ದುಃಖದ ಐಸಿರಿ ನಿನ್ನದು ಮಾತ್ರವೇ?
"ಗಮ್ ಕಾ ಖಜಾನಾ ತೇರಾ ಭೀ ಹೈ, ಮೇರಾ ಭೀ" ಎಂದು ಪ್ರಾರಂಭವಾಗುವ ಈ ಗಜಲ್ ಹಾಡಿದವರು ಪ್ರಸಿದ್ಧ ಗಾಯಕರಾದ ಜಗಜಿತ್ ಸಿಂಗ್ ಮತ್ತು ಲತಾ ಮಂಗೇಶ್ಕರ್. ಈ ಗೀತೆಯನ್ನು ನೀವು ಇಲ್ಲಿ ಕೇಳಬಹುದು. ಇಲ್ಲೊಂದು ಕತೆಯ ಎಳೆಯನ್ನು ನೀವು ಗುರುತಿಸಬಹುದು. ಬಹಳ ದಿನಗಳ ನಂತರ ಇಬ್ಬರು ಹಳೆಯ ಸ್ನೇಹಿತರು (ಹಿಂದೊಮ್ಮೆ ಪರಸ್ಪರ ಪ್ರೇಮಿಸಿದವರು, ಅಥವಾ ಹಿಂದೊಮ್ಮೆ ವಿವಾಹವಾಗಿದ್ದು ಈಗ ವಿಚ್ಛೇದನ ಪಡೆದವರು ) ಆಕಸ್ಮಿಕವಾಗಿ ಮುಖಾಮುಖಿಯಾಗಿದ್ದಾರೆ. ಈ ಭೇಟಿ ಬಹುಶಃ ಒಂದು ಮದಿರಾಗೃಹದಲ್ಲಿ ನಡೆದಿರಬಹುದು. ಪರಸ್ಪರರಿಂದ ಬೇರಾದ ಇವರು ಇಬ್ಬರೂ ಸಮಾನ ದುಃಖಿಗಳು. ಇಬ್ಬರೂ ತಮ್ಮ ಜೀವನದಲ್ಲಿ ಮುಂದುವರೆದರೂ ತಮ್ಮ ಹಳೆಯ ಗೆಳೆತನವನ್ನು ಮರೆಯಲು ಅವರಿಗೆ ಸಾಧ್ಯವಾಗಿಲ್ಲ. ಈಗಲೂ ಅವರು ಒಂದಾಗಬಹುದಲ್ಲವೇ ಎಂದರೆ ಅದಕ್ಕೆ ದಾರಿ ನೇರವಾಗಿಲ್ಲ. ಅವರು ದುಃಖವನ್ನೇ ಪಾಲಿಗೆ ಬಂದ ಸಂಪತ್ತೆಂದು ಸ್ವೀಕರಿಸಿ ಅದನ್ನೇ ಮದಿರೆಯಾಗಿ ಹೀರಿ ಬದುಕುತ್ತಿರುವ ಭಗ್ನಪ್ರೇಮಿಗಳು. ಇವರ ಪರಸ್ಪರ ಮಾತಿನಲ್ಲಿ ತಮ್ಮ ಬದುಕಿನ ಪರಾಮರ್ಶೆ ಮತ್ತು ತಮ್ಮ ಪರಿಸ್ಥಿತಿಯ ಬಗ್ಗೆ ವ್ಯಂಗ್ಯವನ್ನು ಗಜಲಿನಲ್ಲಿ ಕಾಣಬಹುದು. ಗಜಲ್ ಅನುವಾದವನ್ನು ಕೆಳಗೆ ಕೊಟ್ಟಿದೆ. ಮೂಲ ಗಜಲಿನ ಲಯವನ್ನು ಸ್ವಲ್ಪಮಟ್ಟಿಗಾದರೂ ಹಿಡಿದಿಟ್ಟಿರುವ ತೃಪ್ತಿ ನನಗಿದೆ.
ಮೂಲ ಗಜಲ್: ಶಾಹಿದ್ ಕಬೀರ್
ಕನ್ನಡಕ್ಕೆ : ಸಿ. ಪಿ. ರವಿಕುಮಾರ್
ದುಃಖದ ಐಸಿರಿ ನಿನ್ನದು ಮಾತ್ರವೇ? ನನ್ನದೂ ಕೂಡಾ.
ಈ ಉಡುಗೊರೆಯು ನಿನ್ನದು ಮಾತ್ರವೇ? ನನ್ನದೂ ಕೂಡಾ. .
ಹೊರಬೀಳಲಿ ದುಃಖವು ಎದೆಯಿಂದ ಹಾಡಾಗಿ
ರಾಗವು ಹಳೆಯದು ನನ್ನದು ಮಾತ್ರವೇ? ನಿನ್ನದೂ ಕೂಡಾ!
ಹೇಳುವುದೇನಿದೆ ನಾ ನಿನಗೆ? ನೀನೂ ನನಗೆ?
ಮುರುಳೆಷ್ಟೋ ನಿನ್ನಯ ಹೃದಯ ನನ್ನದೂ ಕೂಡಾ.
ಊರಿನ ಜನರೆಲ್ಲರ ಬಾಯಲ್ಲಿ ಕತೆಯಾಗಿ
ಹೊರಳಾಡಿದ ಮಾತು ನಿನದೆಷ್ಟೋ ನನ್ನದು ಕೂಡಾ
ಮದಿರಾಪಾನದ ಮಾತಾಡದಿರು ಮಡಿವಂತ!
ಮದಿರೆಯ ದಾಹ ನನಗೆಷ್ಟೋ ನಿನಗೂ ಕೂಡಾ!
ग़म का खज़ाना - Gham Ka Khazana (Jagjit Singh, Lata Mangeshkar, Sajda)
ಪ್ರತ್ಯುತ್ತರಅಳಿಸಿMovie/Album: सजदा (1991)
Music By: जगजीत सिंह
Lyrics By: शाहिद कबीर
Performed By: जगजीत सिंह, लता मंगेशकर
ग़म का ख़ज़ाना तेरा भी है, मेरा भी
ये नज़राना तेरा भी है, मेरा भी
अपने ग़म को गीत बना कर गा लेना
राग़ पुराना तेरा भी है, मेरा भी
ग़म का ख़ज़ाना...
तू मुझको और मैं तुझको समझाऊं क्या
दिल दीवाना तेरा भी है, मेरा भी
ग़म का ख़ज़ाना...
शहर मे गलियों-गलियों जिसका चर्चा है
वो अफ़साना तेरा भी है, मेरा भी
ग़म का ख़ज़ाना...
मयख़ाने की बात न कर वाईज़ मुझसे
आना-जाना तेरा भी है, मेरा भी
ग़म का ख़ज़ाना...