ಭರವಸೆ

ಮೂಲ ಹಿಂದಿ ಕವಿತೆ: (ಯಾರದೆಂದು ಗೊತ್ತಿಲ್ಲ)
ಅನುವಾದ: ಸಿ. ಪಿ. ರವಿಕುಮಾರ್
Image result for dawn sky wikipedia

ನೀರು ಹಿಮದಗಡ್ಡೆಯಾಗಲು ಸಮಯ ಬೇಕು
ಮುಳುಗಿದ ಸೂರ್ಯ ಹೊರಬರಲು ಸಮಯ ಬೇಕು.
ಸ್ವಲ್ಪ ಧೈರ್ಯವಿಟ್ಟುಕೋ  ಮನಸ್ಸಿನಲ್ಲಿ -
ಇನ್ನಷ್ಟು ಬಲ ಬರಲಿ ನಿನ್ನ ಪ್ರಯತ್ನದಲ್ಲಿ:
ತುಕ್ಕು ಹಿಡಿದ ಅದೃಷ್ಟದ ಬಾಗಿಲು ತೆರೆಯಲು ಸಮಯ ಬೇಕು.
ಸುಸ್ತಾದರೆ ಸುಧಾರಿಸಿಕೊಂಡು ಮತ್ತೆ ಮೇಲೆದ್ದು ನೂಕು.
ಮುಗ್ಗರಿಸಿದಾಗ ಮತ್ತೆ ಮೇಲೇಳಲು ಸಮಯ ಬೇಕು.
ನೀನೇ ನೋಡುತ್ತೀಯ, ನಿನ್ನ ಬದುಕಿನಲ್ಲಿ ಮತ್ತೆ ಉಂಟಾಗುತ್ತದೆ ಬೆಳಕು
ಮುರಿದ ಮನಸ್ಸು ಮತ್ತೆ ಒಂದಾಗಲು ಸಮಯ ಬೇಕು.
ಅಂದಿದ್ದನ್ನು  ನೀನು ಮಾಡಿ ತೋರಿಸುತ್ತೀ ಗೆಳೆಯ!  
ಮೋಡ ಗುಡುಗಿದ ಮೇಲೆ ಮಳೆಯಾಗಲು ಸಮಯ ಬೇಕು.
ಸಂತೋಷದ ದಿನಗಳು ಬರಲಿವೆ, ಬಂದೇ ತೀರುತ್ತವೆ, ಸ್ವಲ್ಪ ಕಾಯಬೇಕು.
ನೋವುದುಃಖಗಳು ಹಠಮಾರಿಗಳು, ಮೇಲೆಬ್ಬಿಸಲು ಸಮಯ ಬೇಕು.

ಕಾಮೆಂಟ್‌ಗಳು



  1. पानी को बर्फ में

    बदलने में वक्त लगता है।

    ढले हुए सूरज को
    निकलने में वक्त लगता है।
    थोड़ा धीरज रख,
    थोड़ा और जोर लगाता रह।
    किस्मत के जंग लगे दरवाजे को
    खुलने में वक्त लगता है।
    कुछ देर रुकने के बाद
    फिर से चल पड़ना दोस्त।
    हर ठोकर के बाद
    संभलने में वक्त लगता है।
    बिखरेगी फिर वही चमक
    तेरे वजूद से, तू महसूस करना।
    टूटे हुए मन को
    संवरने में थोड़ा वक्त लगता है।
    जो तूने कहा,
    कर दिखायेगा रख यकीन।
    गरजे जब बादल ,
    तो बरसने में वक्त लगता है ....
    खुशी आ रही है
    और आएगी ही, इन्तजार कर।
    जिद्दी दुख-दर्द को टलने में
    थोड़ा तो वक्त लगता है ।

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)