ಪೋಸ್ಟ್‌ಗಳು

ಏಪ್ರಿಲ್, 2016 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಶೇಕ್ಸ್ ಪಿಯರ್ - ಸಾನೆಟ್ 116

ಇಮೇಜ್
ಮೂಲ ಕವಿತೆ - ಶೇಕ್ಸ್ ಪಿಯರ್ - ಸಾನೆಟ್ 116 ಕನ್ನಡಕ್ಕೆ - ಸಿ ಪಿ ರವಿಕುಮಾರ್ ಒಂದಾಗಲೆರಡು ಮನಗಳು ಅಡೆತಡೆಗಳಿವೆಯೆಂದು  ನಾನು ಒಪ್ಪುವುದಿಲ್ಲ  ಹೊಂದಾಣಿಕೆ ಮಾಡಿಕೊಳ್ಳುತ್ತಾ ಹೋಗುವುದು ಪ್ರೇಮವೇ ಅಲ್ಲ ಬಂದು ಹೋಗುತ್ತವೆ ಮಾತುಗಳು ನೂರೆಂಟು; ಮನಸ್ಸು ಚಂಚಲ; ಸಂದೇಹ, ಸಂತಾಪಗಳು ಬಂದಾಗ ಭಗ್ನವಾಗುವುದೇ ಪ್ರೇಮ? ಇಲ್ಲ! ಪರೀಕ್ಷೆ ಎಂದು ಸ್ವೀಕರಿಸಿ ಗೆಲ್ಲುತ್ತದೆ. ಪ್ರೇಮವೆಂಬುದು  ನೆರೆಯುಕ್ಕುವ  ಕಡಲಲ್ಲೂ ನಂದದೆ ನಿರ್ಭಯವಾಗಿ ನಿಲ್ಲುವ ದೀಪಗಂಬದ ಹಾಗೆ; ಕಂಗೆಡಿಸುವ  ಅಂಧಕಾರದಲ್ಲಿ ದಿಸೆಗೆಟ್ಟ ದೋಣಿಗಳಿಗೆ ದಿಕ್ಕುಗಾಣಿಸುವ  ದಾರಿದೀಪಕ್ಕೆ  ಇಂತಿಷ್ಟು ಎಂದು ಬೆಲೆಕಟ್ಟಲಾದೀತೇ? ಎತ್ತರ ಎಷ್ಟು ಅಡಿ ಎಷ್ಟು ಅಂಗುಲ   ಎಂದು ಹೇಳಬಹುದೇನೋ! ಕಾಲದ ಅತಿರೇಕಗಳಿಗೆ ಅಂಜದೆ ನಿಂದಿದೆ ಎದೆ- ಗುಂದದೆ. ಕಾಲನ ಬಾಗುಗತ್ತಿಯ ಹೊಡೆತಕ್ಕೆ ಕಳೆಗುಂದಬಹುದು ಹೊರಗಿನ  ಅಂದ;  ಬದಲಾಗದು ಆದರೂ ಒಳಗಿನ ಸೌಂದರ್ಯ ಒಂದಿಷ್ಟೂ.  ಸಂದರೂ ಎಷ್ಟೇ ಕಾಲಮಾನಗಳೂ ಬದಲಾಗದೆ ನಿಲ್ಲುವುದು ಸಾವು  ಸಂಧಿಸುವವರೆಗೂ. ಇದು ನಿಜವಲ್ಲವಾದರೆ ಪ್ರಮಾಣಿಸುವೆ ಸುಳ್ಳೆಂದು ನಾನು  ಹಿಂದೆ ಬರೆದದ್ದೆಲ್ಲ; ಹಿಂದೆ ಯಾರಾದರೂ ಪ್ರೇಮಿಸಿದರೆಂಬುದೂ ಸುಳ್ಳು. 

