ಪೋಸ್ಟ್‌ಗಳು

ಅಕ್ಟೋಬರ್, 2017 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಎಲ್ಲಿದ್ದಾನೆ ರಾಮ?

ಮೂಲ ಹಿಂದಿ - ತೇಜೇಂದ್ರ ಶರ್ಮಾ  ಕನ್ನಡಕ್ಕೆ - ಸಿ. ಪಿ. ರವಿಕುಮಾರ್  ರಾಮರಾಜ್ಯದಲ್ಲಿ  ಮೊದಲ ಸಲ ದೀಪಾವಳಿ  ಆಚರಿಸಿದ  ಪ್ರಜೆಗಳಿಗೆ  ಅದೆಷ್ಟು ಸುಲಭವಾಗಿತ್ತು  ಗುರುತಿಸುವುದು  ಒಳ್ಳೆಯದನ್ನು ಮತ್ತು ಕೆಟ್ಟದ್ದನ್ನು!  ಆ ದಿನಗಳಲ್ಲಿ  ಒಳ್ಳೆಯದು ಬರೀ ಒಳ್ಳೆಯದಾಗಿ  ಕೆಟ್ಟದ್ದು ಸಂಪೂರ್ಣ ಕೆಟ್ಟದ್ದಾಗಿ ಇರುತ್ತಿತ್ತು. ಕಲಬೆರಕೆ ಇರುತ್ತಿರಲಿಲ್ಲ  ರಾಮರಾವಣರಲ್ಲಿ, ರಾಮ ರಾಮನೇ ಆಗಿರುತ್ತಿದ್ದ, ಮತ್ತು ರಾವಣ ರಾವಣನೇ.   ಆದರೆ ಒಂದು ವಿಷಯ ಸಾಮಾನ್ಯವಾಗಿತ್ತು ಒಳ್ಳೆಯದರ ವಿಜಯವಾಗುತ್ತಿತ್ತು ಕೆಟ್ಟದ್ದರ ಮೇಲೆ ರಾಮನ ವಿಜಯವಾಗುತ್ತಿತ್ತು ರಾವಣನ ಮೇಲೆ.  ದ್ವಾಪರದಲ್ಲೂ ಕಂಸನು ಎಂದೂ ಧರಿಸಲಿಲ್ಲ ಕೃಷ್ಣನ ರೂಪ, ಕಾಪಿಟ್ಟುಕೊಂಡ ತನ್ನದೇ ಸ್ವರೂಪ. ನಮ್ಮ ಯುಗದ ಸಮಸ್ಯೆ ಎಂದರೆ  ಧರ್ಮ ಮತ್ತು ಅಧರ್ಮಗಳು  ಬೆರೆತುಹೋಗಿವೆ,  ಎರಡರ ಚೆಹರೆಯೂ ಹೋಲುತ್ತವೆ ಪರಸ್ಪರ.   ದೀಪಾವಳಿ ಆಚರಿಸಲು ಆವಶ್ಯಕವಾದದ್ದು ರಾವಣನ ಮೇಲೆ ರಾಮನ ವಿಜಯ.   ಇಲ್ಲಿದ್ದಾರೆ ಬುಷ್ ಮತ್ತು ಸದ್ದಾಮ್  ಇಬ್ಬರ ಚಹರೆಗೂ ಒಂದೇ ಹೋಲಿಕೆ.  ಎಲ್ಲಿದ್ದಾನೆ ರಾಮ? 

ಆತ್ಮದೀಪ

ಇಮೇಜ್
ಮೂಲ ಹಿಂದಿ - ಹರಿವಂಶರಾಯ್ ಬಚ್ಚನ್  ಕನ್ನಡ ಅನುವಾದ - ಸಿ. ಪಿ. ರವಿಕುಮಾರ್  ಮಣ್ಣಿನಿಂದ ಮಾಡಿದ ಸಣ್ಣದೊಂದು ಹಣತೆ ನಾನು ನನಗಿಲ್ಲ ನನ್ನನ್ನು ಕುರಿತು ಎಳ್ಳಷ್ಟೂ ಪ್ರೀತಿ  ಜಗತ್ತು ಎಲ್ಲಿಯವರೆಗೂ ಬಯಸುತ್ತದೋ ಜ್ಯೋತಿ ನನ್ನಿಂದ, ಉರಿಯುತ್ತಾ  ಕೊಡಲು ಸಿದ್ಧನಾಗಿಹೆನು  ಆದರೆ ನನ್ನ ಬೆಳಕಿನಿಂದ ಏನಾದರೂ  ಕೋರೈಸಿದರೆ ನಿದ್ರಿಸಿದ ಜಗದ ಕಣ್ಣು  ನಂದಿಸಿಬಿಡಲಿ ಬೇಕಾದರೆ ನನ್ನನ್ನು  ನಂದಲು ನನ್ನದೇನೂ ಇಲ್ಲ ತಕರಾರು  ತಿಳಿದುಕೊಳ್ಳಲಿ ಇಷ್ಟನ್ನು ಮಾತ್ರ ನನ್ನನ್ನು ಕುರಿತು ಜಗತ್ತು: ಮಣ್ಣಿನ ದೀಪವಾದರೂ ನಾನು ಭಿನ್ನ  ಪ್ರಕೃತಿಯು ಹಾಗೆ ಸೃಷ್ಟಿಸಿದೆ ನನ್ನನ್ನ  ಜೀವಂತ ಹಣತೆಯು ನಾನು, ಅಭಿಮಾನ ನನ್ನಲ್ಲಿ ತುಂಬಿರುವುದು  ನಂದಿಸಲು ನನ್ನನ್ನು ಕೈ ಮುಂದೆ ಮಾಡುವ ಮುನ್ನ  ಯೋಚಿಸಲಿ ಜಗತ್ತು ಒಂದಲ್ಲ ಹತ್ತು ಸಲ  ಪಶ್ಚಾತ್ತಾಪ ಪಡಬಾರದಲ್ಲ ಅನಂತರ  ನಂದಿಸಿದ ನಂತರ ಹಚ್ಚಲಾಗದು ನನ್ನನ್ನು ಪುನಃ 

