟಿದ ಬಹುಮಹಡಿ ಕಟ್ಟಡವೊಂದರಲ್ಲಿ ಮೊದಲನೇ ಮಹಡಿಯಲ್ಲಿ ಮನೆ ಖರೀದಿಸಿದವರೊಬ್ಬರು ಗೃಹಪ್ರವೇಶದ ನಂತರದ ದಿನ ಮನೆ ಬಾಗಿಲು...

ಚಾಟ್ ಜಿಪಿಟಿ

 ಗಜಲ್ 🌹 ಇನ್ನೆಷ್ಟು ಜಗಳಗಳನ್ನು ತಂದಿಡುವುದೋ ಚಾಟ್ ಜಿಪಿಟಿ ಅದನ್ನೂ ನೀನೇ ಹೇಳಿಬಿಡು ಚಾಟ್ ಜಿಪಿಟಿ ಎಷ್ಟು ತ್ರಿಶಂಕುಗಳಿಗೆ ನೀನು ಕೊಡಿಸುವೆ ಮುಕ್ತಿ ಅದನ್ನೂ ನೀನೇ ಹೇಳಿಬಿಡು ಚಾಟ್ ಜಿಪಿಟಿ ಹುಟ್ಟುವ ಮಕ್ಕಳ ಮಿದುಳಲ್ಲಿ ಚಾಟ್ ಜಿಪಿಟಿ - ಚಿಪ್ಪು ಜೋಡಿಸಬಹುದೇ ಹೇಳು ಚಾಟ್ ಜಿಪಿಟಿ ಮಾತಾಡಿಕೊಳ್ಳುತ್ತಾರೆ ಸ್ಕ್ರೋಲ್ ಮಾಡುತ್ತ ಪಿಟಿಪಿಟಿ ನಿನ್ನದೇ ಜಪ ಮಾಡುತ್ತಾರೆ ಚಾಟ್ ಜಿಪಿಟಿ ಎಲ್ಲರೂ ಜಾಣರಾಗಿ ಸಿದ್ಧವಾಗಿದೆ ಸ್ಮಾರ್ಟ್ ಸಿಟಿ ಹೇಳು ಇನ್ನೇನು ಬೇಕು ಜೀವಕ್ಕೆ, ಚಾಟ್ ಜಿಪಿಟಿ ಗಜಲ್ 🌹🌹  ಎಲ್ಲ ಕೆಲಸಗಳನ್ನೂ ಮಾಡಲಿದೆ ಏಐ  ಕೈಗೆ ಕೆಲಸವಿಲ್ಲದೆ ಮಿಲಾಯಿಸೋಣ ಕೈಕೈ ಎಲ್ಲರಿಗೂ ಎಲ್ಲ ನೀಡಲಿದೆ ಏಐ ತಾಳು ಮನವೇ ಸುಮ್ಮನೇ ತಲ್ಲಣಿಸದಿರೈ ಎಲ್ಲರಿಗೂ ವಿದ್ಯೆ ನೀಡಲಿದೆ ಏಐ  ಹೇಳಿರಿ ಎಲ್ಲರೂ ವಿದ್ಯಾ ಏಐಪತಿಕೀ ಜೈ ಎಲ್ಲರಿಗೂ ಬುದ್ಧಿ ನೀಡಲಿದೆ ಏಐ  ಎಲ್ಲರಿಗೂ ಸದ್ಬುದ್ಧಿಯೇ ಎಂದು ಹೇಳಲಾಗದೈ  ಎಲ್ಲರಿಗೂ ಜ್ಞಾನ ನೀಡಲಿದೆ ಏಐ  ಗುರುಪೂರ್ಣಿಮೆಯ ದಕ್ಷಿಣೆ ಏಐಗೆ ನೀಡಿರೈ

