ಮಳೆನಾಡಮ್ಮನ ಮಡಿಲಿನಲಿ
ಎಲೆಲೆ ರಸ್ತೆ ಏನ್ ಅವ್ಯವಸ್ಥೆ ಅಂತ ಬರೆದ ರಾಜರತ್ನಂ ಬರಿಗಾಲಿನಲ್ಲಿ ಓಡಾಡುತ್ತಿದ್ದವರು. ಒಮ್ಮೆ ಗಾಜು ತುಳಿದು ಗಾಯವಾಗಿ ಅದು ಅತಿರೇಕಕ್ಕೆ ಹೋಗಿ ಇನ್ನೇನು ತಮ್ಮ ಕಾಲನ್ನೇ ಕಳೆದುಕೊಳ್ಳುವ ಸ್ಥಿತಿ ಬಂದು ಸ್ವಲ್ಪದರಲ್ಲೇ ಪಾರಾದರು. ಇವತ್ತಿನ ಬೆಂಗ್ಳೂರಿನ ರಸ್ತೆಗಳ ಸ್ಥಿತಿ ನೋಡಿದ್ದರೆ ರತ್ನ ಅದೇನೇನು ಹೇಳುತ್ತಿದ್ದನೋ! ಸಿಲಿಕಾನ್ ಸಿಟಿ ತನ್ನ ಹೆಸರನ್ನು ಅನ್ವರ್ಥಗೊಳಿಸಲು ಹೊರಟಿದೆ. ಮೆಟ್ರೋ ಕಾಮಗಾರಿ ನಡೆಸುವ ಸಂಸ್ಥೆ ಮಾಡುತ್ತಿರುವ ತಾತ್ಕಾಲಿಕ ಬದಲಾವಣೆಗಳನ್ನು ನೋಡಿ ನಗಬೇಕೋ ಅಳಬೇಕೋ ಗೊತ್ತಾಗದಂತಾಗಿದೆ. ಕ್ಷಿಪ್ರಗತಿಯಲ್ಲಿ ನಡೆಯುವ ಈ ರಸ್ತಾ ರೋಕೋ ಚಳವಳಿಗಳಿಂದ ಗೂಗಲ್ ಕೂಡಾ ತನ್ನ ಮಾರ್ಗದರ್ಶನ ಸಾಮರ್ಥ್ಯವನ್ನು ಕಳೆದುಕೊಂಡು ಚಾಲಕರನ್ನು ಚಕ್ರವ್ಯೂಹಗಳಿಗೆ ತಳ್ಳುತ್ತಿದೆ. ಇತ್ತ ಮಳೆಯ ಕಾರಣ ನಗರವು ಹೊಂಡಾಸಿಟಿಯಾಗಿದೆ. ಮೊನ್ನೆ ನನ್ನ ಕಣ್ಣಮುಂದೆಯೇ ಒಂದು ಸ್ಕೂಟರಿನಲ್ಲಿ ಕುಳಿತ ಇಬ್ಬರು ಯುವತಿಯರು ಒಂದು ಹೊಂಡದಲ್ಲಿ ಸಿಕ್ಕಿಹಾಕಿಕೊಂಡರು. ಅದೃಷ್ಟವಶಾತ್ ಏನೂ ದುರ್ಘಟನೆ ನಡೆಯಲಿಲ್ಲ. ಗಂಡಸರು ಅನೇಕರು ಅವರ ರಕ್ಷಣೆಗೆ ಧಾವಿಸಿದರು. ಪಾಪ ನಿಜಕ್ಕೂ ಕಾಲುಜಾರಿ ಬಿದ್ದಿದ್ದ ಇನ್ನೊಬ್ಬ ವ್ಯಕ್ತಿಯನ್ನು ಯಾರೂ ಕ್ಯಾರೇ ಅನ್ನಲಿಲ್ಲ. ಇನ್ನು ಜನರು ಎಲ್ಲೆಲ್ಲೂ ಹಾಕುವ ತಿಪ್ಪೆಯ ರಾಶಿ ಮಳೆಯಲ್ಲಿ ಎಲ್ಲಾ ಕಡೆಗೂ ಹರಿಯುತ್ತಿದೆ. ಒಂದು ಐ.ಟಿ. ಸಂಸ್ಥೆಯ ಆಫೀಸ್ ಎದುರಿಗೇ ಒಂದು ತಿಪ್ಪೆಯ ರಾಶಿಯನ್ನು ನೋಡಿ ಇವರು ಗಾರ್ಬೇಜ್ ಕಲೆಕ್ಷನ್ ಆಲ