ಬ್ಲಾಗಾಕಾರ ಗುಣಾಕಾರ



ಸಿ. ಪಿ. ರವಿಕುಮಾರ್ 

ನಾನು ಐದು ಬೇರೆ ಬೇರೆ ಬ್ಲಾಗ್ ಗಳನ್ನು ಬರೆಯುತ್ತಿದ್ದೇನೆ. ನನ್ನ ಕನ್ನಡ ಬ್ಲಾಗ್ "ರವಿ ಕಾಣದ್ದು" ಪ್ರಾರಂಭಿಸಿ ಸರಿಯಾಗಿ ನಾಲ್ಕು ವರ್ಷಗಳಾದವು. 277 ಬ್ಲಾಗ್ ಪೋಸ್ಟ್ ಪ್ರಕಟಿಸಿದ್ದೇನೆ ಮತ್ತು ಇದುವರೆಗೆ 67693 ಹಿಟ್ಸ್ ಬಂದಿವೆ ಎಂದು ಬ್ಲಾಗರ್ ಲೆಕ್ಕ ಹಾಕಿದೆ. ಅರ್ಥಾತ್ ತಲಾ 244 ಜನ ಓದಿದ್ದಾರೆ ಎಂದರ್ಥ. ಬಹಳಷ್ಟು ಪೋಸ್ಟ್ ಗಳಿಗೆ ನೂರಕ್ಕಿನ ಹೆಚ್ಚಿನ ಓದುಗರಿಲ್ಲ.


ನನ್ನ ಇಂಗ್ಲಿಷ್ ಬ್ಲಾಗ್ "ಸೀಪೀಸ್ ಕಾರ್ನರ್" ಕೂಡಾ ಅದೇ ಕಾಲಮಾನದಲ್ಲೇ ಪ್ರಾರಂಭಿಸಿದ್ದು. ಇದರಲ್ಲಿ 52 ಪೋಸ್ಟ್ ಪ್ರಕಟಿಸಿದ್ದೇನೆ; ಒಟ್ಟು 32160 ಹಿಟ್ಸ್ ಬಂದಿವೆ. ಸರಾಸರಿ ಪ್ರತಿಯೊಂದು ಪೋಸ್ಟನ್ನೂ 618 ಜನ ಓದಿದ್ದಾರೆ. ಗೋವಿಂದ ಪೈ ಅವರ ಒಂದು ಕವಿತೆಯ ಬಗ್ಗೆ ಬರೆದ ಲೇಖನವನ್ನು 2188 ಜನ ಓದಿದ್ದಾರೆ. ವಿಶೇಷ ಎಂದರೆ ನಾನು ನನ್ನ ಇಂಗ್ಲಿಷ್ ಬ್ಲಾಗಿಗೆ ಹೆಚ್ಚಿನ ಪ್ರಚಾರ ಕೂಡಾ ನೀಡುವುದಿಲ್ಲ. ಕನ್ನಡ ಬ್ಲಾಗ್ ಪೋಸ್ಟ್ ಗಳಿಗೆ ಫೇಸ್ ಬುಕ್ ಮೂಲಕ ಪ್ರಚಾರ ನೀಡುತ್ತೇನೆ.


ಕನ್ನಡ ಗದ್ಯ/ಪದ್ಯಗಳ ಅನುವಾದಗಳನ್ನು "ಆನ್ ಇಂಗ್ಲಿಷ್ ಮಿರರ್ ಟು ಕನ್ನಡ ಪೊಯೆಟ್ರಿ" ಎಂಬ ಬ್ಲಾಗಿನಲ್ಲಿ ಪ್ರಕಟಿಸುತ್ತಿದ್ದೇನೆ. 69 ಅನುವಾದಗಳನ್ನು ಪ್ರಕಟಿಸಿದ್ದೇನೆ. ಒಟ್ಟು 29708 ಹಿಟ್ಸ್ ಬಂದಿವೆ. ತಲಾ 430 ಹಿಟ್ಸ್ ಎಂದು ಲೆಕ್ಕ ಹಾಕಬಹುದು. ಕುವೆಂಪು ಅವರ "ಅಜ್ಜಯ್ಯನ ಅಭ್ಯಂಜನ" ಪ್ರಬಂಧದ ಅನುವಾದಕ್ಕೆ 736 ಹಿಟ್ಸ್ ಬಂದು ಪ್ರಥಮ ಸ್ಥಾನದಲ್ಲಿದೆ.


ಹಿಂದಿ ಕವಿತೆಗಳ ಅನುವಾದಗಳನ್ನು "ಸಮುಂದರ್ ಔರ್ ಸೀಪೀ" ಎಂಬ ಬ್ಲಾಗಿನಲ್ಲಿ ಪ್ರಕಟಿಸುತ್ತೇನೆ. ಇದರಲ್ಲಿ ಕೇವಲ 36 ಬರಹಗಳನ್ನು ಪ್ರಕಟಿಸಿದ್ದೇನೆ. ಈಗ ಸುಮಾರು ಎರಡು ವರ್ಷಗಳಿಂದ ಏನೂ ಪ್ರಕಟಿಸಿಲ್ಲ. ಆದರೆ 11,811 ಹಿಟ್ಸ್ ಬಂದಿವೆ. ತಲಾ 328 ಹಿಟ್ಸ್ ಎಂದಾಯಿತು.