ಬ್ಯಾಗ್ ಭಾಗ್ಯ

  ಬ್ಯಾಗ್ ಭಾಗ್ಯ ಎಲ್ಲರ ಮನೆಯಲ್ಲೂ ಇರುತ್ತದೆ ಒಂದಲ್ಲ ಹತ್ತು ಬ್ಯಾಗುಗಳ ಸಂಗ್ರಹ ಬಿಚ್ಚಿ ನೋಡಿದರೆ ಬೇರೇನೂ ಇರದು ಇನ್ನಷ್ಟು ಬ್ಯಾಗುಗಳ ವಿನಃ ಕೆಲವು ಪ್ಲಾಸ್ಟಿಕ್ ಕೆಲವು ದಪ್ಪ ಕಾಗದ ಮೇಲೆ ಆಕರ್ಷಕ ಚಿತ್ರ, ಬರಹ. ಎಸೆಯಲು ಮನಸ್ಸಾಗದೆ ಎಲ್ಲವೂ ಸೇರುತ್ತವೆ ಬ್ಯಾಗುಗಳ ಸಂಗ್ರಹ. ಮಾಡಲು ಹೊರಟಾಗ ಶಾಪಿಂಗ್ ಬ್ಯಾಗ್ ಮರೆಯುತ್ತದೆ ಅಯ್ಯೋ ಹಣೆಬರಹ. ಮರಳಿ ಬಂದಾಗ ಇನ್ನಷ್ಟು ಬೆಳೆಯುತ್ತದೆ. ಬ್ಯಾಗು ಗ ಳ ಸಂ ಗ್ರಹ . C.P. Ravikumar

ಕಂಗಳಲಿ ಒಂದು ಕಥನ

ಇಮೇಜ್
ಕಂಗಳಲಿ ಒಂದು ಕಥನ ಒಂದಿಷ್ಟು ಮೋಡ ಒಂದಿಷ್ಟು ನೀರು ಮತ್ತೊಂದು ಕಥನ ನಯನದ್ವಯ ಜಲಧಾರೆಯ ಹರಿಸುತ್ತಿರುವುವು  ಕಿವಿಗೊಡುವಿರೋ ಯಾ ಇಲ್ಲವೋ ಹೇಳುತ್ತಿರುವುವು ವಹಿಸಿದರೂ ಗಹನ ಮೌನ ನಿಂತಾಗ ಕಂಬನಿಧಾರೆಯು, ಮಾತೂ ಮುಗಿವುದು ಮಾತನ್ನು ಕೇಳಿಸಿಕೊಂಡರೆ ಏನೋ ಸಿಗುವುದು ಹಳೆಯದು ಹಾಗೂ ನವೀನ ಇರುಳೊಂದು ಜಾರಿದಕೂಡಲೆ ಇರುಳೇ ಕವಿದಿದೆ ಮರೆತಿರುವ ಯಾವುದೋ ಮಾತು ನಾಲಿಗೆಯ ಮೇಲಿದೆ ನೂರೆಂಟು ನುಡಿವ ನಯನ ಮೂಲ : ಗುಲ್ಜಾರ್ ಕನ್ನಡಕ್ಕೆ: ಸಿ ಪಿ ರವಿಕುಮಾರ್ ಚಿತ್ರ: ಮಾಸೂಮ್ 

