ಕೆರೆಯ ಕತೆ
ಒಂದು
ಹಳೇ ಕಥೆಯಲ್ಲಿ
ಮಂತ್ರ
ಮರೆತು ಹೋಗಿ
ಮಾಯದ
ಪಾತ್ರೆಯಿಂದ ಉಕ್ಕುತ್ತಾ ಉಕ್ಕುತ್ತಾ
ಹುಗ್ಗಿ
ಹೊಳೆಯಾಯಿತು.
ಒಂದು
ಹೊಸಾ ಕಥೆಯಲ್ಲಿ
ತಂತ್ರ ಬೆರೆತು ಹೋಗಿ
ಕೈಗಾರಿಕೆ
ಕೈಜಾರಿಕೆ,
ಅಮೋನಿಯಾ-ನಿಮೋನಿಯಾ,
ತ್ಯಾಜ್ಯ-ವ್ಯಾಜ್ಯ,
ಮೂರ್ತಿ-ಬಣ್ಣ,
ಪಟಾಕಿ-ಮದ್ದು,
ಮಣ್ಣು-ಮಸಿ,
ಎಲ್ಲಾ
ಕೆರೆಯಲ್ಲಿ ಹರಿದು
ನಗರದ
ಕೆರೆಯ
ಬಾಯಲ್ಲಿ ನೊರೆ ಬಂತು
-
ಸಿ ಪಿ ರವಿಕುಮಾರ್
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