ಪೋಸ್ಟ್‌ಗಳು

ಮಾರ್ಚ್, 2026 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಟೊಮೇಟೋ ಹಣ್ಣುಗಳು

ಇಮೇಜ್
ಮೂಲ: ಜಾಯ್ ಸಲೈವನ್  ಕನ್ನಡಕ್ಕೆ: ಸಿ ಪಿ ರವಿಕುಮಾರ್  ಅದೆಷ್ಟು ದಿನ ಕಾದಿದ್ದೆ ನಾನು ಪ್ರೀತಿಗಾಗಿ ಒಮ್ಮೆಲೇ ದೊರೆಯಿತು ತೋಟದಲ್ಲಿ ಇಂದು ಸೂರ್ಯನ ಶಾಖಕ್ಕೆ ಮಾಗಿ ಕೈತುಂಬಿದವು ಚರಾಸ್ತಿಯಂತೆ ಬೊಗಸೆಗೆ ಬಂದು. ಸಂಜೆಯ ಅಡುಗೆಗೆ ಈಳಿಗೆಮಣೆಯನ್ನೇರಿ  ಉಪ್ಪುಮೆಣಸುಗಳ ಸಿಂಗಾರ ಹೇರಿ ಬ್ರೆಡ್ ತುಂಡುಗಳ ನಡುವೆ ಸೇರಿಕೊಳ್ಳುತ್ತವೆ. ನನ್ನ ನಿತಂಬಗಳು ಹಣ್ಣಾಗುತ್ತವೆ. ಹಣ್ಣಾಗುತ್ತದೆ ನಿನ್ನ ಗಡ್ಡ. ಶೇಖರವಾಗುತ್ತದೆ ಅಂಚೆಗಳ ಗುಡ್ಡ. ಫೋನ್ ಕರೆಗಳಿಗೆ ಉತ್ತರಿಸಲು ಆಗುತ್ತಿಲ್ಲ. ಕ್ಷಮಿಸಿ, ಟೊಮೇಟೋ ತುಂಬಿದೆ ನಮ್ಮ ಬಾಯ್ತುಂಬ. ನಾವು ತೀರಾ ವ್ಯಸ್ತರಾಗಿದ್ದೇವೆ  ಅಲ್ಪರಾಗಿ, ಹಸಿದವರಾಗಿ, ತೊಟ್ಟು ಬಾಳ್ವೆಯ ಬಂಧ.

ದೀಪಗಳು

ಇಮೇಜ್
  ಸಿ ಪಿ ರವಿಕುಮಾರ್ (ಮಹಾದೇವಿ ವರ್ಮಾ ಅವರ ಹಿಂದಿ ಕವಿತೆಯನ್ನು.ಆಧರಿಸಿ) ಹರಿದ್ವಾರದಲ್ಲಿ ಒಂದು ಸಂಜೆ. ಗಂಗೆಗೆ ಆರತಿ ನಡೆಯುತ್ತಿತ್ತು.  ಜನ ತಮ್ಮ ಕೈಗಳಲ್ಲಿ ಆರತಿಯ ತಟ್ಟೆಗಳನ್ನು ಹಿಡಿದು ನಿಂತಿದ್ದರು. ಬಿದಿರಿನ ತಟ್ಟೆಗಳ ಮೇಲೆ ಹಸಿರು ಎಲೆಗಳನ್ನು ಹಾಸಿ ಮೇಲೆ ಹೂವುಗಳನ್ನು ಇರಿಸಲಾಗಿತ್ತು. ಪ್ರತಿಯೊಂದು ತಟ್ಟೆಯಲ್ಲೂ ಒಂದು ದೀಪ.  ಗಂಗೆಯನ್ನು ಪ್ರಾರ್ಥಿಸಿ ಅವಳು ದೀಪವನ್ನು ತೇಲಿಬಿಟ್ಟಳು. ನದಿಯ ಇನ್ನೊಂದು ದಡದಲ್ಲಿ ಅವನು ಕೂಡಾ ದೀಪವನ್ನು ತೇಲಿಬಿಟ್ಟನು. ಅವಳ ಕೈಯಲ್ಲಿ ಪೂಜೆ ಮಾಡಿಸಿದ ಅರ್ಚಕ "ಮನಸ್ಸಿನಲ್ಲಿ ನಿನ್ನ ಆಸೆ ಹೇಳಿಕೋ. ಗಂಗಾ ಮಾತೆ ಖಂಡಿತ ಪೂರೈಸುತ್ತಾಳೆ" ಎಂದು ಹೊರಟು ನಿಂತ. ಅವಳು ಕಣ್ಮುಚ್ಚಿ ಧ್ಯಾನಸ್ಥಳಾದಳು. ತಾನು ಹಚ್ಚಿದ ದೀಪವು ತೇಲುತ್ತಾ ಹೋಗುವುದನ್ನು ನೋಡುತ್ತಾ ನಿಂತಳು. ಸ್ವಲ್ಪ ಹೊತ್ತಿನ ನಂತರ ದೀಪವು ಕಾಣದಂತೆ ಮರೆಯಾಯಿತು. ದೂರದ ದಡದಲ್ಲಿ ಅವನ ಜೊತೆ ಇದ್ದ ಹುಡುಗರು "ಏನು ಕೇಳಿಕೊಂಡೆ ಗಂಗಾಮಾತೆಯಲ್ಲಿ?" ಎಂದು ರೇಗಿಸಿದರು. ಅವಳು ಹಚ್ಚಿದ ದೀಪ ತೇಲುತ್ತಾ ಹೋಗುತ್ತಿತ್ತು. ಅವನು ಹಚ್ಚಿದ ದೀಪ ಓಲಾಡುತ್ತಾ ಅವಳ ದೀಪವನ್ನು ಸಮೀಪಿಸಿತು. ಎರಡೂ ದೀಪಗಳು ಪರಸ್ಪರ ನೋಡಿ ಒಟ್ಟಿಗೆ ತೇಲುತ್ತಾ ಸಾಗಿದವು. ಅವುಗಳ ಅಕ್ಕಪಕ್ಕದಲ್ಲೂ ಅಸಂಖ್ಯ ದೀಪಗಳು ಮಿನುಗುತ್ತಾ ಸಾಗುತ್ತಿದ್ದವು.   ಸಂಜೆ ಕಳೆದು ಕತ್ತಲು ಆವರಿಸಿದಂತೆ ದೀಪಗಳು ನದಿಯಲ್ಲಿ  ತೇಲಿಕೊಂಡು ಹೋಗುವ ದೃಶ್ಯ ಎಲ್ಲ...