ಪೋಸ್ಟ್‌ಗಳು

ಜೂನ್, 2018 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಬಾವಿಯೊಳಗೆ

ಇಮೇಜ್
ಮೂಲ - ಆಂಡ್ರೂ ಹಡ್ಜಿನ್ಸ್  ಕನ್ನಡಕ್ಕೆ - ಸಿ. ಪಿ. ರವಿಕುಮಾರ್    ಹಗ್ಗವನ್ನು ಕುಣಿಕೆ ಮಾಡಿದ ಅಪ್ಪ  ಬಿಗಿಗೊಳಿಸಿದ ನನ್ನ ಸೊಂಟದ ಸುತ್ತ.  ಅನಂತರ ಅಂಧಕಾರದ ಗಾಢದೊಳಗೆ   ನನ್ನನ್ನು ಮೆಲ್ಲಗೆ ಇಳಿಬಿಟ್ಟ.  ಒಮ್ಮೆಲೇ ಹಲವಾರು ರುಚಿಗಳು ನನ್ನ ಬಾಯಲ್ಲಿ  ಭೀತಿ, ಕತ್ತಲೆ, ಮಣ್ಣು, ಕೊಳೆಯುವಿಕೆಯ ರುಚಿ. ವಾಕರಿಸಿ ಮುಖ ತಿರುವಿ ತಲೆ ಬಡಿಸಿಕೊಂಡು  ಅನುಭವಿಸುತ್ತೇನೆ ಹೊಸದಾಗಿ ಕಬ್ಬಿಣದ ರುಚಿ  ತುಟಿಗೆ ಹತ್ತಿದ ನೆತ್ತರಿನಲ್ಲಿ. ಅಪ್ಪ ಕೈ ಮೇಲೆ ಕೈ ಇಟ್ಟು ಇಳಿಸುತ್ತಾನೆ ಆಳ ಆಳಕ್ಕೆ ಹಗ್ಗ  ಮೆಲ್ಲಗೆ ಬಿಟ್ಟು ಬಿಟ್ಟು. ಮುಟ್ಟುತ್ತೇನೆ ಕೊನೆಗೆ ತಣ್ಣನೆಯ ನೀರು ಕೂದಲಿನ ರಾಶಿಯೊಂದು ಎದೆಗೆ ಸುತ್ತಿ ನಾನು ಕೂಗಿಕೊಂಡಾಗ ಅಪ್ಪ ಮೇಲೆತ್ತುತ್ತಾನೆ ಒದ್ದೆ ಹಗ್ಗ ಎಳೆದು; ನಾನು ಉಸಿರು ಕಟ್ಟಿ ಮೇಲೆ ಬರುತ್ತೇನೆ ಅವಚಿಕೊಂಡು ಎದೆಗೆ ಪಕ್ಕದ ಮನೆಯ ಕಾಣೆಯಾದ ನಾಯಿ. ಸಾವನ್ನು ಅಪ್ಪಿಕೊಂಡು ಸಾಗಿದಾಗ ಮೊದಲು ಬೆಳಕು, ನಂತರ ಕೈಗಳು ತದನಂತರ ಗಾಳಿ. (ಹುಡುಗನೊಬ್ಬನನ್ನು ತಂದೆ ಬಾವಿಯೊಳಗೆ ಇಳಿಸಿದ್ದಾನೆ.  (ಹಾಗೆ ಇಳಿಸಲು ಒಂದು ಕಾರಣವಿದೆ.)  ಹುಡುಗನಿಗೆ ಇದು ಮೊದಲ ಅನುಭವ. ಕತ್ತಲು ತುಂಬಿದ ಬಾವಿಯೊಳಗೆ ಇಳಿಯುವಾಗ ಅವನನ್ನು ಭಯ ಆವರಿಸುತ್ತದೆ.  ಕೊಳೆತು ನಾರುವ ವಾಸನೆಗೆ ಅವನಿಗೆ ವಾಕರಿಕೆ ಬರುತ್ತದೆ. ಕೆಳಗ...