ತುಲಸೀದಾಸರ ದ್ವಿಪದಿಗಳು - 2

ಇಮೇಜ್
ತುಲಸೀದಾಸರ ದ್ವಿಪದಿಗಳು - 2  ಸಿ. ಪಿ. ರವಿಕುಮಾರ್  ಭಯ-ಲೋಭಗಳಿಂದ ಸವಿಮಾತಾಡಿದರೆ ವೈದ್ಯನೂ ಮಂತ್ರಿಯೂ ಗುರುವೂ   ನಿಶ್ಚಿತವಾಗಿ ರಾಜ್ಯವೂ ದೇಹ ಧರ್ಮಗಳು ಬೇಗ ನಾಶವಾಗುವುವು ಇದರ ಅರ್ಥವನ್ನು ಇನ್ನೂ ಬಿಡಿಸಿ ಹೇಳಬೇಕೆಂದರೆ ಹೀಗೆ : ಯಾವಾಗ ರಾಜ್ಯದ ಮಂತ್ರಿಯು ಭಯ ಅಥವಾ ಲೋಭದಿಂದ ರಾಜನಿಗೆ ನಿಜಾಂಶದ ಬದಲು ರಾಜ್ಯದಲ್ಲಿ ಎಲ್ಲವೂ ಚೆನ್ನಾಗಿದೆ ಎಂದು ಸುಳ್ಳು ಹೇಳುತ್ತಾನೋ ಆಗ ರಾಜ್ಯ ನಾಶದ ದಾರಿ ಹಿಡಿಯುತ್ತದೆ. ಯಾವಾಗ ರೋಗಿಗೆ ವೈದ್ಯನು ಲೋಭದಿಂದ ನಿಜವಾದ ಕಾಯಿಲೆಯನ್ನು ತಿಳಿಸದೆ ಎಲ್ಲವೂ ಸೌಖ್ಯವೆಂದು ಸವಿಮಾತಾಡುತ್ತಾನೋ ಆಗ ರೋಗಿಯ ದೇಹ ನಾಶವಾಗತೊಡಗುತ್ತದೆ. ಯಾವಾಗ ಗುರುವಾದವನು ಶಿಷ್ಯರ ತಪ್ಪುಗಳನ್ನು ತಿದ್ದದೇ ಅವರನ್ನು ಸ್ವಾರ್ಥಕ್ಕಾಗಿ ಹೊಗಳುತ್ತಾನೋ, ಆಗ ಧರ್ಮವು ನಾಶವಾಗುತ್ತದೆ. ತುಲಸಿ, ಹೊಂದಬಯಸುವೆಯಾ ಬೆಳಕು, ಹೊರಗಲ್ಲದೆ ಒಳಗೂ?   ನಾಲಗೆಯ ಹೊಸ್ತಿಲ ಮೇಲೆ ರಾಮನಾಮದ ಮಣಿದೀಪ ಬೆಳಗು ತಾತ್ಪರ್ಯ: ನಾಲಗೆಯ ಮೇಲೆ ರಾಮನಾಮವಿದ್ದರೆ ಹೊಸ್ತಿಲ ಮೇಲೆ ದೀಪವಿಟ್ಟಂತೆ (ಮನದ) ಒಳಗನ್ನೂ ಹೊರಗನ್ನೂ ಬೆಳಗುತ್ತದೆ. ರಾಮನ ಹೆಸರನ್ನು ಕೇಳಿದವರಿಗೂ ಹೇಳಿದವರಿಗೂ ಬೆಳಕಾಗುತ್ತದೆ. ಯಾರು ಪಡೆಯುತ್ತಾರೋ ಕೀರ್ತಿ ಪರರ ಕೀರ್ತಿಗೆ ಮಾಡಿ ಘಾಸಿ ಅವರ ಮುಖಕ್ಕೆ ಹತ್ತುತ್ತದೆ ಎಷ್ಟು ತೊಳೆದರೂ ಹೋಗದ ಮಸಿ ತಾತ್ಪರ್ಯ: ಸ್ವಂತ ಸಾಧಿಸಲು ಸಾಧ್ಯವಾಗದವನು ಇನ್ನೊಬ್ಬನ ಕೀರ್ತಿಗೆ ಧಕ್ಕೆ ತರುವ ಮೂಲಕ ಪಡೆಯಲು ಹೊರಟರೆ ಅವನ ಮುಖ

