ಪೋಸ್ಟ್‌ಗಳು

ಆಗಸ್ಟ್, 2018 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಎದುರಾಯಿತು ಮೃತ್ಯು!

ಇಮೇಜ್
ಮೂಲ ಹಿಂದಿ ಕವಿತೆ - ಅಟಲ್ ಬಿಹಾರಿ ವಾಜಪೇಯಿ  ಕನ್ನಡಕ್ಕೆ - ಸಿ. ಪಿ. ರವಿಕುಮಾರ್  (ಕಲೆ-ಮಂಜುನಾಥ್ ಭಂಡಾರಿ) ಎದುರಾಯಿತು! ಎದುರಾಯಿತು  ಮೃತ್ಯು ! ಎದುರಿಸಿ ಸೆಣಸುವ ಇರಾದೆ  ಇರಲಿಲ್ಲ ಯಾವತ್ತೂ  ದಾರಿಯಲ್ಲಿ ಸಿಕ್ಕುವೆನೆಂದು ಕೊಟ್ಟಿರಲಿಲ್ಲ ಮಾತು  ದಾರಿಗೆ ಅಡ್ಡ ಹಾಕಿ ನಿಂತು ಬಿಟ್ಟಿತು ಮೃತ್ಯು  ಬದುಕಿಗಿಂತಲೂ ದೊಡ್ಡವನೆಂದು ಬೀಗುತ್ತಿತ್ತು  ಮೃತ್ಯುವಿನ ಆಯಸ್ಸಾದರೂ ಎಷ್ಟು? ಕೇವಲ ಒಂದೆರಡು ಕ್ಷಣ! ಹೋಲಿಸಿದರೆ ಬದುಕಿನ ಲೆಕ್ಕಾಚಾರಕ್ಕೆ ಯಃಕಶ್ಚಿತ್, ಗೌಣ! ಮುದುಡುವುದೇ ನನ್ನ ಮನ? ಮನದುಂಬಿ ಬದುಕಿರುವೆ - ಹಿಂದಿರುಗಿ ಬರುತ್ತೇನೆ! ನನಗೇ ಮಣ್ಣಿನ ಹೆದರಿಕೆ!   ಹೀಗೆ ಕಳ್ಳಹೆಜ್ಜೆ ಹಾಕಿ ಮರೆಯಲ್ಲಿ ಬಾರದಿರು  ನೇರವಾಗಿ ಎದುರಿಸು!  ಒಂದು ಕೈ ನೋಡು.  ಮೃತ್ಯುವಿನಿಂದ ನಿಶ್ಚಿಂತನಾಗಿದೆ ಬದುಕಿನ ಪ್ರಯಾಣ  ಪ್ರತಿ ಸಂಜೆ ಸ್ವರಮೇಳ, ಪ್ರತಿ ಇರುಳು ಕೊಳಲಿನ ಗಾನ ಹಾಗೆಂದು ಯಾವ ದುಃಖವೂ ಇಲ್ಲವೆಂದಲ್ಲ  ಸ್ವಂತ-ಪರಕೀಯ ನೋವುಗಳಿಗೆ ಬರವಿಲ್ಲ.  ಹೊರಿಸಿದ್ದಾರೆ ಪರರೂ ನನಗೆ ಪ್ರೀತಿಯ ಹೊರೆ  ನನ್ನವರಿಂದಲೂ ನನಗಿಲ್ಲ ಪ್ರೀತಿಯ ಅರೆಕೊರೆ  ಹೋರಾಟಗಳನ್ನು ಬಿಡಲಿಲ್ಲ ನೋಡದೇ ಒಂದು ಕೈ ಕತ್ತಲಿನಲ್ಲೂ ಉರಿಸಿದ್ದೇನೆ ನಂದಿಹೋಗುತ್ತಿದ್ದ  ಹಣತೆ  ಇಂದು ಎದ್ದಿದೆ ಜೋರಾದ ಬಿರುಗಾಳಿ  ಸುಳಿಗಳ ತೋಳಲ್ಲಿ  ಸಿಲುಕಿದೆ  ದೋಣಿ  ಮನದಲ್ಲಿದೆ  ಆದರೂ  ಪಾರಾಗುವ ನಚ್ಚು  ಬಿರುಗಾಳಿಯ ಕೆಚ್ಚು ನೋಡಿ ಎದೆಯಲೆದ್ದಿದೆ