ಪೋಸ್ಟ್‌ಗಳು

ಜೂನ್, 2016 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಸ್ಟೇಷನ್ನಿಗೆ ಬಿಡಲು ಬರಬೇಡ ಅಪ್ಪಾ

ಇಮೇಜ್
ಮೂಲ ಹಿಂದಿ ಕವಿತೆ - ಮಧು  ಕನ್ನಡಕ್ಕೆ - ಸಿ. ಪಿ. ರವಿಕುಮಾರ್  ನನ್ನನ್ನು ಸ್ಟೇಷನ್ನಿಗೆ ಬಿಡಲು ಬರಬೇಡ ಅಪ್ಪಾ ಕಣ್ಣೀರನ್ನು ಬಚ್ಚಿಟ್ಟುಕೊಂಡು ಬೇರೆಡೆಗೆ ನೋಡುತ್ತಾ ಸಪ್ಪಗೆ ಹೀಗೆ ನಗಬೇಡ ಅಪ್ಪಾ ನನ್ನನ್ನು ಸ್ಟೇಷನ್ನಿಗೆ ಬಿಡಲು ಬರಬೇಡ ಅಪ್ಪಾ ಮನೆಯ ದೀಪಗಳನ್ನು ಹುಷಾರಾಗಿ ಆರಿಸುವೆ ಬೇಕಾದ ವಸ್ತುಗಳನ್ನೂ ಬೇಡವೆಂದು ಸಾಧಿಸುವೆ ಪದೇಪದೇ ಗಾಡಿಯ ಮೈಲೇಜು ಚೆಕ್ ಮಾಡುವ ಅಪ್ಪಾ ನನ್ನ ಕೈಯಲ್ಲಿ ಎಟಿಎಂ ಕಾರ್ಡು ಇಡಬೇಡ ಅಪ್ಪಾ ನನ್ನನ್ನು ಸ್ಟೇಷನ್ನಿಗೆ ಬಿಡಲು ಬರಬೇಡ ಅಪ್ಪಾ ನೀರಿನ ಬಾಟಲ್ ಇಟ್ಟುಕೊಂಡೆಯೋ ಇಲ್ಲವೋ ಟಿಕೆಟ್ ಇದೆಯೋ ಇಲ್ಲವೋ ಮತ್ತೊಮ್ಮೆ ನೋಡಿಕೋ ಇಟ್ಟುಕೊಂಡಿದ್ದೀ ತಾನೇ ಪರ್ಸಿನಲ್ಲಿ ಚಿಲ್ಲರೆ? ನಿನ್ನ ಒದ್ದೆ ಪ್ರೀತಿಯನ್ನು ಸುರಿಸದಿರು ಅಪ್ಪಾ ನನ್ನನ್ನು ಸ್ಟೇಷನ್ನಿಗೆ ಬಿಡಲು ಬರಬೇಡ ಅಪ್ಪಾ ಚೀಲವನ್ನು ನೂಕುತ್ತಾ ಸೀಟಿನ ಕೆಳಗೆ ಒಂದು ಕಣ್ಣಿಟ್ಟಿರಿ ಹೊರಟಿದ್ದಾಳೆ ಒಬ್ಬಾಕೆ ಎಂದು ಬೇಡುತ್ತಾ ಎದುರು ಸೀಟಿನ ಹೆಂಗಸಿಗೆ ಸುಮ್ಮನೆ ಕಾಳಜಿ ಮಾಡಿಕೊಳ್ಳಬೇಡಪ್ಪಾ ನನ್ನನ್ನು ಸ್ಟೇಷನ್ನಿಗೆ ಬಿಡಲು ಬರಬೇಡ ಅಪ್ಪಾ ಮುಟ್ಟಿದ ಕೂಡಲೇ ಫೋನ್ ಮಾಡು ಆಯಿತಾ? ಇನ್ನು ಯಾವಾಗಲೋ ಮತ್ತೆ ಈಕಡೆಗೆ ಪಯಣ? ನೀನಿಲ್ಲದೆ ಇನ್ನು ಮನೆಯೆಲ್ಲ ಭಣಭಣ  ಎನ್ನುತ್ತಾ ತಲೆಯ ಮೇಲೆ ಕೈ ಇಡಬೇಡ ಅಪ್ಪಾ ನನ್ನನ್ನು ಸ್ಟೇಷನ್ನಿಗೆ ಬಿಡಲು ಬರಬೇಡ ಅಪ್ಪಾ ಮೌನಿಯಾಗುವೆನು ಏನು ಹೇಳಲೂ ತೋರದೆ ಎದೆತುಂಬಿ ನನ್ನನ್ನು ಅಪ್ಪಿಕೊಳ...

ಭರವಸೆ

ಇಮೇಜ್
ಮೂಲ ಹಿಂದಿ ಕವಿತೆ: (ಯಾರದೆಂದು ಗೊತ್ತಿಲ್ಲ) ಅನುವಾದ: ಸಿ. ಪಿ. ರವಿಕುಮಾರ್ ನೀರು ಹಿಮದಗಡ್ಡೆಯಾಗಲು ಸಮಯ ಬೇಕು ಮುಳುಗಿದ ಸೂರ್ಯ ಹೊರಬರಲು ಸಮಯ ಬೇಕು. ಸ್ವಲ್ಪ ಧೈರ್ಯವಿಟ್ಟುಕೋ  ಮನಸ್ಸಿನಲ್ಲಿ - ಇನ್ನಷ್ಟು ಬಲ ಬರಲಿ ನಿನ್ನ ಪ್ರಯತ್ನದಲ್ಲಿ: ತುಕ್ಕು ಹಿಡಿದ ಅದೃಷ್ಟದ ಬಾಗಿಲು ತೆರೆಯಲು ಸಮಯ ಬೇಕು. ಸುಸ್ತಾದರೆ ಸುಧಾರಿಸಿಕೊಂಡು ಮತ್ತೆ ಮೇಲೆದ್ದು ನೂಕು. ಮುಗ್ಗರಿಸಿದಾಗ ಮತ್ತೆ ಮೇಲೇಳಲು ಸಮಯ ಬೇಕು. ನೀನೇ ನೋಡುತ್ತೀಯ, ನಿನ್ನ ಬದುಕಿನಲ್ಲಿ ಮತ್ತೆ ಉಂಟಾಗುತ್ತದೆ ಬೆಳಕು ಮುರಿದ ಮನಸ್ಸು ಮತ್ತೆ ಒಂದಾಗಲು ಸಮಯ ಬೇಕು. ಅಂದಿದ್ದನ್ನು  ನೀನು ಮಾಡಿ ತೋರಿಸುತ್ತೀ ಗೆಳೆಯ!   ಮೋಡ ಗುಡುಗಿದ ಮೇಲೆ ಮಳೆಯಾಗಲು ಸಮಯ ಬೇಕು. ಸಂತೋಷದ ದಿನಗಳು ಬರಲಿವೆ, ಬಂದೇ ತೀರುತ್ತವೆ, ಸ್ವಲ್ಪ ಕಾಯಬೇಕು. ನೋವುದುಃಖಗಳು ಹಠಮಾರಿಗಳು, ಮೇಲೆಬ್ಬಿಸಲು ಸಮಯ ಬೇಕು.