ನಮ್ಮ ಫಿಲ್ಮ್-ಗೋಳು!
ಸಿ. ಪಿ. ರವಿಕುಮಾರ್ ಕ್ಯಾಬ್ ಓಡುತ್ತಿತ್ತು. ಒಮ್ಮೆಲೇ ಡ್ರೈವರ್ "ತಲೆ ಬಾಚ್ಕೊಳ್ಳಿ" ಎಂದ. ನಾನು ತಬ್ಬಿಬ್ಬಾದೆ. ಸ್ವಲ್ಪ ಹೆಮ್ಮೆಯಿಂದ ಎದೆ ಉಬ್ಬಿತು ಕೂಡಾ. ನನಗೆ ತಲೆ ಬಾಚಿಕೊಳ್ಳಲು ಈಗ ದಶಕದಿಂದಲೂ ಯಾರೂ ಹೇಳಿಲ್ಲ. "ಛೇ, ಜೋಬಿನಲ್ಲಿ ನಾನು ಬಾಚಣಿಗೆ ಕೊಂಡೊಯ್ಯುವುದನ್ನೇ ಬಿಟ್ಟುಬಿಟ್ಟಿದ್ದೇನೆ ..." ಎನ್ನೋಣ ಎನ್ನುವಷ್ಟರಲ್ಲಿ "ಪೌಡರ್ ಹಾಕ್ಕೊಳ್ಳಿ" ಎಂದ ಡ್ರೈವರನ ಮಾತು ಸ್ವಲ್ಪ ಅಧಿಕಪ್ರಸಂಗಿತನ ಎಂದೇ ಅನ್ನಿಸಿತು. ಎಲಾ! ರಾತ್ರಿಯ ಒಂಬತ್ತು ಗಂಟೆಯಾಗಿದೆ. ಈಗ ತಲೆ ಬಾಚಿಕೊಂಡು ಪೌಡರ್ ಹಾಕಿಕೊಳ್ಳಲು ನಾನು ಯಾವ ಪಾರ್ಟಿಗೆ ಹೋಗಬೇಕಾಗಿದೆ! ನಾನು ಚಹಾಗೆ ಮಿಲ್ಕ್ ಪೌಡರ್ ಒಮ್ಮೊಮ್ಮೆ ಹಾಕಿಕೊಳ್ಳಬಹುದು ಅಷ್ಟೇ ಹೊರತು ಮುಖಕ್ಕೆ ಪೌಡರ್ ಹಾಕಿಕೊಳ್ಳಬೇಕಾದ ಸಂದರ್ಭ ಮದುವೆಯ ರಿಸೆಪ್ಷನ್ ದಿವಸ ಮಾತ್ರ ಬಂದಿತ್ತೇನೋ. ನನ್ನ ಹೆಂಡತಿಗೂ ಅದು ಮರೆತುಹೋಗಿದೆ. ಅದಕ್ಕೂ ಹಿಂದೆ ಒಂದು ಫೋಟೋಗ್ರಾಫ್ ಗೆ ಮಾಡೆಲ್ ಆಗಿ ನಿಲ್ಲುವ ಸಂದರ್ಭ ನನಗೆ ಒದಗಿಬಂದಿತ್ತು! ಆಗಲೂ ಮುಖಕ್ಕೆ ಪೌಡರ್ ಹಚ್ಚಿಕೊಂಡಿದ್ದೆ! (ನಿಮಗೆ ನನ್ನ ಸೌಂದರ್ಯದ ಬಗ್ಗೆ ಈಗಾಗಲೇ ಹೊಟ್ಟೆಕಿಚ್ಚು ಬಂದಿಲ್ಲದಿದ್ದರೆ ಹೇಳಿ, ಆ ಸಂದರ್ಭದ ಬಗ್ಗೆ ಇನ್ನಷ್ಟು ವಿಶದವಾಗಿ ಬರೆಯುತ್ತೇನೆ.) ಪ್ರಸ್ತುತ ನನಗೆ ಡ್ರೈವರ್ ಬಗ್ಗೆ ಕೋಪ ಬಂತೆಂದು ಹೇಳಿದೆನಲ್ಲವೇ? ಕಿಡಿಕಾರಲು ನಾನು ಬಾಯಿ ತೆಗೆಯುವ ಮುನ್ನವೇ ಡ್ರೈವರ್ ಪ್ರಾಣಿ ಮತ್ತೊಮ್ಮೆ ಮಾತಾಡಿದ. &qu