ನಮ್ಮ ಫಿಲ್ಮ್-ಗೋಳು!
ಸಿ. ಪಿ. ರವಿಕುಮಾರ್
ಕ್ಯಾಬ್ ಓಡುತ್ತಿತ್ತು. ಒಮ್ಮೆಲೇ ಡ್ರೈವರ್ "ತಲೆ ಬಾಚ್ಕೊಳ್ಳಿ" ಎಂದ. ನಾನು ತಬ್ಬಿಬ್ಬಾದೆ. ಸ್ವಲ್ಪ ಹೆಮ್ಮೆಯಿಂದ ಎದೆ ಉಬ್ಬಿತು ಕೂಡಾ. ನನಗೆ ತಲೆ ಬಾಚಿಕೊಳ್ಳಲು ಈಗ ದಶಕದಿಂದಲೂ ಯಾರೂ ಹೇಳಿಲ್ಲ. "ಛೇ, ಜೋಬಿನಲ್ಲಿ ನಾನು ಬಾಚಣಿಗೆ ಕೊಂಡೊಯ್ಯುವುದನ್ನೇ ಬಿಟ್ಟುಬಿಟ್ಟಿದ್ದೇನೆ ..." ಎನ್ನೋಣ ಎನ್ನುವಷ್ಟರಲ್ಲಿ "ಪೌಡರ್ ಹಾಕ್ಕೊಳ್ಳಿ" ಎಂದ ಡ್ರೈವರನ ಮಾತು ಸ್ವಲ್ಪ ಅಧಿಕಪ್ರಸಂಗಿತನ ಎಂದೇ ಅನ್ನಿಸಿತು. ಎಲಾ! ರಾತ್ರಿಯ ಒಂಬತ್ತು ಗಂಟೆಯಾಗಿದೆ. ಈಗ ತಲೆ ಬಾಚಿಕೊಂಡು ಪೌಡರ್ ಹಾಕಿಕೊಳ್ಳಲು ನಾನು ಯಾವ ಪಾರ್ಟಿಗೆ ಹೋಗಬೇಕಾಗಿದೆ! ನಾನು ಚಹಾಗೆ ಮಿಲ್ಕ್ ಪೌಡರ್ ಒಮ್ಮೊಮ್ಮೆ ಹಾಕಿಕೊಳ್ಳಬಹುದು ಅಷ್ಟೇ ಹೊರತು ಮುಖಕ್ಕೆ ಪೌಡರ್ ಹಾಕಿಕೊಳ್ಳಬೇಕಾದ ಸಂದರ್ಭ ಮದುವೆಯ ರಿಸೆಪ್ಷನ್ ದಿವಸ ಮಾತ್ರ ಬಂದಿತ್ತೇನೋ. ನನ್ನ ಹೆಂಡತಿಗೂ ಅದು ಮರೆತುಹೋಗಿದೆ. ಅದಕ್ಕೂ ಹಿಂದೆ ಒಂದು ಫೋಟೋಗ್ರಾಫ್ ಗೆ ಮಾಡೆಲ್ ಆಗಿ ನಿಲ್ಲುವ ಸಂದರ್ಭ ನನಗೆ ಒದಗಿಬಂದಿತ್ತು! ಆಗಲೂ ಮುಖಕ್ಕೆ ಪೌಡರ್ ಹಚ್ಚಿಕೊಂಡಿದ್ದೆ! (ನಿಮಗೆ ನನ್ನ ಸೌಂದರ್ಯದ ಬಗ್ಗೆ ಈಗಾಗಲೇ ಹೊಟ್ಟೆಕಿಚ್ಚು ಬಂದಿಲ್ಲದಿದ್ದರೆ ಹೇಳಿ, ಆ ಸಂದರ್ಭದ ಬಗ್ಗೆ ಇನ್ನಷ್ಟು ವಿಶದವಾಗಿ ಬರೆಯುತ್ತೇನೆ.)
ಪ್ರಸ್ತುತ ನನಗೆ ಡ್ರೈವರ್ ಬಗ್ಗೆ ಕೋಪ ಬಂತೆಂದು ಹೇಳಿದೆನಲ್ಲವೇ? ಕಿಡಿಕಾರಲು ನಾನು ಬಾಯಿ ತೆಗೆಯುವ ಮುನ್ನವೇ ಡ್ರೈವರ್ ಪ್ರಾಣಿ ಮತ್ತೊಮ್ಮೆ ಮಾತಾಡಿದ. "ನೋಡಿ ಸಾರ್, ಈಗಿನ ಕಾಲದ ಫಿಲ್ಮ್ ಟೈಟಲ್ಗುಳು!"
ಈಗ ನನಗೆ ಸ್ವಲ್ಪ ನಿರಾಳವಾಯಿತು. ಓಹೋ, ಇವನು ಯಾವುದೋ ಚಿತ್ರದ ಬಗ್ಗೆ ಮಾತಾಡುತ್ತಿದ್ದಾನೆ, ಅಷ್ಟೇ! ನನಗೆ ಮಾತಾಡಲು ಅವಕಾಶವನ್ನೇ ಕೊಡದೆ ಡ್ರೈ.ಪ್ರಾ. ಮುಂದುವರೆಸಿದ. "ಅಯ್ಯಯ್ಯಪ್ಪಾ ಅದು ಯಾರು ನೋಡ್ತಾರೆ ಅಂತ ಮಾಡ್ತಾರೋ ಈ ಫಿಲ್ಮ್ಗೋಳ್ನ!"
