ಹತ್ತು ಶೇರ್ ಗಳು

ಅನುವಾದ - ಸಿ. ಪಿ. ರವಿಕುಮಾರ್ 
Image result for man alone wiki

ಬಾಗಿ ನಮಿಸಲು ಬೇಕಾದಷ್ಟಿವೆ ನೆಲಗಟ್ಟು, ತಬ್ಬಿಕೊಳ್ಳುವ ಬಾಗಿಲುಗಳು ಎಲ್ಲೂ ಕಾಣವು
ಸುತ್ತಲೂ ಕಾಣುತ್ತಾರೆ ಸಾವಿರಾರು ದೇವರು, ಮಾನವರು ಮಾತ್ರ ಕಾಣರಲ್ಲ ಎಲ್ಲೂ
-- ಖಾಲಿದ್ ಹಸನ್ ಕಾದಿರಿ

ಮನುಷ್ಯ ಮನುಷ್ಯನನ್ನು ಸಂಧಿಸುತ್ತಾನೆ
ಹೃದಯಗಳು ಸಂಧಿಸುವುದು ಮಾತ್ರ ಕಡಿಮೆ
-- ಜಿಗರ್ ಮುರಾದಾಬಾದಿ

ಮನುಷ್ಯತ್ವವೆಂಬುದು ಬೇರೆ, ಕಲಿಕೆ ಎಂಬುದೇ ಬೇರೆ
ಗಿಳಿಗೆ ಎಷ್ಟೇ ಪಾಠ ಹೇಳಿದರೂ ಒರಟು ಪ್ರಾಣಿಯಾಗಿಯೇ ಉಳಿಯಿತು
-- ಶೇಖ್ ಇಬ್ರಾಹಿಮ್ ಜೌಕ್

ಯಾರಿಂದ ಮನುಷ್ಯನಿಗೆ ಆಗುವುದೋ ತೊಂದರೆಯೇ ಸದಾ
ಅಂಥವರು ತಾವೇ ದೇವಮಾನವರೆಂದು ಮಾಡುತ್ತಿದ್ದಾರೆ ವಾದ
-- ಅಬ್ದುಲ್ ಹಮೀದ್ ಅದಮ್

ಭೂಮಿ ಸುತ್ತಿಬಳಸಿ ಸ್ವಸ್ಥಾನಕ್ಕೆ ಬರುತ್ತದೆಯಾದರೂ
ಬಾರವು ಏತಕ್ಕೆ ಕಳೆದ ಸಮಯಗಳು ಮರಳಿ ವಾಪಸ್ಸು?
-- ಇಬರತ್ ಮಛಲಿಶಹರಿ


ತಮ್ಮದೇ ಸಮಸ್ಯೆಗಳನ್ನು ಕುರಿತು ಏನೂ ಮಾಡಲಾಗದವರು
ಮಾತಾಡುವರು ತಾವೇ ಎಂಬಂತೆ ದೇವರು
-- ಇಫ್ತಿಕಾರ್ ಆರಿಫ್

ಕೆಲವರು ಹಿಂದೂ ಕೆಲವರು ಮುಸಲ್ಮಾನರು ಮತ್ತು ಕೆಲವರು ಕ್ರೈಸ್ತರು
ಮನುಷ್ಯರಾಗುವುದಿಲ್ಲ ಎಂದು ಭಾಷೆ ತೊಟ್ಟಂತಿದೆ ಎಲ್ಲರೂ
-- ನಿದಾ ಫಾಜಲಿ

ಗುಂಪು ಎಂಬುದು ಒಂಟಿತನಗಳ ಸಮ್ಮಿಲನ
ಪ್ರತ್ಯೇಕವಾಗಿದ್ದಾರೆ ಜನರಿಂದ ಜನ
-- ಸಬಾ ಅಕ್ಬರಾಬಾದಿ

ಅವನಿಗೆ ಶತ್ರುಗಳು ಬಹಳ, ಮನುಷ್ಯ ಒಳ್ಳೆಯವನೇ ಇರಬೇಕು
ಅವನೂ ನನ್ನಂತೆ ಈ ನಗರದಲ್ಲಿ ಒಬ್ಬಂಟಿಯೇ ಇರಬೇಕು
-- ನಿದಾ ಫಾಜಲಿ

ಆಕಾಶವೇ, ನಿನ್ನ ದೇವರನ್ನು ಕಂಡರೆ ಹೆದರಿಕೆಯಿಲ್ಲ
ಭೂಮಿಯ ಮೇಲಿರುವ ಮನುಷ್ಯರಿಗೆ ಬೆದರುತ್ತೇವೆ ನಾವು.
-- ಅಜ್ಞಾತ


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)