ಪೋಸ್ಟ್‌ಗಳು

ಅಕ್ಟೋಬರ್, 2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಎವರ್ ಗ್ಲೇಡ್ ದಾರಿಯಲ್ಲಿ

ಇಮೇಜ್
  ಮೂಲ: ಗ್ರೇಸ್ ವೈಲೆನ್ಜ್ ಕನ್ನಡಕ್ಕೆ: ಸಿ ಪಿ ರವಿಕುಮಾರ್ ಎಷ್ಟು ಕಾದಿದೆ ಎಂದರೆ ರಸ್ತೆ ನೆಂದಂತೆ ತೋರುತ್ತದೆ  ಮರೀಚಿಕೆಯಂತೆ ಹೊಳೆಯುತ್ತದೆ. ಸೂರ್ಯ ಕಂತುತ್ತಾ ಕ್ಷೀಣ ನೀಲ ಬೆಳಕು ಆವರಿಸುತ್ತಿದೆ. ನಾವು ಒಂದು ಕಡೆ ಪಾರ್ಕ್ ಮಾಡುತ್ತೇವೆ ಕೆಂಪು ಮಾಂಸದ ತುಂಡುಗಳಂತೆ ಕಾಣುವ ಟೊಮೆಟೋ ಹಣ್ಣುಗಳು ಯಾರದೋ ಟ್ರಕ್ ನಿಂದ ಉದುರಿ ಅಪ್ಪಚ್ಚಿಯಾಗಿವೆ. ಎದುರಿಗೆ ಇರುವ ವಿಶ್ರಾಂತಿ ಗೃಹ ವಿಮಾನತಲದಷ್ಟು ವಿಶಾಲವಾಗಿದೆ. ತಟ್ಟೆಗಳಲ್ಲಿ ನಮ್ಮ ಮೇಜುವಾನಿಗೆ ಬರುತ್ತವೆ ಹುರಿದ ಬೆಂಡೆಕಾಯಿ  ಕಾಲರ್ಡ್ ಎಲೆಗಳ ಕೋಸಂಬರಿ ಮತ್ತು ಕುಂಬಳದ ಜಾತಿಯ ಕಾಯಿಗಳ ಕಟ್ಲೆಟ್. ಬಿಲ್ ತೆರಲು ಹೋದಾಗ ಗಲ್ಲಾಪೆಟ್ಟಿಗೆಯಲ್ಲಿದ್ದಾಕೆ ಕೇಳುತ್ತಾಳೆ ರಸ್ತೆಯ ಅಂಚಿನ ಉದ್ದಕ್ಕೂ ಮಲಗಿದ್ದ ನೆರಳುಗಳು  ನೋಡಿದಿರಾ? ಅವು ಏನು ಹೇಳಿ ಮೊಸಳೆಗಳು. ನಾವು ನೋಡಿದ್ದೆವು. ಹದಿನೆಂಟು ಚಕ್ರಗಳ ಟ್ರಕ್ ಗಳ ಟೈರುಗಳು ಸ್ಫೋಟಿಸಿ ಎಗರಿ ಬಿದ್ದಿವೆ ಎಂದು ಮಾತಾಡಿಕೊಂಡಿದ್ದೆವು. ಅವಳು ಬೆರಳನ್ನು ಬಾಯೆಂಜಲು ಮಾಡಿ ಒಂದು ಪುಟ ಹರಿಯುತ್ತಾಳೆ ನಾವು ತೆತ್ತು ಹೊರಡುತ್ತೇವೆ. ಅವು ಬಿಸಿಲಿಗೆ ಹಾಕಿದ ವಂಕಿ ಅಂಚುಗಳ ರಬ್ಬರ್ ತುಂಡುಗಳಂತೆ ತೋರುತ್ತವೆ. ನಮ್ಮ ಪ್ರಯಾಣ ಮುಂದುವರೆಯುತ್ತದೆ ಸಂಜೆ ಬೆಳಕಿನಲ್ಲಿ ಎಲ್ಲಾದರೂ ಕಾಣುವುದೇನೋ ಅರೆಮುಚ್ಚಿದ ಕಣ್ಣು ಅಥವಾ ತೊಗಲಿನ ಚಿಪ್ಪುಗಳು ಅಥವಾ ಬೆನ್ನು ಎಂದು ನಾವು ಹುಡುಕುತ್ತೇವೆ. ಅವು ಬಹುಮೆಲ್ಲಗೆ  ಸ್ತಬ್ಧತೆಯ ವೇಗದಲ್ಲಿ ಚ...

ಇಡ್ಲಿಗೆ ಡೂಡಲ್

ಇಮೇಜ್
ಎಲೆ ಇಡ್ಲಿ ಎಲೆಯ ಮೇಲಿಂದ ಯಾವಾಗ ಹಾರಿ ಕಲೆಯಾಗಿಹೋದೆ ಗೂಗಲ್ ಡೂಡಲ್ ಸೇರಿ ಬಿಳಿಯನ್ನೇ ಉಟ್ಟು ಸರಳವಾಗಿದ್ದೆ  ನೆನ್ನೆಯವರೆಗೆ ತಲೆಯೇ ನಿಲ್ಲುತ್ತಿಲ್ಲವಲ್ಲ ಉತ್ತರವೇ ಇಲ್ಲ ಕರೆಗೆ! ದೋಸೆಗೆ ತಡೆಯಲಾಗುತ್ತಿಲ್ಲ ಈ ಆಘಾತ! ಅವಾರ್ಡು ಮೋಸದಿಂದ ಗೆದ್ದುಕೊಂಡದ್ದೆಂದು ಬಯಸುತ್ತಿದೆ ಸೇಡು ಇನ್ನು ಉಪ್ಪಿಟ್ಟಿಗಂತೂ ಡಿಪ್ರೆಶನ್ ಆಗುವುದು ಬಾಕಿ ಸುಮ್ಮನೆ ಹಾರಿಸುವರು ಎಲ್ಲ ಉಪಮಾತೀತ ಚಟಾಕಿ ಎಷ್ಟೇ ಬಗೆಯಲ್ಲಿ ರೂಪ ತಾಳಿ ಬಂದರೂ ಉಪ್ಪಿಟ್ಟು ಅಷ್ಟೇಕೆ ಎಲ್ಲರಿಗೂ ಅದರ ಮೇಲೆ ತಾತ್ಸಾರ ಸಿಟ್ಟು! ಇನ್ನು ಅವಲಕ್ಕಿಗೆ ಬೇಕಾಗಿಲ್ಲ ಈ ಯಾವ ಊಹಾ-ಪೋಹ ಕೃಷ್ಣನೇ ನನ್ನನ್ನು ಮೆಚ್ಚಿದನೆಂದು ಕಣ್ಮುಚ್ಚಿದೆ ಆಹಾ! ಕೋಪಿಸಿಕೊಂಡು ಕುದಿಯುತ್ತಿವೆ ಚಟ್ನಿ ಸಾಂಬಾರು ಸಪ್ಪೆ ಇಡ್ಲಿಗೆ ರುಚಿ ನಮ್ಮಿಂದಲೇ ಎಂದು ತಕರಾರು. ಸಿ ಪಿ ರವಿಕುಮಾರ್