ಶೇಕ್ಸ್ ಪಿಯರ್ - ಸಾನೆಟ್ 116
ಮೂಲ ಕವಿತೆ - ಶೇಕ್ಸ್ ಪಿಯರ್ - ಸಾನೆಟ್ 116
ಕನ್ನಡಕ್ಕೆ - ಸಿ ಪಿ ರವಿಕುಮಾರ್
ಒಂದಾಗಲೆರಡು ಮನಗಳು ಅಡೆತಡೆಗಳಿವೆಯೆಂದು ನಾನು ಒಪ್ಪುವುದಿಲ್ಲ
ಹೊಂದಾಣಿಕೆ ಮಾಡಿಕೊಳ್ಳುತ್ತಾ ಹೋಗುವುದು ಪ್ರೇಮವೇ ಅಲ್ಲ
ಬಂದು ಹೋಗುತ್ತವೆ ಮಾತುಗಳು ನೂರೆಂಟು; ಮನಸ್ಸು ಚಂಚಲ;
ಕನ್ನಡಕ್ಕೆ - ಸಿ ಪಿ ರವಿಕುಮಾರ್
ಹೊಂದಾಣಿಕೆ ಮಾಡಿಕೊಳ್ಳುತ್ತಾ ಹೋಗುವುದು ಪ್ರೇಮವೇ ಅಲ್ಲ
ಬಂದು ಹೋಗುತ್ತವೆ ಮಾತುಗಳು ನೂರೆಂಟು; ಮನಸ್ಸು ಚಂಚಲ;
ಸಂದೇಹ, ಸಂತಾಪಗಳು ಬಂದಾಗ ಭಗ್ನವಾಗುವುದೇ ಪ್ರೇಮ? ಇಲ್ಲ! ಪರೀಕ್ಷೆ
ಎಂದು ಸ್ವೀಕರಿಸಿ ಗೆಲ್ಲುತ್ತದೆ. ಪ್ರೇಮವೆಂಬುದು ನೆರೆಯುಕ್ಕುವ ಕಡಲಲ್ಲೂ
ನಂದದೆ ನಿರ್ಭಯವಾಗಿ ನಿಲ್ಲುವ ದೀಪಗಂಬದ ಹಾಗೆ; ಕಂಗೆಡಿಸುವ
ಅಂಧಕಾರದಲ್ಲಿ ದಿಸೆಗೆಟ್ಟ ದೋಣಿಗಳಿಗೆ ದಿಕ್ಕುಗಾಣಿಸುವ ದಾರಿದೀಪಕ್ಕೆ
ಇಂತಿಷ್ಟು ಎಂದು ಬೆಲೆಕಟ್ಟಲಾದೀತೇ? ಎತ್ತರ ಎಷ್ಟು ಅಡಿ ಎಷ್ಟು ಅಂಗುಲ
ಎಂದು ಹೇಳಬಹುದೇನೋ! ಕಾಲದ ಅತಿರೇಕಗಳಿಗೆ ಅಂಜದೆ ನಿಂದಿದೆ ಎದೆ-
ಗುಂದದೆ. ಕಾಲನ ಬಾಗುಗತ್ತಿಯ ಹೊಡೆತಕ್ಕೆ ಕಳೆಗುಂದಬಹುದು ಹೊರಗಿನ
ಅಂದ; ಬದಲಾಗದು ಆದರೂ ಒಳಗಿನ ಸೌಂದರ್ಯ ಒಂದಿಷ್ಟೂ.
ಸಂದರೂ ಎಷ್ಟೇ ಕಾಲಮಾನಗಳೂ ಬದಲಾಗದೆ ನಿಲ್ಲುವುದು ಸಾವು
ಸಂಧಿಸುವವರೆಗೂ. ಇದು ನಿಜವಲ್ಲವಾದರೆ ಪ್ರಮಾಣಿಸುವೆ ಸುಳ್ಳೆಂದು ನಾನು
ಹಿಂದೆ ಬರೆದದ್ದೆಲ್ಲ; ಹಿಂದೆ ಯಾರಾದರೂ ಪ್ರೇಮಿಸಿದರೆಂಬುದೂ ಸುಳ್ಳು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