ಎದೆ ಬರಿದಾಗಿಹುದು ಪ್ರೇಮದ ನೋವಿನ ಹೊರತು

ಇಮೇಜ್
"ಸಜದಾ" ಎಂಬ ಗಜಲ್ ಸಂಗ್ರಹದಲ್ಲಿ ಲತಾ ಮಂಗೇಶ್ಕರ್ ಅವರು ಹಾಡಿರುವ ಈ ಗಜಲ್ ಕೂಡಾ ಒಂದು.  "ದಿಲ್ ಮೇ ಅಬ್ ದರ್ದ್-ಎ-ಮೊಹಬ್ಬತ್ ಕೆ ಸಿವಾ ಕುಛ್ ಭೀ ನಹೀ." ಇದನ್ನು ಬರೆದವರು ಸಾಹಿರ್ ಭೋಪಾಲಿ ಎಂಬ ಕವಿ. ತುಂಬಾ ಇಂಪಾದ ಗಜಲ್; ಮತ್ತೆ ಮತ್ತೆ ಕೇಳುವಂತಿದೆ.   ಕೇಳಲು ಈ ಲಿಂಕ್ ಅನುಸರಿಸಿ.   ಅನೇಕ ಗಜಲ್ ಗಳಂತೆ ಇಲ್ಲೂ ಕೂಡಾ ವಿಷಾದದ ದಟ್ಟ ಛಾಯೆ ಕಂಡು ಬರುತ್ತದೆ.  ಇಲ್ಲಿ ವ್ಯಕ್ತವಾದ ಭಾವನೆಗಳನ್ನು ಒಬ್ಬ ಪ್ರೇಮಿ ತನ್ನ ಭಗ್ನ ಪ್ರೇಮವನ್ನು ಕುರಿತು ಹಾಡುತ್ತಿರಬಹುದು; ಅಥವಾ ಆಧ್ಯಾತ್ಮಿಕ ಸ್ತರದಲ್ಲಿ ಈ ಗಜಲ್ ಭಗವಂತನಿಗೆ ಕವಿಯ ಸಮರ್ಪಣ ಎಂದು ಕೂಡಾ ಪರಿಗಣಿಸಬಹುದು.  ಕವಿ ಯಾವುದೋ ದುಃಖದ ಸನ್ನಿವೇಶದಲ್ಲಿ ಸಿಲುಕಿದ್ದಾನೆ.  ತನ್ನ ಪಾಪಗಳ ಬಗ್ಗೆ ಅವನಿಗೆ ಪಶ್ಚಾತ್ತಾಪ ಉಕ್ಕುತ್ತಿದೆ. ಈ ಸ್ಥಿತಿಯಲ್ಲಿ  ತನಗೆ ಇನ್ನೇನೂ ಬೇಡ ಎಂಬ ವಿರಕ್ತಿ ಅವನಲ್ಲಿ ಹುಟ್ಟಿದೆ.  "ಆದದ್ದೆಲ್ಲಾ ಒಳಿತೇ ಆಯಿತು" ಎಂಬ ದಾಸವಾಕ್ಯದಂತೆ "ನನಗೆ ಒದಗಿದ ಈ ದುಃಖ ನನಗೆ ಬಿಡುಗಡೆಯನ್ನೇ ತಂದಿದೆ," ಎಂದು ಕವಿ ಯೋಚಿಸುತ್ತಾನೆ.  ಈ ಗಜಲ್ ಭಾಷಾಂತರ ನನಗೆ ತೃಪ್ತಿ ಕೊಟ್ಟಿದೆ. ಮೂಲದ ಲಯವನ್ನು ತಕ್ಕಮಟ್ಟಿಗೆ ಹಿಡಿದಿದ್ದೇನೆ ಎನ್ನಿಸಿದೆ. ಕನ್ನಡದಲ್ಲಿ ಹಾಡಲು ಲತಾ ಮಂಗೇಶ್ಕರ್ ಅವರನ್ನು ಒಪ್ಪಿಸುವುದೊಂದೇ ಉಳಿದ ಕೆಲಸ! ಮೂಲ ಗಜಲ್ : ಸಾಹಿರ್ ಭೋಪಾಲಿ  ಕನ್ನಡಕ್ಕೆ : ಸಿ. ಪಿ, ರವಿಕುಮಾರ್  ಎದೆ ಬರಿದಾಗಿಹ

ದುಃಖದ ಐಸಿರಿ ನಿನ್ನದು ಮಾತ್ರವೇ?

