ಎಲ್ಲಿದ್ದಾನೆ ರಾಮ?


ಮೂಲ ಹಿಂದಿ - ತೇಜೇಂದ್ರ ಶರ್ಮಾ 
ಕನ್ನಡಕ್ಕೆ - ಸಿ. ಪಿ. ರವಿಕುಮಾರ್ 

ರಾಮರಾಜ್ಯದಲ್ಲಿ 
ಮೊದಲ ಸಲ ದೀಪಾವಳಿ 
ಆಚರಿಸಿದ ಪ್ರಜೆಗಳಿಗೆ 
ಅದೆಷ್ಟು ಸುಲಭವಾಗಿತ್ತು 
ಗುರುತಿಸುವುದು 
ಒಳ್ಳೆಯದನ್ನು ಮತ್ತು ಕೆಟ್ಟದ್ದನ್ನು! 

ಆ ದಿನಗಳಲ್ಲಿ 
ಒಳ್ಳೆಯದು ಬರೀ ಒಳ್ಳೆಯದಾಗಿ 
ಕೆಟ್ಟದ್ದು ಸಂಪೂರ್ಣ ಕೆಟ್ಟದ್ದಾಗಿ
ಇರುತ್ತಿತ್ತು.
ಕಲಬೆರಕೆ ಇರುತ್ತಿರಲಿಲ್ಲ 
ರಾಮರಾವಣರಲ್ಲಿ,
ರಾಮ ರಾಮನೇ ಆಗಿರುತ್ತಿದ್ದ,
ಮತ್ತು ರಾವಣ ರಾವಣನೇ.  

ಆದರೆ ಒಂದು ವಿಷಯ ಸಾಮಾನ್ಯವಾಗಿತ್ತು
ಒಳ್ಳೆಯದರ ವಿಜಯವಾಗುತ್ತಿತ್ತು ಕೆಟ್ಟದ್ದರ ಮೇಲೆ
ರಾಮನ ವಿಜಯವಾಗುತ್ತಿತ್ತು ರಾವಣನ ಮೇಲೆ. 

ದ್ವಾಪರದಲ್ಲೂ ಕಂಸನು ಎಂದೂ
ಧರಿಸಲಿಲ್ಲ ಕೃಷ್ಣನ ರೂಪ,
ಕಾಪಿಟ್ಟುಕೊಂಡ ತನ್ನದೇ ಸ್ವರೂಪ.

ನಮ್ಮ ಯುಗದ ಸಮಸ್ಯೆ ಎಂದರೆ 
ಧರ್ಮ ಮತ್ತು ಅಧರ್ಮಗಳು 
ಬೆರೆತುಹೋಗಿವೆ, 
ಎರಡರ ಚೆಹರೆಯೂ ಹೋಲುತ್ತವೆ ಪರಸ್ಪರ.  

ದೀಪಾವಳಿ ಆಚರಿಸಲು ಆವಶ್ಯಕವಾದದ್ದು
ರಾವಣನ ಮೇಲೆ ರಾಮನ ವಿಜಯ.  
ಇಲ್ಲಿದ್ದಾರೆ ಬುಷ್ ಮತ್ತು ಸದ್ದಾಮ್ 
ಇಬ್ಬರ ಚಹರೆಗೂ ಒಂದೇ ಹೋಲಿಕೆ. 
ಎಲ್ಲಿದ್ದಾನೆ ರಾಮ? 


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)