ಪೋಸ್ಟ್‌ಗಳು

ಮಾರ್ಚ್, 2022 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ವಿಜ್ಞಾನದ ಕಡುಬಿಳುಪು ಛಾಯೆ

ಮೂಲ ಇಂಗ್ಲಿಷ್ ಸಾನೆಟ್ :  ಜಾನ್ ಕೀಟ್ಸ್  ಕನ್ನಡಕ್ಕೆ - ಸಿ. ಪಿ. ರವಿಕುಮಾರ್  ಬಿದ್ದರೂ ಮೇಲೆ ವಿಜ್ಞಾನದ ಕಡುಬಿಳುಪು ಛಾಯೆ  ಹೆದರಿ ಓಡಿ ಹೋಗುವುದೆಲ್ಲ ಲಾವಣ್ಯಮಯ ಮಾಯೆ; ಶಿವನನ್ನೇ ಗುರಿ ಮಾಡಿ ಹೂಬಾಣವನ್ನೆಸೆದ ಕಾಮನಬಿಲ್ಲು  ಮೂಡಿದರೆ  ನಭದಲ್ಲಿ ವಿಜ್ಞಾನ ನೀಡುವುದು ಯಾದಿ  ನೀರಿನಲ್ಲಿ ವಕ್ರ ನಡೆ ನಡೆದ ಬೆಳ್ಗಿರಣದಲ್ಲಿ ಬೇರಾಗಿ ಹಾದಿ  ನೇರಳೆ ಕಡುನೀಲಿ ನಭನೀಲಿ ಹಸಿರು ಹಳದಿ ಕಿತ್ತಳೆ ಕೆಂಪು ವಿಬ್ಗಯಾರು  ತುಳಿದು ಏಕಾಂಗಿ ಸಪ್ತಪದಿ, ಮಳೆಬಿಲ್  ಹೇಗಾಯ್ತು ತಯಾರು  ಬಿಲ್ ಅಲ್ಲವೇ ಅಲ್ಲ ಮಳೆಬಿಲ್ಲು ಗೊತ್ತಾ? ಅದೊಂದು ವೃತ್ತ! ಉತ್ಸಾಹದಿಂದ ಕಲ್ಪನೆಯ ಗುಳ್ಳೆಗೆ ಮುಳ್ಳು ಚುಚ್ಚುತ್ತ ಕತ್ತರಿಸುವುದು ವಿಜ್ಞಾನ ಕಲ್ಪನಾವಿಹಂಗಮದ ಗರಿ  ಎಲ್ಲ ಕೌತುಕಗಳಿಗೂ ನೀಡಿ ಭೂತಶಾಸ್ತ್ರೀಯ ಥಿಯರಿ  ವಿಕ್ರಮನಿಗೆ ಉಳಿಸದೇ ಯಾವುದೂ ಬೆಂಬಿಡದ ಭೂತ  ಉತ್ತರಿಸುತ್ತ ಬಿಡದೆ ಕುತೂಹಲ ಏನನ್ನೂ ಲವಲೇಶ  ಮಾಯಾಮೃಗದಲ್ಲೂ ಈಗ  ಮೃಗವಷ್ಟೇ ಶೇಷ  =========================================  Do not all charms fly At the mere touch of cold philosophy? There was an awful rainbow once in heaven: We know her woof, her texture; she is given In the dull catalogue of common things. Philosophy will clip an Angel’s wings, Conquer all mysteries by rule and line, Empty the haunted air, an

ವಿಜ್ಞಾನಕ್ಕೆ ಕವಿಯ ಪತ್ರ

ಅನಾದಿ ಕಾಲನ ದಿಟಪುತ್ರಿಯೆಂದರೆ ನೀನಲ್ಲವೇ  ಓ ವಿಜ್ಞಾನ! ಬದಲಿಸದಿದ್ದುದೇನಿದೆ  ನೀನು ನಿನ್ನ ಕಣ್ಣುಗಳಿಂದ,  ವಾರೆನೋಟ  ನೋಡುತ್ತಾ ಎವೆಯಿಕ್ಕದೆ! ಕವಿಯ ಹೃದಯವನ್ನೇಕೆ ಕುಕ್ಕುವೆ  ಓ ರಣಪಕ್ಷಿ, ನೀರಸ ವಾಸ್ತವದ ನಿನ್ನ ರೆಕ್ಕೆಯನ್ನು ಬಡಿಯುತ್ತಾ? ಪ್ರೀತಿಸುವನಾದರೂ ಹೇಗೆ ಕವಿ ನಿನ್ನನ್ನು?  ನಿಶೆಯಲ್ಲವನು  ನಭದ  ನಕ್ಷತ್ರಲೋಕದ ನಿಧಿಗಳನ್ನರಸಿ ಹೊರಟರೆ  ಕಲ್ಪನೆಯ ಗರಿ ಬಿಚ್ಚಿ ವಿಹಂಗಮದಂತೆ, ಅಯ್ಯೋ  ಹಾರಗೊಡದಲ್ಲ  ನಿನ್ನ  ಅಡ್ಡಗಾಲು! ಧ್ರುವನನ್ನು ನೂಕಿ ಬೀಳಿಸಿದೆ ಕೆಳಕ್ಕೆ! ಸಪ್ತಋಷಿಗಳನ್ನು ಹೆದರಿಸಿ ಮೇಲೆಬ್ಬಿಸಿದೆ ಏಳು ಏಳೆಂದು! ಬೆದರಿಸಿ ಓಡಿಸಲಿಲ್ಲವೇ  ಶಶಾಂಕನ ಮೇಲಿದ್ದ ಮೊಲವನ್ನು? ಪೂರ್ಣಿಮೆಗೆ ಉಕ್ಕುವ ಸಾಗರದ ಸಂಭ್ರಮಕ್ಕೂ ನಿನ್ನದೊಂದು  ಶುಷ್ಕ ವಿವರಣೆ!  ಕದ್ದೆಯಲ್ಲ ಚಕ್ರವಾಕಗಳಿಂದ ಪ್ರೇಮಸ್ವರ್ಗವನ್ನೂ  ನಿಷ್ಕರುಣಿ! ಕದ್ದೆಯಲ್ಲ ಕೊಳದ ಬಳಿ ಹೂ ಬಿಟ್ಟ ಹುಣಸೇ- ಮರದಡಿಗೆ  ಬಚ್ಚಿಟ್ಟ ನನ್ನಲ್ಲಿ ಚಿಗುರಿದ್ದ ಒಂದೇ ಸಿಹಿಗನಸೇ!   ಮೂಲ - ಎಡ್ಗರ್ ಆಲನ್ ಪೋ  ಕನ್ನಡ ಅನುವಾದ - ಸಿ. ಪಿ. ರವಿಕುಮಾರ್   Science! true daughter of Old Time thou art! Who alterest all things with thy peering eyes. Why preyest thou thus upon the poet’s heart, Vulture, whose wings are dull realities? How should he love thee? or how deem thee wise, Who wouldst not leave him in his