ಇಮೇಜ್
"ಗಮ್ ಕಾ ಖಜಾನಾ ತೇರಾ ಭೀ ಹೈ, ಮೇರಾ ಭೀ" ಎಂದು ಪ್ರಾರಂಭವಾಗುವ ಈ ಗಜಲ್ ಹಾಡಿದವರು ಪ್ರಸಿದ್ಧ ಗಾಯಕರಾದ ಜಗಜಿತ್ ಸಿಂಗ್ ಮತ್ತು ಲತಾ ಮಂಗೇಶ್ಕರ್.  ಈ ಗೀತೆಯನ್ನು ನೀವು ಇಲ್ಲಿ ಕೇಳಬಹುದು .  ಇಲ್ಲೊಂದು ಕತೆಯ ಎಳೆಯನ್ನು ನೀವು ಗುರುತಿಸಬಹುದು. ಬಹಳ ದಿನಗಳ ನಂತರ ಇಬ್ಬರು ಹಳೆಯ ಸ್ನೇಹಿತರು  (ಹಿಂದೊಮ್ಮೆ ಪರಸ್ಪರ ಪ್ರೇಮಿಸಿದವರು, ಅಥವಾ ಹಿಂದೊಮ್ಮೆ ವಿವಾಹವಾಗಿದ್ದು ಈಗ ವಿಚ್ಛೇದನ ಪಡೆದವರು )  ಆಕಸ್ಮಿಕವಾಗಿ ಮುಖಾಮುಖಿಯಾಗಿದ್ದಾರೆ. ಈ ಭೇಟಿ ಬಹುಶಃ ಒಂದು ಮದಿರಾಗೃಹದಲ್ಲಿ ನಡೆದಿರಬಹುದು. ಪರಸ್ಪರರಿಂದ ಬೇರಾದ ಇವರು ಇಬ್ಬರೂ ಸಮಾನ ದುಃಖಿಗಳು. ಇಬ್ಬರೂ ತಮ್ಮ ಜೀವನದಲ್ಲಿ ಮುಂದುವರೆದರೂ ತಮ್ಮ ಹಳೆಯ ಗೆಳೆತನವನ್ನು ಮರೆಯಲು ಅವರಿಗೆ ಸಾಧ್ಯವಾಗಿಲ್ಲ.  ಈಗಲೂ ಅವರು ಒಂದಾಗಬಹುದಲ್ಲವೇ ಎಂದರೆ ಅದಕ್ಕೆ ದಾರಿ ನೇರವಾಗಿಲ್ಲ. ಅವರು ದುಃಖವನ್ನೇ ಪಾಲಿಗೆ ಬಂದ ಸಂಪತ್ತೆಂದು ಸ್ವೀಕರಿಸಿ ಅದನ್ನೇ ಮದಿರೆಯಾಗಿ ಹೀರಿ ಬದುಕುತ್ತಿರುವ ಭಗ್ನಪ್ರೇಮಿಗಳು.  ಇವರ ಪರಸ್ಪರ ಮಾತಿನಲ್ಲಿ ತಮ್ಮ ಬದುಕಿನ ಪರಾಮರ್ಶೆ ಮತ್ತು ತಮ್ಮ ಪರಿಸ್ಥಿತಿಯ ಬಗ್ಗೆ ವ್ಯಂಗ್ಯವನ್ನು ಗಜಲಿನಲ್ಲಿ ಕಾಣಬಹುದು.  ಗಜಲ್ ಅನುವಾದವನ್ನು ಕೆಳಗೆ ಕೊಟ್ಟಿದೆ. ಮೂಲ ಗಜಲಿನ ಲಯವನ್ನು ಸ್ವಲ್ಪಮಟ್ಟಿಗಾದರೂ ಹಿಡಿದಿಟ್ಟಿರುವ ತೃಪ್ತಿ ನನಗಿದೆ.  ಮೂಲ ಗಜಲ್:  ಶಾ ಹಿದ್ ಕಬೀರ್  ಕನ್ನಡಕ್ಕೆ : ಸಿ. ಪಿ. ರವಿಕುಮಾರ್  ದುಃಖದ ಐಸಿರಿ ನಿನ್ನದು ಮಾತ್ರವೇ? ನನ್ನದೂ