"ಯಾಕೆ? ನಿಮಗೆ ಇಷ್ಟ ಆಗಲಿಲ್ವಾ?"
"ಅಯ್ಯೋ ನಾನು ಈ ಫಿಲ್ಮ್ಗೋಳ್ನ ನೋಡೋದೇ ನಿಲ್ಸಿಬಿಟ್ಟಿದೀನಿ ಸಾರ್! ಫ್ಯಾಮಿಲಿ ಜೊತೆ ಕೂತ್ಗೊಂಡು ನೋಡೋಂಥಾ ಫಿಲ್ಮ್ ಒಂದಾರಾ ಬರತ್ತಾ ಈಗ? ಒಂದು ಕಾಲದಲ್ಲಿ ರಾಜಕುಮಾರ್ ಫಿಲ್ಮ್ ಹೆಂಗಿರ್ತಿತ್ತು ಸಾರ್! ನಾನು ಈಗ ನೋಡಿದ್ರೆ ಪುನೀತ್ ರಾಜ್ ಕುಮಾರ್ ಅವರದ್ದು ಯಾವಾಗಲಾದ್ರೂ ನೋಡ್ತೀನಿ. ಸ್ವಲ್ಪ ಫ್ಯಾಮಿಲಿ ಜೊತೆ ನೋಡೋ ಹಾಗೆ ಎಮೋಷನ್ನಾಗಿ ಇರುತ್ತೆ."
"..."
"ಮೊನ್ನೆ ಏನಾಯ್ತು ಸಾರ್, ಒಬ್ರು ಕ್ಲಯಂಟ್ ಬಾಡ್ಗೆ ಹಿಡಿದೋರು ಮೀಟಿಂಗ್ ಇದೆ ವೆಯ್ಟ್ ಮಾಡು ಅಂತ ಹೊರಟುಹೋದ್ರು ಸಾರ್. ಮೂರು ಗಂಟೆ ಹೊತ್ತು ನಾನು ಏನು ಮಾಡಬೇಕು? ಹೋಗ್ಲಿ ತುಂಬಾ ದಿನ ಆಯ್ತಲ್ಲಾ ಅಂತ ಒಂದು ಫಿಲ್ಮ್ ಗೆ ಟಿಕೆಟ್ ಕೊಂಡುಕೊಂಡು ಹೋದೆ ನೋಡಿ ..."
ಸಸ್ಪೆನ್ಸ್ ಗಾಗಿ ಡ್ರೈ.ಪ್ರಾ. ಒಂದು ನಿಮಿಷ ನಿಲ್ಲಿಸಿದ.
"ಯಾಕೆ? ಹಿಡಿಸಲಿಲ್ವಾ?" ನಾನು ಕೇಳಿದೆ.
"ಅಯ್ಯೋ! ಯಾಕೆ ಹೇಳ್ತೀರಿ ಆ ಕತೆ! ಫಿಲ್ಮ್ ಹೀರೋ ಅಂತೆ. ಅವನನ್ನ ಹೊಡೆದು ಸಾಯ್ಸಿ ಹೂತು ಹಾಕಿ ಮೇಲೆ ರಸ್ತೆ ಕೂಡಾ ಕಟ್ಟುದ್ರೂ ಅಲ್ಲಿಂದ್ಲೇ ಮ್ಯಾಲಕ್ ಬಂದು ಹೊಡೆದಾಡಿ ರಿವೆಂಜ್ ತೊಗೋತಾನೆ ಸಾರ್! ನನಗೆ ಎರಡೂವರೆ ಗಂಟೆ ಸಿನಿಮಾ ನೋಡಿ ಎಂಥಾ ತಲೆ ನೋವು ಬಂತು ಅಂದ್ರೆ ಸೀದಾ ಹೋಟೆಲ್ಲಿಗೆ ಹೋಗಿ ಒಂದು ಕಾಫಿ ಆರ್ಡರ್ ಮಾಡಿ ಒಂದು ತಲೆನೋವು ಮಾತ್ರೆ ನುಂಗಿದೆ! ನನಗೆ ಎಂಥಾ ಸಿಟ್ಟು ಬಂದಿತ್ತು ಅಂತೀರಾ ಸಾರ್, ಆ ಡೈರೆಕ್ಟರ್ ಅನ್ನೋನು ಏನಾದ್ರೂ ನನ್ನ ಮುಂದೆ ಬಂದಿದ್ದಿದ್ರೆ ಖಂಡಿತಾ ಅವನಿಗೆ ಹೊಡೆದುಬಿಡ್ತಿದ್ದೆ!"
ನಾನು ಕಿಟಕಿಯಿಂದ ಹೊರಗೆ ಇಣುಕಿ ಯಾವುದಾದರೂ ಹೋಟೆಲ್ ಕಾಣುತ್ತದೆಯಾ ಎಂದು ನೋಡಿದೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