ಟೊಮೇಟೋ ಹಣ್ಣುಗಳು

ಮೂಲ: ಜಾಯ್ ಸಲೈವನ್ 

ಕನ್ನಡಕ್ಕೆ: ಸಿ ಪಿ ರವಿಕುಮಾರ್ 



ಅದೆಷ್ಟು ದಿನ ಕಾದಿದ್ದೆ ನಾನು ಪ್ರೀತಿಗಾಗಿ

ಒಮ್ಮೆಲೇ ದೊರೆಯಿತು ತೋಟದಲ್ಲಿ ಇಂದು

ಸೂರ್ಯನ ಶಾಖಕ್ಕೆ ಮಾಗಿ

ಕೈತುಂಬಿದವು ಚರಾಸ್ತಿಯಂತೆ ಬೊಗಸೆಗೆ ಬಂದು.


ಸಂಜೆಯ ಅಡುಗೆಗೆ ಈಳಿಗೆಮಣೆಯನ್ನೇರಿ 

ಉಪ್ಪುಮೆಣಸುಗಳ ಸಿಂಗಾರ ಹೇರಿ

ಬ್ರೆಡ್ ತುಂಡುಗಳ ನಡುವೆ ಸೇರಿಕೊಳ್ಳುತ್ತವೆ.

ನನ್ನ ನಿತಂಬಗಳು ಹಣ್ಣಾಗುತ್ತವೆ.

ಹಣ್ಣಾಗುತ್ತದೆ ನಿನ್ನ ಗಡ್ಡ.

ಶೇಖರವಾಗುತ್ತದೆ ಅಂಚೆಗಳ ಗುಡ್ಡ.


ಫೋನ್ ಕರೆಗಳಿಗೆ ಉತ್ತರಿಸಲು ಆಗುತ್ತಿಲ್ಲ.

ಕ್ಷಮಿಸಿ, ಟೊಮೇಟೋ ತುಂಬಿದೆ ನಮ್ಮ ಬಾಯ್ತುಂಬ.

ನಾವು ತೀರಾ ವ್ಯಸ್ತರಾಗಿದ್ದೇವೆ 

ಅಲ್ಪರಾಗಿ, ಹಸಿದವರಾಗಿ, ತೊಟ್ಟು ಬಾಳ್ವೆಯ ಬಂಧ.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕತ್ತಲೆ ಬೆಳಕು - ಶ್ರೀರಂಗರ ನಾಟಕ