ನಿಮ್ಮೊಳಗಿರುವ ರಾಕ್ಷಸ
ಸಿ.ಪಿ. ರವಿಕುಮಾರ್ ಕೆ.ವಿ. ಐಯ್ಯರ್ ಅವರು ಬರೆದ "ರೂಪದರ್ಶಿ" ಕಾದಂಬರಿ ಬಹಳ ಜನಪ್ರಿಯವಾದದ್ದು. ಇಟಲಿ ದೇಶದ ಪ್ರಸಿದ್ಧ ಚಿತ್ರಕಾರ ಹಾಗೂ ಮೂರ್ತಿಕಾರನಾದ ಮೈಕೆಲ್ ಏಂಜೆಲೋ ಈ ಕತೆಯಲ್ಲಿ ಒಂದು ಪಾತ್ರ. ಅವನು ಬಾಲ ಏಸುವಿನ ಚಿತ್ರಕ್ಕಾಗಿ ಒಬ್ಬ ರೂಪದರ್ಶಿಯ ಹುಡುಕಾಟದಲ್ಲಿದ್ದಾಗ ಕರುಣೆ ಮತ್ತು ನಿಷ್ಕಪಟತೆಗಳೇ ಮೂರ್ತಿವೆತ್ತಂಥ ಒಬ್ಬ ಬಾಲಕ ಅವನಿಗೆ ಎದುರಾಗುತ್ತಾನೆ; ಅವನನ್ನು ರೂಪದರ್ಶಿಯನ್ನಾಗಿ ಮೈಕೆಲ್ ಬಳಸಿಕೊಳ್ಳುತ್ತಾನೆ. ಮುಂದೆ ಸಮಾಜದ ಅನೇಕ ಅನ್ಯಾಯಗಳಿಗೆ ತುತ್ತಾಗಿ ಆ ಬಾಲಕನ ಚಹರೆ ಭಯಂಕರವಾಗಿ ಮಾರ್ಪಾಟಾಗುತ್ತದೆ. ತಾನು ಬರೆಯಲಿರುವ ಸೈತಾನನ ಚಿತ್ರಕ್ಕೆ ರೂಪದರ್ಶಿಯನ್ನು ಹುಡುಕುತ್ತಿರುವಾಗ ಮೈಕೆಲ್ ಏಂಜೆಲೋ ಗೆ ಅದೇ ವ್ಯಕ್ತಿ ಎದುರಾಗುತ್ತಾನೆ. ವೃದ್ಧ ಮೂರ್ತಿಕಾರನಿಗೆ ಈ ವ್ಯಕ್ತಿಯೇ ತಾನು ಹಿಂದೆ ಬಾಲ ಏಸುವಿನ ಚಿತ್ರಕ್ಕೆ ಬಳಸಿದ ರೂಪದರ್ಶಿ ಎಂದು ಗೊತ್ತಿಲ್ಲ. ಮುಂದೆ ನಾಟಕೀಯ ಬೆಳವಣಿಗೆಯಲ್ಲಿ ಅದು ಗೊತ್ತಾದಾಗ ಅವನಿಗೆ ಆಘಾತವಾಗುತ್ತದೆ. ಇದೇ ರೀತಿಯ ಇನ್ನೊಂದು ಕತೆ. ಇದನ್ನು ಬರೆದಿರುವುದು ಜೆಫ್ರಿ ಆರ್ಚರ್. ಒಂದು ಮಗುವಿನ ಜನನದ ವೃತ್ತಾಂತ ಅದರಲ್ಲಿ ಬರುತ್ತದೆ. ಎಲ್ಲ ಮಕ್ಕಳು ಹುಟ್ಟುವ ಹಾಗೆ ಆ ಮಗು ಹುಟ್ಟಿತು. ತಾಯಿ ಹೆರಿಗೆ ನೋವನ್ನು ತಿಂದು ಮಗುವನ್ನು ಹೆತ್ತಳು. ಆದರೆ ತನ್ನ ಮಗುವಿನ ಮುಗ್ಧ ಮುಖವನ್ನು ನೋಡಿದಾಗ ನೋವನ್ನು ಮರೆತಳು. ಆ ಮಗು ಮುಂದೆ ಹೋಗಿ ಅಡಾಲ್ಫ್ ಹಿಟ್ಲರ್ ಎಂಬ ಹೆಸರಿನಿಂದ ಪ