ಪಾರ್ಕರ್ ಪೆನ್
ಕೊನೆಗೂ ನಾನು ಧೈರ್ಯ ಮಾಡಿ ಮೇಜಿನ ಸೆಳೆಖಾನೆಯನ್ನು ಧೈರ್ಯ ಮಾಡಿ ಎಳೆದೆ. ಪಾರ್ಕರ್ ಪೆನ್ ತೊಟ್ಟಿಲಲ್ಲಿ ಮಲಗಿದ ಮುಗ್ಧ ಮಗು ನನ್ನನ್ನು ಎತ್ತಿಕೋ ಎಂದು ಕೇಳಿಕೊಳ್ಳುವಂತೆ ನಕ್ಕಿತು. ನ ಮ್ಮ ತಂದೆಯ ಹತ್ತಿರ ಒಂದು ಪಾರ್ಕರ್ ಪೆನ್ ಇತ್ತು. ಅದರ ನಿಬ್ ಚಿನ್ನದಿಂದ ಮಾಡಿದ್ದಾರೆಂದು ನಮ್ಮ ತಾಯಿ ನಮಗೆ ಆಗಾಗ ಹೇಳುತ್ತಿದ್ದರು. ಆಗ ನಾನು ಐದನೇ ಕ್ಲಾಸಿನಲ್ಲಿ ಓದುತ್ತಿದ್ದೆ ಎಂದು ನೆನಪು. ಆಗೆಲ್ಲ ಮನೆಯಲ್ಲಿ ಒಬ್ಬರಿಗೆ ಒಂದರಂತೆ ಪೆನ್ ಇರುತ್ತಿತ್ತು. ಬಾಲ್ ಪಾಯಿಂಟ್ ಪೆನ್ ಇನ್ನೂ ಅಷ್ಟೊಂದು ರೂಢಿಗೆ ಬಂದಿರಲಿಲ್ಲ. ಇಂಕ್ ತುಂಬಿಸಿ ಬರೆಯುವ ಪೆನ್. ಅದರಲ್ಲಿ ಶಾಯಿ ತುಂಬಿಸುವುದೊಂದು ಫಜೀತಿ. ಅದಕ್ಕೆ ಇಂಕ್ ಫಿಲ್ಲರ್ ಎಂಬ ಸಲಕರಣೆ ಸಿಕ್ಕುತ್ತಿತ್ತು. ಬಹಳ ಜನ ಇಂಕ್ ಪಿಲ್ಲರ್ ಎನ್ನುತ್ತಿದ್ದರು. ಕೆಲವೊಮ್ಮೆ ಈ ಇಂಕ್ ಫಿಲ್ಲರ್ ಕೂಡಾ ಕೈಕೊಟ್ಟು ಇಂಕ್ ಕೈಗೆಲ್ಲಾ ಮೆತ್ತಿಕೊಳ್ಳುತ್ತಿತ್ತು. ಬೆರಳಲ್ಲಿ ಇಂಕ್ ಕಲೆ ಇಲ್ಲದ ಹುಡುಗರು ಕಂಡರೆ ಅವರು ಓದಿ ಬರೆಯದ ಸೋಮಾರಿಗಳೆಂದು ಹೇಳಬಹುದಾಗಿತ್ತು. ನನ್ನ ತಂದೆಯ ಪಾರ್ಕರ್ ಪೆನ್ ಕೂಡಾ ಇಂಥ ಇಂಕ್ ತುಂಬಿಸಿ ಬರೆಯುವ ಪೆನ್ನೇ ಆಗಿತ್ತು. ಕಪ್ಪು ಬಣ್ಣದ, ಸ್ವಲ್ಪ ಡುಮ್ಮ ಎನ್ನಬಹುದಾದ ಮೈಕಟ್ಟು. ಪೆನ್ ಸಿಕ್ಕಿಸಿಕೊಳ್ಳಲು ಚಿನ್ನದ ಬಣ್ಣದ ಪಿನ್ ಜೋಡಿಸಿದ್ದರು. ಈ ಪೆನ್ನನ್ನು ನಮ್ಮ ತಂದೆ ತಮ್ಮ ಮೇಜಿನ ಡ್ರಾನಲ್ಲಿ ಇಟ್ಟುಕೊಂಡಿರುತ್ತಿದ್ದರು. ಡ್ರಾವರಿಗೆ ಬೀಗ ಇದ್ದರೂ ಅವರು ಅದನ್ನು ಹಾಕುತ್ತಿರಲಿಲ್ಲ. ಬೇಸಿ