ಪತ್ರ ಪೋಸ್ಟ್ ಮಾಡಲು ಟೌನಿಗೆ ಹೋಗಿದ್ದ ರಾತ್ರಿ
ಮೂಲ - ರಾಬರ್ಟ್ ಬ್ಲೈ (ಅಮೇರಿಕಾ ಸಂಯುಕ್ತ )
ಕನ್ನಡ ಅನುವಾದ - ಸಿ. ಪಿ. ರವಿಕುಮಾರ್

ಚಳಿಗಾಲದ ರಾತ್ರಿ ಹಿಮಪಾತವಾಗಿದೆ.
ಕನ್ನಡ ಅನುವಾದ - ಸಿ. ಪಿ. ರವಿಕುಮಾರ್

ಚಳಿಗಾಲದ ರಾತ್ರಿ ಹಿಮಪಾತವಾಗಿದೆ.
ನಿರ್ಜನವಾಗಿದೆ ಮುಖ್ಯರಸ್ತೆ.
ಚಲಿಸುವುದೇನಾದರೂ ಕಂಡರೆ ಅದು ಜಾರಿ ಬೀಳುವ ಹಿಮದ ಕಣ.
ನಾನು ಅಂಚೆ ಪೆಟ್ಟಿಗೆಯ ಪಿಡಿ ಹಿಡಿದು ಮೇಲೆತ್ತಿದಾಗ
ಕಬ್ಬಿಣ ಕೊರೆಯುತ್ತಿದೆ.
ಇಷ್ಟವಾಗುತ್ತದೆ ನನಗೆ ಹಿಮರಾತ್ರಿಯಲ್ಲಿರುವ ಖಾಸಗೀತನ.
ಕಾರಿನಲ್ಲಿ ಇನ್ನೊಂದಷ್ಟು ಅಡ್ಡಾಡಿ ಮಾಡುತ್ತೇನೆ ಕಾಲಹರಣ.
(ಒಂದು ಸರಳ ಅನುಭವವನ್ನು ಕವಿಯು ಕವಿತೆಯನ್ನಾಗಿ ಮಾರ್ಪಡಿಸಿದ್ದಾನೆ. ಹಿಮ ಬಿದ್ದ ರಾತ್ರಿಯಂದು ಸಹಜವಾಗಿ ಎಲ್ಲೆಡೆ ಸ್ತಬ್ಧತೆ ಆವರಿಸಿಕೊಂಡಿದೆ. ಇಂಥ ಹೊತ್ತಿನಲ್ಲಿ ಅಂಚೆಪೆಟ್ಟಿಗೆಯಲ್ಲಿ ಪತ್ರ ಹಾಕಿಬರುವ ಜರೂರು ಏನಿತ್ತು? ಬೇರೊಬ್ಬರೊಂದಿಗೆ ಹಂಚಿಕೊಳ್ಳುವ ಜರೂರು ಅಂಥದ್ದು. ಪರರೊಂದಿಗೆ ಮಾತಾಡುವ, ಹಂಚಿಕೊಳ್ಳುವ ಒತ್ತಾಸೆ ಅಷ್ಟಿದ್ದರೂ ನಮಗೆ ನಮ್ಮ ಖಾಸಗೀತನ ಆಪ್ಯಾಯಕರ! ಬೇಕಾದರೆ ಹಿಮ ಸುರಿದ ರಸ್ತೆಗಳಲ್ಲಿ ಅಡ್ಡಾಡಿ ಕಾಲಹರಣ ಮಾಡುತ್ತೇವೆ. ಹೀಗೆ ಏಕಕಾಲದಲ್ಲಿ ನಮ್ಮ ಖಾಸಗೀತನವನ್ನೂ ಸಂವಹನದ ಬಯಕೆಯನ್ನೂ ಕಾದುಕೊಳ್ಳುವ ವಿಪರ್ಯಾಸವನ್ನು ಕವಿತೆ ಹೇಳುತ್ತಿದೆ.)
ಬ್ಲಾಗ್‌ನ ನಿರ್ವಾಹಕರು ಈ ಕಾಮೆಂಟ್ ಅನ್ನು ತೆಗೆದು ಹಾಕಿದ್ದಾರೆ.
ಪ್ರತ್ಯುತ್ತರಅಳಿಸಿ