ಪತ್ರ ಪೋಸ್ಟ್ ಮಾಡಲು ಟೌನಿಗೆ ಹೋಗಿದ್ದ ರಾತ್ರಿ

ಇಮೇಜ್
ಮೂಲ - ರಾಬರ್ಟ್ ಬ್ಲೈ (ಅಮೇರಿಕಾ ಸಂಯುಕ್ತ )  ಕನ್ನಡ ಅನುವಾದ - ಸಿ. ಪಿ. ರವಿಕುಮಾರ್   ಚಳಿಗಾಲದ ರಾತ್ರಿ ಹಿಮಪಾತವಾಗಿದೆ.  ನಿರ್ಜನವಾಗಿದೆ ಮುಖ್ಯರಸ್ತೆ.  ಚಲಿಸುವುದೇನಾದರೂ ಕಂಡರೆ ಅದು ಜಾರಿ ಬೀಳುವ ಹಿಮದ ಕಣ. ನಾನು ಅಂಚೆ ಪೆಟ್ಟಿಗೆಯ ಪಿಡಿ ಹಿಡಿದು  ಮೇಲೆತ್ತಿದಾಗ  ಕಬ್ಬಿಣ ಕೊರೆಯುತ್ತಿದೆ.  ಇಷ್ಟವಾಗುತ್ತದೆ ನನಗೆ ಹಿಮರಾತ್ರಿಯಲ್ಲಿರುವ ಖಾಸಗೀತನ. ಕಾರಿನಲ್ಲಿ ಇನ್ನೊಂದಷ್ಟು ಅಡ್ಡಾಡಿ ಮಾಡುತ್ತೇನೆ ಕಾಲಹರಣ. (ಒಂದು ಸರಳ ಅನುಭವವನ್ನು ಕವಿಯು ಕವಿತೆಯನ್ನಾಗಿ ಮಾರ್ಪಡಿಸಿದ್ದಾನೆ. ಹಿಮ ಬಿದ್ದ ರಾತ್ರಿಯಂದು ಸಹಜವಾಗಿ ಎಲ್ಲೆಡೆ ಸ್ತಬ್ಧತೆ ಆವರಿಸಿಕೊಂಡಿದೆ. ಇಂಥ ಹೊತ್ತಿನಲ್ಲಿ ಅಂಚೆಪೆಟ್ಟಿಗೆಯಲ್ಲಿ ಪತ್ರ ಹಾಕಿಬರುವ ಜರೂರು ಏನಿತ್ತು?  ಬೇರೊಬ್ಬರೊಂದಿಗೆ ಹಂಚಿಕೊಳ್ಳುವ ಜರೂರು ಅಂಥದ್ದು.  ಪರರೊಂದಿಗೆ ಮಾತಾಡುವ, ಹಂಚಿಕೊಳ್ಳುವ ಒತ್ತಾಸೆ ಅಷ್ಟಿದ್ದರೂ ನಮಗೆ ನಮ್ಮ ಖಾಸಗೀತನ ಆಪ್ಯಾಯಕರ! ಬೇಕಾದರೆ ಹಿಮ ಸುರಿದ ರಸ್ತೆಗಳಲ್ಲಿ ಅಡ್ಡಾಡಿ ಕಾಲಹರಣ ಮಾಡುತ್ತೇವೆ. ಹೀಗೆ ಏಕಕಾಲದಲ್ಲಿ ನಮ್ಮ ಖಾಸಗೀತನವನ್ನೂ ಸಂವಹನದ ಬಯಕೆಯನ್ನೂ ಕಾದುಕೊಳ್ಳುವ ವಿಪರ್ಯಾಸವನ್ನು ಕವಿತೆ ಹೇಳುತ್ತಿದೆ.)