ವಿಜ್ಞಾನಕವಿತೆಗಳು
ಆಸಿಡ್ ಜೀರ್ಣವಾಗಲು ನೀನು ತಿಂದ ಬರ್ಗರ್ ಪಾಸ್ತಾ ನಿನ್ನ ಹೊಟ್ಟೆಯಲ್ಲಿ ಸ್ರವಿಸುವುದು ಏನು ಗೊತ್ತಾ ಹೈಡ್ರೋಕ್ಲೋರಿಕ್ ಆಸಿಡ್, ಇದೇನು ಸುಮ್ಮನೇ ಆಯ್ತಾ, ಕರಗಿಸಬಲ್ಲದು ಕಬ್ಬಿಣವನ್ನೇ! ಎಂದಾಗ ಪ್ರೊ ಗುಪ್ತಾ ಕೇಳಿದನು ಒಬ್ಬ, ಸರ್ ನನಗೊಂದು ಡೌಟು, ಆಸಿಡ್‌ಗೆ ಹೊಟ್ಟೆಯೇ ಕರಗಿಹೋಗದೆ ಸುಟ್ಟು? "ನೀನು ಕೇಳಿದ್ದು ಸರಿಯಾಗಿದೆ ಚೋಟೂ, ಹೊಟ್ಟೆ ಸ್ರವಿಸುವುದು ಸೋಡಾ ಬೈ ಕಾರ್ಬೊನೇಟು! ರಕ್ಷಿಸಿಕೊಂಡರೂ ಹೀಗೆ ತನ್ನ ಒಳಪದರ ಕರಗುವುದು ತಪ್ಪುವುದಿಲ್ಲ ಮೇಲೆ ಹೇಳಿದ ಥರ ನಾಲ್ಕುದಿನಕ್ಕೊಮ್ಮೆ ಮರುಜೀವ ಪಡೆಯುವುದು ಉದರ! ಶಿವನು ವಿಷಕಂಠ, ಮನುಷ್ಯನೋ! ನುಂಗಿ ವಿಷಧರ! ತಿಂದರೆ ಸುಲಭಜೀರ್ಣವಾಗದ್ದನ್ನು ಪದೇಪದೇ ಆಸಿಡ್ ಹೆಚ್ಚಾಗಿ ಹೊಟ್ಟೆಗೆ ಆಗುವುದು ಬಾಧೆ! ಜೀರ್ಣಿಸಿಕೊಂಡೆಯಾ ನಾನು ಹೇಳಿದ್ದನ್ನೆಲ್ಲಾ?" "ಸರ್ ಯಾಕೋ ಹೊಟ್ಟೆ ನೋಯುತ್ತಿದೆಯಲ್ಲ!" ಖಾಲೀಸ್ಥಳ ಜಿಮ್‌ಗೆ ಹೋಗಿ ಎಷ್ಟೇ ಮಾಡಿದರೂ ಸಾಮು ಎಷ್ಟೇ ಗಟ್ಟಿಯಾದರೂ ಬಾಡಿ ದೇಹದ ಕಣಗಳ ನಡುವೆ ಬರೀ ಖಾಲೀಸ್ಥಾನ ತುಂಬಿಕೊಂಡಿದೆ ಅಷ್ಟೇ, ಮರೆಯಬೇಡಿ ಹಿಡಿದು ತಂದು ಭೂಮಿಯ ಎಲ್ಲ ಮನುಷ್ಯರನ್ನೂ ತೆಗೆದುಬಿಟ್ಟರೆ ನಡುವಣ ಖಾಲೀಸ್ಥಳ ಫುಸ್ ಎಂದು ಕುಗ್ಗಿಸಿಬಿಡಬಹುದು ಸಕ್ಕರೆಯ ಕ್ಯೂಬ್ ಆಳ ಉದ್ದ ಅಗಲ- ದಷ್ಟೇ ಘನ ಅಳತೆಯಲ್ಲಿ! ಆದರೂ ಎಲ್ಲಿಂದ ಬಂತೋ ಮನುಷ್ಯನಿಗೆ ಆಶ್ಚರ್ಯ ಜಗತ್ತನ್ನೇ ಆಳುವೆನೆಂಬ ಪೊಗರು! ಮಂಗಳಗ್ರಹಕ್ಕೂ ಲಗ್ಗೆ ಇಡುವ ಧೈರ್ಯ! ಫೋಟಾನ್ ಬಸ್ ಹೊರಟಿತು ಹೊರಟಿತು ಫೋಟ...