ನೂರು ವರ್ಷಗಳ ತರುವಾಯ

ಇಮೇಜ್
  ನೂರು ವರ್ಷಗಳ ತರುವಾಯ ನನ್ನ ಕವಿತೆ ಓದುತ್ತ ನಿಂತಿರುವೆ, ಯಾರು ನೀನು? ನಿನಗಾಗಿ ಈ ವಸಂತಸಂಪದದಿಂದ  ಕಳಿಸಲಾರೆ ಒಂದಾದರೂ ಹೂವನ್ನು. ಮುಗಿಲುಗಳ ಸ್ವರ್ಣಿಮ ಅಂಚುಗಳಿಂದ ನಿನಗಾಗಿ ಕಳಿಸಲಾರೆ ಒಂದಾದರೂ ಹೊನ್ನರೇಖೆ. ನಿನ್ನ ಬಾಗಿಲು ತೆರೆದು ನೋಡಿದರೆ ಹೊರಗಡೆಗೆ ಕಾಣುವುದು ಮುಗುಳುಗಳ ಹೊತ್ತ ಶಾಖೆ ಬಿಡಿಸಿಕೋ ನೂರು ವರ್ಷಗಳ ಹಿಂದೆ ಹೀಗೇ ಅರಳಿ ಮಾಯವಾದ ಕುಸುಮಗಳ ಗಂಧ: ಪ್ರಫುಲ್ಲ ಮನದ ಉದ್ಯಾನದಲ್ಲಿ ಕೇಳಲಿ ನೂರು ವರ್ಷಗಳ ಹಿಂದೆ ಜೀವನಾನಂದದಿಂದ  ಹೀಗೇ ವಸಂತದ ಒಂದು ಸುಂದರ ದಿವಸ ಹಾಡಿದ ಒಂದು ಕೋಕಿಲ ಕಂಠದದುಲ್ಲಾಸ. ಮೂಲ: ರವೀಂದ್ರನಾಥ ಟ್ಯಾಗೋರ್  ಕನ್ನಡಕ್ಕೆ: ಸಿ ಪಿ ರವಿಕುಮಾರ್

ಟೊಮೇಟೋ ಹಣ್ಣುಗಳು

ಇಮೇಜ್
ಮೂಲ: ಜಾಯ್ ಸಲೈವನ್  ಕನ್ನಡಕ್ಕೆ: ಸಿ ಪಿ ರವಿಕುಮಾರ್  ಅದೆಷ್ಟು ದಿನ ಕಾದಿದ್ದೆ ನಾನು ಪ್ರೀತಿಗಾಗಿ ಒಮ್ಮೆಲೇ ದೊರೆಯಿತು ತೋಟದಲ್ಲಿ ಇಂದು ಸೂರ್ಯನ ಶಾಖಕ್ಕೆ ಮಾಗಿ ಕೈತುಂಬಿದವು ಚರಾಸ್ತಿಯಂತೆ ಬೊಗಸೆಗೆ ಬಂದು. ಸಂಜೆಯ ಅಡುಗೆಗೆ ಈಳಿಗೆಮಣೆಯನ್ನೇರಿ  ಉಪ್ಪುಮೆಣಸುಗಳ ಸಿಂಗಾರ ಹೇರಿ ಬ್ರೆಡ್ ತುಂಡುಗಳ ನಡುವೆ ಸೇರಿಕೊಳ್ಳುತ್ತವೆ. ನನ್ನ ನಿತಂಬಗಳು ಹಣ್ಣಾಗುತ್ತವೆ. ಹಣ್ಣಾಗುತ್ತದೆ ನಿನ್ನ ಗಡ್ಡ. ಶೇಖರವಾಗುತ್ತದೆ ಅಂಚೆಗಳ ಗುಡ್ಡ. ಫೋನ್ ಕರೆಗಳಿಗೆ ಉತ್ತರಿಸಲು ಆಗುತ್ತಿಲ್ಲ. ಕ್ಷಮಿಸಿ, ಟೊಮೇಟೋ ತುಂಬಿದೆ ನಮ್ಮ ಬಾಯ್ತುಂಬ. ನಾವು ತೀರಾ ವ್ಯಸ್ತರಾಗಿದ್ದೇವೆ  ಅಲ್ಪರಾಗಿ, ಹಸಿದವರಾಗಿ, ತೊಟ್ಟು ಬಾಳ್ವೆಯ ಬಂಧ.

