ಇಬ್ಭಾಗ (ಅನುವಾದಿತ ಕವಿತೆ
ಮೂಲ ಕವಿತೆ - ಡಬ್ಲ್ಯೂ ಎಚ್. ಆಡೆನ್ ಕನ್ನಡಕ್ಕೆ - ಸಿ. ಪಿ. ರವಿಕುಮಾರ್ (ಮೂಲ ಕವಿತೆಯನ್ನು ನನ್ನೊಂದಿಗೆ ಹಂಚಿಕೊಂಡ ಶ್ರೀ ಸೀತಾರಾಮ್ ಅವರಿಗೆ ಈ ಅನುವಾದ ಅರ್ಪಣೆ) ಬಂದಿಳಿದಾಗ ಅವನು ಲಂಡನ್ನಿನಿಂದ ತನ್ನ ಕಾರ್ಯ ಈಡೇರಿಸಲು ಬಂಡೆಯಂತಿದ್ದ ಯಾವ ಪೂರ್ವಗ್ರಹವಿಲ್ಲದೆ; ಅವನೆಂದೂ ಕಣ್ಣಾರೆ ಕಂಡಿರಲಿಲ್ಲ ತಾನು ಇಬ್ಭಾಗ ಮಾಡಲು ಬಂದ ಭೂಮಿಯನ್ನು ಅಂಧಕೋಪದಿಂದ ಪರಸ್ಪರ ದ್ವೇಷಿಸುವ ಜನರ ನಡುವೆ. ನೋಡಲು ಒಂದೇ ರೀತಿ ಕಂಡರೂ ವಿಭಿನ್ನ ಆಹಾರ ಪದ್ಧತಿಯ ಪಂಗಡಗಳು, ಹೊಂದಾಣಿಕೆಯಿಲ್ಲ ಅವರಿಬ್ಬರ ದೇವತೆಗಳಲ್ಲಿ. "ಸಮಯವೇನೂ ಧಂಡಿಯಾಗಿಲ್ಲ!" ಎಚ್ಚರಿಕೆ ಸಿಕ್ಕಿತ್ತು ಲಂಡನ್ ನಗರದಲ್ಲಿ, "ರಮಿಸಿ ಒಂದಾಗಿಸಲು ಅಥವಾ ಎರಡೂ ಪಕ್ಷಗಳ ಅಹವಾಲು ಆಲಿಸಲು. ತುಂಡಾಗಿಸುವುದೇ ಉಳಿದ ಏಕೈಕ ಮಾರ್ಗ; ವೈಸರಾಯ್ ಜೊತೆಗೆ ಕಂಡುಬರದೇ ಇರುವುದೇ ಮೇಲು - ಅವನ ಪತ್ರ ಬಂದಿದೆ ನೋಡು. ಒಂದೇ ಮನೆಯಲ್ಲಿ ವಾಸ್ತವ್ಯ ಬೇಡ, ಪ್ರತ್ಯೇಕವಾಗಿರಲು ಮಾಡಿದ್ದೇವೆ ಬಂದೋಬಸ್ತು; ನಾಲ್ವರು ನ್ಯಾಯಾಧೀಶರ ನೆರವು ನಿನಗಿರುವುದು, ಹಿಂದೂಗಳು ಇಬ್ಬರು, ಇಬ್ಬರು ಮುಸ್ಲಿಮರು. ಅವರ ಸಲಹೆ ಕೇಳಿದರೂ ಸಂದಿಗ್ಧವಿಲ್ಲದ ಕೊನೆಯ ನಿರ್ಧಾರ ನಿನ್ನದೇ, ನೆನಪಿಡು." ಸುಂದರ ಬಂಗಲೆಯಲ್ಲಿ ವಾಸ, ಹಗಲಿರುಳೂ ರಕ್ಷೆಗೆ ಪೊಲೀಸ...