ಹತ್ತು ಶೇರ್ ಗಳು

ಇಮೇಜ್
ಅನುವಾದ - ಸಿ. ಪಿ. ರವಿಕುಮಾರ್  ಬಾಗಿ ನಮಿಸಲು ಬೇಕಾದಷ್ಟಿವೆ ನೆಲಗಟ್ಟು, ತಬ್ಬಿಕೊಳ್ಳುವ ಬಾಗಿಲುಗಳು ಎಲ್ಲೂ ಕಾಣವು ಸುತ್ತಲೂ ಕಾಣುತ್ತಾರೆ ಸಾವಿರಾರು ದೇವರು, ಮಾನವರು ಮಾತ್ರ ಕಾಣರಲ್ಲ ಎಲ್ಲೂ -- ಖಾಲಿದ್ ಹಸನ್ ಕಾದಿರಿ ಮನುಷ್ಯ ಮನುಷ್ಯನನ್ನು ಸಂಧಿಸುತ್ತಾನೆ ಹೃದಯಗಳು ಸಂಧಿಸುವುದು ಮಾತ್ರ ಕಡಿಮೆ -- ಜಿಗರ್ ಮುರಾದಾಬಾದಿ ಮನುಷ್ಯತ್ವವೆಂಬುದು ಬೇರೆ, ಕಲಿಕೆ ಎಂಬುದೇ ಬೇರೆ ಗಿಳಿಗೆ ಎಷ್ಟೇ ಪಾಠ ಹೇಳಿದರೂ ಒರಟು ಪ್ರಾಣಿಯಾಗಿಯೇ ಉಳಿಯಿತು -- ಶೇಖ್ ಇಬ್ರಾಹಿಮ್ ಜೌಕ್ ಯಾರಿಂದ ಮನುಷ್ಯನಿಗೆ ಆಗುವುದೋ ತೊಂದರೆಯೇ ಸದಾ ಅಂಥವರು ತಾವೇ ದೇವಮಾನವರೆಂದು ಮಾಡುತ್ತಿದ್ದಾರೆ ವಾದ -- ಅಬ್ದುಲ್ ಹಮೀದ್ ಅದಮ್ ಭೂಮಿ ಸುತ್ತಿಬಳಸಿ ಸ್ವಸ್ಥಾನಕ್ಕೆ ಬರುತ್ತದೆಯಾದರೂ ಬಾರವು ಏತಕ್ಕೆ ಕಳೆದ ಸಮಯಗಳು ಮರಳಿ ವಾಪಸ್ಸು? -- ಇಬರತ್ ಮಛಲಿಶಹರಿ ತಮ್ಮದೇ ಸಮಸ್ಯೆಗಳನ್ನು ಕುರಿತು ಏನೂ ಮಾಡಲಾಗದವರು ಮಾತಾಡುವರು ತಾವೇ ಎಂಬಂತೆ ದೇವರು -- ಇಫ್ತಿಕಾರ್ ಆರಿಫ್ ಕೆಲವರು ಹಿಂದೂ ಕೆಲವರು ಮುಸಲ್ಮಾನರು ಮತ್ತು ಕೆಲವರು ಕ್ರೈಸ್ತರು ಮನುಷ್ಯರಾಗುವುದಿಲ್ಲ ಎಂದು ಭಾಷೆ ತೊಟ್ಟಂತಿದೆ ಎಲ್ಲರೂ -- ನಿದಾ ಫಾಜಲಿ ಗುಂಪು ಎಂಬುದು ಒಂಟಿತನಗಳ ಸಮ್ಮಿಲನ ಪ್ರತ್ಯೇಕವಾಗಿದ್ದಾರೆ ಜನರಿಂದ ಜನ -- ಸಬಾ ಅಕ್ಬರಾಬಾದಿ ಅವನಿಗೆ ಶತ್ರುಗಳು ಬಹಳ, ಮನುಷ್ಯ ಒಳ್ಳೆಯವನೇ ಇರಬೇಕ...