ದೀಪಗಳು

ಇಮೇಜ್
  ಸಿ ಪಿ ರವಿಕುಮಾರ್ (ಮಹಾದೇವಿ ವರ್ಮಾ ಅವರ ಹಿಂದಿ ಕವಿತೆಯನ್ನು.ಆಧರಿಸಿ) ಹರಿದ್ವಾರದಲ್ಲಿ ಒಂದು ಸಂಜೆ. ಗಂಗೆಗೆ ಆರತಿ ನಡೆಯುತ್ತಿತ್ತು.  ಜನ ತಮ್ಮ ಕೈಗಳಲ್ಲಿ ಆರತಿಯ ತಟ್ಟೆಗಳನ್ನು ಹಿಡಿದು ನಿಂತಿದ್ದರು. ಬಿದಿರಿನ ತಟ್ಟೆಗಳ ಮೇಲೆ ಹಸಿರು ಎಲೆಗಳನ್ನು ಹಾಸಿ ಮೇಲೆ ಹೂವುಗಳನ್ನು ಇರಿಸಲಾಗಿತ್ತು. ಪ್ರತಿಯೊಂದು ತಟ್ಟೆಯಲ್ಲೂ ಒಂದು ದೀಪ.  ಗಂಗೆಯನ್ನು ಪ್ರಾರ್ಥಿಸಿ ಅವಳು ದೀಪವನ್ನು ತೇಲಿಬಿಟ್ಟಳು. ನದಿಯ ಇನ್ನೊಂದು ದಡದಲ್ಲಿ ಅವನು ಕೂಡಾ ದೀಪವನ್ನು ತೇಲಿಬಿಟ್ಟನು. ಅವಳ ಕೈಯಲ್ಲಿ ಪೂಜೆ ಮಾಡಿಸಿದ ಅರ್ಚಕ "ಮನಸ್ಸಿನಲ್ಲಿ ನಿನ್ನ ಆಸೆ ಹೇಳಿಕೋ. ಗಂಗಾ ಮಾತೆ ಖಂಡಿತ ಪೂರೈಸುತ್ತಾಳೆ" ಎಂದು ಹೊರಟು ನಿಂತ. ಅವಳು ಕಣ್ಮುಚ್ಚಿ ಧ್ಯಾನಸ್ಥಳಾದಳು. ತಾನು ಹಚ್ಚಿದ ದೀಪವು ತೇಲುತ್ತಾ ಹೋಗುವುದನ್ನು ನೋಡುತ್ತಾ ನಿಂತಳು. ಸ್ವಲ್ಪ ಹೊತ್ತಿನ ನಂತರ ದೀಪವು ಕಾಣದಂತೆ ಮರೆಯಾಯಿತು. ದೂರದ ದಡದಲ್ಲಿ ಅವನ ಜೊತೆ ಇದ್ದ ಹುಡುಗರು "ಏನು ಕೇಳಿಕೊಂಡೆ ಗಂಗಾಮಾತೆಯಲ್ಲಿ?" ಎಂದು ರೇಗಿಸಿದರು. ಅವಳು ಹಚ್ಚಿದ ದೀಪ ತೇಲುತ್ತಾ ಹೋಗುತ್ತಿತ್ತು. ಅವನು ಹಚ್ಚಿದ ದೀಪ ಓಲಾಡುತ್ತಾ ಅವಳ ದೀಪವನ್ನು ಸಮೀಪಿಸಿತು. ಎರಡೂ ದೀಪಗಳು ಪರಸ್ಪರ ನೋಡಿ ಒಟ್ಟಿಗೆ ತೇಲುತ್ತಾ ಸಾಗಿದವು. ಅವುಗಳ ಅಕ್ಕಪಕ್ಕದಲ್ಲೂ ಅಸಂಖ್ಯ ದೀಪಗಳು ಮಿನುಗುತ್ತಾ ಸಾಗುತ್ತಿದ್ದವು.   ಸಂಜೆ ಕಳೆದು ಕತ್ತಲು ಆವರಿಸಿದಂತೆ ದೀಪಗಳು ನದಿಯಲ್ಲಿ  ತೇಲಿಕೊಂಡು ಹೋಗುವ ದೃಶ್ಯ ಎಲ್ಲ...