"ಸಿ.ಪಿ. ಸಂಪದ" ಎಂಬ ಕನ್ನಡ ಬ್ಲಾಗನ್ನು ನಾನು ಎರಡು ವರ್ಷಗಳ ಹಿಂದೆ ಉತ್ಸಾಹದಿಂದ ಪ್ರಾರಂಭಿಸಿದೆ. ಅದರಲ್ಲಿ ಕಂಪ್ಯೂಟರ್ ವಿಜ್ಞಾನ ಮತ್ತು ಗಣಿತ ಕುರಿತ 23 ಲೇಖನಗಳನ್ನು ಪ್ರಕಟಿಸಿದೆ. ಅದಕ್ಕೆ ನೀರಸ ಪ್ರತಿಕ್ರಿಯೆ ಬಂದಿದ್ದು ಕಂಡು ಬರೆಯುವುದನ್ನು ನಿಲ್ಲಿಸಿದೆ. ಈ 23 ಲೇಖನಗಳಿಗೆ ಇದುವರೆಗೆ 13646 ಹಿಟ್ಸ್ ಬಂದಿವೆ. ತಲಾ 593 ಹಿಟ್ಸ್ ಬಂದಿವೆ ಎಂದರ್ಥ! ಇದು ನನಗೆ ಸಂತೋಷ ಮತ್ತು ಆಶ್ಚರ್ಯ ಉಂಟು ಮಾಡಿದೆ.   ಸ್ವಲ್ಪ ತಡವಾಗಿಯಾದರೂ ಜನ ಓದುತ್ತಿದ್ದಾರೆ ಎಂಬ ಸಮಾಧಾನ ತಂದಿದೆ.

ಕೇವಲ ಹಿಟ್ಸ್ ಮಾತ್ರವಲ್ಲದೆ ಆಗಾಗ ನನಗೆ ಓದುಗರಿಂದ ಇ-ಮೇಲ್ ಮೂಲಕ ಮೆಚ್ಚುಗೆ/ಪ್ರತಿಕ್ರಿಯೆ ಬಂದಿರುವುದು ನನ್ನ ಇಂಗ್ಲಿಷ್ ಬರಹಗಳಿಗೆ ಮಾತ್ರ. ಬ್ಲಾಗ್ ಬರಹಗಾರರಿಗೆ ಪ್ರತಿಕ್ರಿಯೆಯೇ ಮುಖ್ಯ ಇಂಧನ. ಕೆಲವರು ಕರ್ಮರ್ಷಿಯಲ್ ಬ್ಲಾಗ್ ಗಳನ್ನು ಬರೆದು ಹಣ ಮಾಡಿಕೊಳ್ಳುತ್ತಿರಬಹುದು. ಆದರೆ ಬಹುತೇಕರು ತಮ್ಮ ಆತ್ಮಸಂತೋಷಕ್ಕಾಗಿ ಬರೆಯುತ್ತಿದ್ದಾರೆ. ಇಷ್ಟವಾದರೂ ಸರಿ, ಇಷ್ಟವಾಗದಿದ್ದರೂ ಸರಿ, ಪ್ರತಿಕ್ರಿಯೆ ನೀಡುವುದು ಮುಖ್ಯ. ಕನ್ನಡ ಓದುಗರು ಇದನ್ನು ಅಷ್ಟಾಗಿ ಪರಿಪಾಲಿಸುವುದಿಲ್ಲ ಎಂದೇ ನನ್ನ ಭಾವನೆ.

ಇ-ಜಗತ್ತು ಕನ್ನಡಕ್ಕೆ ಹೊಸತು. ನನ್ನಂತೆ ಬರೆಯುತ್ತಿರುವವರ ಅನುಭವ ಹೇಗಿದೆಯೋ ನನಗೆ ಗೊತ್ತಿಲ್ಲ. ಓದುಗರ ಸಂಖ್ಯೆ, ಓದುಗರ ಪ್ರತಿಕ್ರಿಯೆ ಬೆಳೆಯದೇ ಹೋದರೆ ಇ-ಜಗತ್ತಿನಲ್ಲಿ ಕನ್ನಡವೂ ಬೆಳೆಯಲಾರದು.  ಈ ಪ್ರತಿಕ್ರಿಯೆ ಬೇಗ ಸಿಕ್ಕುವುದು ಕೂಡಾ ಮುಖ್ಯ. ಇ-ಜಗತ್ತಿನಲ್ಲಿ ಎಲ್ಲವೂ ಎಲೆಕ್ಟ್ರಾನಿಕ್ ವೇಗದಲ್ಲಿ ನಡೆಯಬೇಕು ತಾನೇ!




ಕಾಮೆಂಟ್‌ಗಳು

  1. ಸರ್, ನಿಮ್ಮ ವಿಜಯ ಕರ್ನಾಟಕದ ಅಂಕಣ ಬರಹಗಳನ್ನೂ ಪಠ್ಯರೂಪದಲ್ಲಿ ಬ್ಲಾಗಿನಲ್ಲಿ ಹಾಕಿ ಎಂದು ಕೋರಿಕೆ.

    ಪ್ರತ್ಯುತ್ತರಅಳಿಸಿ
  2. ಅಂದಹಾಗೆ, ನಿಮ್ಮ ಇನ್ನಿತರ ಮೂರು ಬ್ಲಾಗ್ಸ್ ಯಾವುವು?

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ವಿರಾಹೆ ಅವರೇ,
      http://cp-ravikumar-kannadapoems2english.blogspot.com/
      http://cpravikumar-hindi.blogspot.com/
      http://seepisampada.blogspot.com/
      ಧನ್ಯವಾದಗಳು

      ಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)