ಪೋಸ್ಟ್‌ಗಳು

ಜನವರಿ, 2021 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಹರಟೆಗಳು - ನಿಮಗೊಂದು ಟಿಪ್, ಬಿಟ್ ಕಾಯಿನ್, ಸೋಲಾರಕ್ಕೂ ಬೇಕಂತೆ ಕಾರ

  (೧)  ನಿಮಗೊಂದು ಟಿಪ್    ಈರುಳ್ಳಿ ಹೆಚ್ಚುವಾಗ ನಿಮ್ಮ ಕಣ್ಣಲ್ಲಿ ನೀರು ಬರುತ್ತದೆಯೇ? ಹಾಗಾದರೆ ನೀವು ಈ ಟಿಪ್ ನೋಡಲೇ ಬೇಕು. ಕೊನೆಯವರೆಗೂ ಈ ಟಿಪ್ ವೀಕ್ಷಿಸಿದರೆ ಈರುಳ್ಳಿ ಕತ್ತರಿಸುವಾಗ ನಿಮ್ಮ ಕಣ್ಣಲ್ಲಿ ಸ್ವಲ್ಪವೂ ನೀರು ಬರುವುದಿಲ್ಲ. ಹಾಗಾದರೆ ಈಗ ಟಿಪ್ ನೋಡೋಣವೇ? ಅದಕ್ಕಿಂತ ಮುಂಚೆ ಒಂದು ಸಣ್ಣ ವಿರಾಮ. ಎಲ್ಲರಿಗೂ ಮತ್ತೊಮ್ಮೆ ಸ್ವಾಗತ. ವೀಕ್ಷಕರೇ, ಇವತ್ತು ನಾನು ನಿಮಗೆ ಕೊಡುತ್ತಿರುವ ಟಿಪ್ ಬಹಳ ಉಪಯುಕ್ತವಾದದ್ದು. ಅದೆಷ್ಟು ಸಲ ನೀವು ಈರುಳ್ಳಿ ಕತ್ತರಿಸುವಾಗ ಯಾರಾದರೂ ಮನೆಗೆ ಬಂದು ನೀವು ಅಳುತ್ತಿದ್ದೀರೆಂದು ತಿಳಿದು ನಿಮ್ಮನ್ನು ಏನಾಯಿತೆಂದು ಮತ್ತೆ ಮತ್ತೆ ಕೇಳಿ ನಿಜವಾಗಲೂ ಅಳಿಸಿಲ್ಲ, ಹೇಳಿ! ಇವತ್ತು ನಾನು ನೀಡುವ ಟಿಪ್ ಕೊನೆಯವರೆಗೂ ಫಾಲೋ ಮಾಡಿದರೆ ಇಂಥ ಯಾವ ಕಸಿವಿಸಿಯೂ ನಿಮಗೆ ಆಗುವುದಿಲ್ಲ. ಹಾಗಾದರೆ ಟಿಪ್ ನೋಡೋಣವೇ? ಮನೆಗೆ ಅತಿಥಿಗಳು ಬರಲಿದ್ದಾರೆ. ಅವರಿಗಾಗಿ ಈರುಳ್ಳಿ ಪಕೊಡವನ್ನೋ, ಆನಿಯನ್ ರಿಂಗ್ಸ್ ಅಥವಾ ಇನ್ನೇನೋ ಹೊಸರುಚಿ ತಯಾರಿಸಬೇಕಾಗಿದೆ. ಈರುಳ್ಳಿ ಕಟ್ ಮಾಡೋದು ಮಹಾ ಸಂಕಟದ ವಿಷಯ. ಅದರಲ್ಲೂ ಈ ಕೆಂಪು ಈರುಳ್ಳಿಯಂತೂ ಮಹಾ ಕಷ್ಟ. ಒಗಟು ಕೂಡಾ ಇದೆ. ದುಡ್ಡು ಕೊಟ್ಟು ತಂದು ದುಃಖ ಪಟ್ಟರು ಅಂತ. ಅದಕ್ಕೆ ಉತ್ತರ ನೀವು ಈಗಾಗಲೇ ಊಹಿಸಿರಬಹುದು. ಅದು ಏನೆಂದು ಕಾಮೆಂಟ್ ಬಾಕ್ಸಿನಲ್ಲಿ ಖಂಡಿತಾ ಹಾಕಿ. ನಿಮ್ಮ ಕಾಮೆಂಟ್ಸ್ ಓದುವುದು ನನಗೆ ತುಂಬಾ ಇಷ್ಟ. ಸರಿ ಈಗ ಟಿಪ್ ನೋಡೋಣ. ಇದು ನಾನು...

ಸಂಕ್ರಾಂತಿಯ ಸವಿ (ಹನಿಗವಿತೆಗಳು)

(೧) ತಿಂದು ಸೆಸಮೀ ಸೀಡ್ ಮತ್ತು ಜ್ಯಾಗರಿ ಹೊಟ್ಟೆಯಲ್ಲಿಲ್ಲವೇ ಇಲ್ಲ ಸ್ವಲ್ಪವೂ ಜಾಗ ರೀ ಆದರೂ ಹೆಂಡತಿ ತಂದಾಗ ಪೊಂಗಲ್ ಬೇಡ ಎನ್ನದೆ ಹೇಗೋ ಕಷ್ಟಪಟ್ಟು ನುಂಗಲ್ ಮಾಡುವನು ಗಂಡ ಪಾಪ ಎಷ್ಟೊಂದು ತ್ಯಾಗ ರೀ (೨) ಬೀರುತ್ತಿದ್ದರು ಹಿಂದೆಲ್ಲ ನಾರಿಯರು ಎಳ್ಳುಬೆಲ್ಲ ಇಂಟರ್ನೆಟ್ ತಂತ್ರಜ್ಞಾನ ತಂದಿದೆ ಡೈವರ್ಸಿಟಿ ನಾರಿಯರಿಗೆ ನರರೂ ನೀಡುತ್ತ ಪೈಪೋಟಿ ಬೀರುತ್ತಿದ್ದಾರೆ ಸೆಸಮೀ ಸೀಡ್-ಜ್ಯಾಗರಿಗಳ ಮೇಳ (೩) ಎಳ್ಳಿನೊಲು ಸ್ನೇಹಮಯವಾಗಿರಲಿ ಈ ಬಾಳು ಬೆಲ್ಲದೊಲು ಸಿಹಿಯಾಗಿರಲಿ! ಎಂದೆಂದಿಗೂ । ನಿಲ್ಲುವುದು ಹೇಗೋ ಎಳ್ಳು-ಬೆಲ್ಲಗಳ ಸವಿಸ್ನೇಹ ಪಲ್ಲವಿಸಲಿ ಹಾಗೆ ಬಾಳ್, ಮಂಕುತಮ್ಮ ।।