ನಡುಗುವ ಜನರಿಗೆ

ಇಮೇಜ್
ಕವಿಗಳು ಅತ್ಯಂತ ಧೈರ್ಯಶಾಲಿಗಳ ಸಾಲಿನಲ್ಲಿ ನಿಲ್ಲುತ್ತೇವೆ. ಬೇರೆಯವರು ಮುಚ್ಚಿಡುವುದನ್ನು ನಾವು ಬಿಚ್ಚಿ ತೋರುತ್ತೇವೆ ನಾಜೂಕಾದದ್ದನ್ನು ಮೇಲೆತ್ತಿ ಅದರ ಮೇಲೆ ಬೆಳಕು ಚೆಲ್ಲಿ ಪಿಸುಗುಡುತ್ತೇವೆ "ನೋಡಿ, ಅನುಭವಿಸುವುದು ಎಂದರೆ ಇದೇ." ಹೃದಯ ಛಿದ್ರವಾದಾಗಲೂ ಅದಕ್ಕೆ ನೀಡುತ್ತೇವೆ  ಭಾಷೆಯ ಬ್ಯಾಂಡೇಜು ಹತ್ತಿ ಎಷ್ಟೇ ಉರಿಯಾದರೂ ಮಸಿಯು ಔಷಧವೆಂಬ ನಂಬಿಕೆ ಬಿತ್ತಿ  ಬರವಣಿಗೆ ಮುಂದುವರೆಸುತ್ತೇವೆ,  ಏಕೆಂದರೆ ಎಲ್ಲಾದರೂ ಇದ್ದಾರು ಜನ ಯಾರಿಗೆ ಬೇಕೋ ತಮ್ಮಂತೆ ನಡುಗುವವರು ಇನ್ನೂ ಇದ್ದಾರೆಂಬ ಸಾಂತ್ವನ. ಮೂಲ: ತಾಲಿಯಾ ಕ್ಲೆಮ್  ಕನ್ನಡಕ್ಕೆ: ಸಿ ಪಿ ರವಿಕುಮಾರ್

ಪ್ರೇತನರ್ತನ

ಇಮೇಜ್
 ಈಗ ಮಾಧ್ಯಮದಲ್ಲಿ ಪ್ರತಿನಿತ್ಯ ಪ್ರೇತಗಳ ನರ್ತನ ಎಪ್ಸ್ಟೀನ್ ಮಾಡಿದ ಪಾಪಗಳ ಪುನರಾವರ್ತನ ಒಳ್ಳೆಯ ಕಾರ್ಯಗಳನ್ನು ನೆನಪಿಡಲಾರರು ಜನ ಕೆಟ್ಟದ್ದನ್ನು ಕಾಪಾಡುವರು ನೆನೆಯುವರು ಅನುದಿನ ಹೇಗೆ ವೃದ್ಧಿಸುವುದೋ ಬ್ಯಾಂಕಿನಲ್ಲಿಟ್ಟ ಹಣ ಹಾಗೇ ಬಡ್ಡಿ ಗಳಿಸುವುದು ಕೂಡಿಟ್ಟ ಋಣ ನೀವು ದೊಡ್ಡವರೆಂದು ನಂಬಿದ್ದ ವಿದ್ವಜ್ಜನ ಮುಖವಾಡ ಕಳಚಿ ನೈಜದ ಅನಾವರಣ ಕೊಟ್ಟುಬಿಟ್ಟಿದ್ದೇವೆ ಇವರಲ್ಲಿ ಹಲವರಿಗೆ ಪದ್ಮಭೂಷಣ  ಅವಾರ್ಡ್ ವಾಪಸಿಗೆ ಈಗ ಅತ್ಯಂತ ಸೂಕ್ತ ಕ್ಷಣ

