ಗ್ರೇ ಸ್ಕೇಲ್ ಚಿತ್ರ
ಸಿ ಪಿ ರವಿಕುಮಾರ್ ಯಾರೋ ಫೇಸ್ ಬುಕ್ ಮೇಲೆ ಕೆಂಪೇಗೌಡ ರಸ್ತೆಯ ಚಿತ್ರ ಹಾಕಿದ್ದಾರೆ. ಅಲ್ಲೊಂದು ಡಬಲ್ ಡೆಕರ್ ಬಸ್ ಚಿತ್ರ ಕಾಣುತ್ತಿದೆ. ಆ ಬಸ್ ನಲ್ಲಿ ನಾನು ಕೂತಿದ್ದೇನೆ, ನಿಮಗೆ ಕಾಣುತ್ತಿದೆಯೇ? ಬಸ್ ಹತ್ತಿದ ಕೂಡಲೇ ಮೆಟ್ಟಿಲು ಹತ್ತಿ ಮೇಲಿನ ಡೆಕ್ ಗೆ ಹೋಗುವುದು ನನ್ನ ಅಭ್ಯಾಸ. ಡ್ರೈವರ್ ಇಲ್ಲದ ಮೇಲಿನ ಡೆಕ್ ನ ಮುಂದಿನ ಸೀಟಿನಲ್ಲಿ ಕೂತರೆ ಎಲ್ಲಾ ಎಷ್ಟು ಚೆನ್ನಾಗಿ ಕಾಣುತ್ತಿದೆ! ಗ್ರೇ ಬಣ್ಣದ ಮರಗಿಡಗಳಲ್ಲಿ ಗ್ರೇ ಬಣ್ಣದ ಎಲೆಗಳು ಸೊಂಪಾಗಿ ನೇತಾಡುತ್ತಿವೆ. ಬಹುತೇಕ ಕಪ್ಪು ಜನ ಕಪ್ಪು-ಬಿಳುಪು ಬಟ್ಟೆ ತೊಟ್ಟು ಯಾವುದೇ ತರಾತುರಿಯಿಲ್ಲದೆ ಓಡಾಡುತ್ತಿದ್ದಾರೆ. ಕೆಲವರು ರಸ್ತೆ ಬದಿಯಲ್ಲಿ ಗಿಳಿಮೂತಿ ಮಾವಿನಕಾಯಿಗೆ ಕಾರ ಹಚ್ಚಿಸಿಕೊಂಡು ತಿನ್ನುತ್ತಿದ್ದಾರೆ. ಸಪ್ನಾ ಚಿತ್ರಮಂದಿರದಲ್ಲಿ "ಸ್ವಾಮಿ" ಚಿತ್ರ ನಡೆಯುತ್ತಿದೆ. ಲತಾ ಮಂಗೇಶ್ಕರ್ ಹಾಡಿರುವ ಚಿತ್ರಗೀತೆ ಎಷ್ಟು ಇಂಪಾಗಿದೆ. ಪಲ್ ಭರ್ ಮೇ ಯೇ ಕ್ಯಾ ಹೋ ಗಯಾ! ಒಂದೇ ಕ್ಷಣದಲ್ಲಿ ಏನೇನು ನಡೆದುಹೋಯಿತು! ಅವತ್ತು ಆಗಿದ್ದೂ ಹಾಗೇ. ಒಮ್ಮೆಲೇ ಸುಂಟರಗಾಳಿಯೊಂದು ಬೀಸಿತು. ಹರಿಕೇನ್ ಕಟ್ರೀನಾ ಅಥವಾ ಅದರ ಸೋದರ ಸಂಬಂಧಿ ಯಾವುದೋ. ಹೇಗೆ ಬೀಸಿತು ಆ ಗಾಳಿ! ನಾನು ಕುಳಿತಿದ್ದ ಡಬ್ಬಲ್ ಡೆಕರ್ ಅಲ್ಲಾಡಿ ಹೋಯಿತು. ಒಮ್ಮೆಲೇ ಬಸ್ ಮೇಲಕ್ಕೆ ಮೇಲಕ್ಕೆ ಇನ್ನೂ ಮೇಲಕ್ಕೆ ಹಾರಿತು. ಕಣ್ಣುಬಿಟ್ಟು ನೋಡಿದಾಗ ನಾನೊಂದು ಡಬಲ್ ಡೆಕರ್ A380 ಏರ್ ಬಸ್ ನಲ್ಲಿ ಕುಳಿತದ್ದ