ಮೂರು ವ್ಯಾಲೆಂಟೈನ್ ಗುಲಾಬಿಗಳು

ಇಮೇಜ್
  ಮೂರು ವ್ಯಾಲೆಂಟೈನ್ ಗುಲಾಬಿಗಳು (೧) "ಕಾಸಿಮಿರ್! ಕಾಸಿಮೀರ್! ಎಲ್ಲಿ ಹೋದ ಈ ಹುಡುಗ!"  ತಾಯಿ ತನ್ನ ಮಗನನ್ನು ಜೋರಾಗಿ ಕರೆಯುತ್ತಾ ತಲೆಬಾಗಿಲಿನ ಹತ್ತಿರ ಬಂದಳು. ಅವರದ್ದು ದೊಡ್ಡ ಮನೆ. ಮಹಡಿಯ ಮೂರು ಕೋಣೆಗಳಲ್ಲದೆ ಕೆಳಗೆ ನಾಲ್ಕು ಕೋಣೆಗಳು, ದೊಡ್ಡ ಬೈಠಕ್ ಖಾನೆ. ಆರು ಮಕ್ಕಳ ದೊಡ್ಡ ಸಂಸಾರ. ಕಾಸಿಮಿರ್ ಹಿರಿಯ ಮಗ. ತಂದೆತಾಯಿಯ ಅಚ್ಚುಮೆಚ್ಚು. ಗಣಿತದಲ್ಲಿ ಅವನು ತುಂಬಾ ಪ್ರತಿಭಾಶಾಲಿ ಎಂದು ಅವನ ಶಾಲೆಯ ಉಪಾಧ್ಯಾಯರು ಮನೆಗೇ ಬಂದು ತಿಳಿಸಿದ್ದರು. "ನಿಮ್ಮ ಹುಡುಗ ಮುಂದೆ ಖಂಡಿತಾ ದೊಡ್ಡ ಗಣಿತಶಾಸ್ತ್ರಜ್ಞ ಆಗುತ್ತಾನೆ, ನೋಡುತ್ತಿರಿ! ಅವನನ್ನು ಮುಂದೆ ಓದಿಸಿ. ಕಾಲೇಜಿಗೆ ಹೋಗಿ ಪಿಎಚ್. ಡಿ. ಮಾಡಲಿ. ನಾನು ಈ ಮಾತನ್ನು ಎಲ್ಲಾ ಪೋಷಕರಿಗೂ ಹೇಳುವುದಿಲ್ಲ!" ಎಂದು ಪ್ರೊ. ಕಮಿನ್ಸ್ಕಿ ಹೇಳುತ್ತಿದ್ದಾಗ ತಾಯಿಯ ಎದೆ ಹೆಮ್ಮೆಯಿಂದ ಉಬ್ಬಿತು. ಅವಳು ತಟ್ಟೆಯಲ್ಲಿ ಎಲೆಕೋಸಿನ ಖಾದ್ಯಗಳನ್ನು ತಂದಿಟ್ಟಳು. ಬಟ್ಟಲಿಗೆ ಬಿಸಿ ಚಹಾ ಸುರಿದು "ದಯವಿಟ್ಟು ಸ್ವೀಕರಿಸಿ" ಎಂದಳು. ಪ್ರೊ. ಕಮಿನ್ಸ್ಕಿ ತೆರಳಿದ ಮೇಲೆ ಅವಳು ಪತಿಯ ಕಡೆ ನೋಡಿ "ನಮ್ಮ ಕಾಸಿಮಿರ್ ಖಂಡಿತಾ ಪೋಲೆಂಡ್ ದೇಶಕ್ಕೆ ಹೆಸರು ತರುತ್ತಾನೆ!" ಎಂದಳು. ಹಳೆಯದನ್ನೆಲ್ಲ ನೆನೆದು ಅವಳ ಕಂಠ ಗದ್ಗದವಾಯಿತು. ಕ್ಯಾಸಿಮಿರಾ ಮನೆಯ ಬಾಗಿಲಿನಲ್ಲಿ ನಿಂತು ಸುತ್ತಲೂ ನೋಡಿದಳು. ದೂರದಲ್ಲಿ ಕ್ಯಾಸಿಮಿರ್ ಬರುತ್ತಿದ್ದುದು ಕಾಣಿಸಿತು. ಅವನ ಕೈಯಲ್ಲಿ ಪುಸ...