ಗೂಗೆ
ಚಿತ್ರ: ಪ್ರಕಾಶ್ ಆಡುವಳ್ಳಿ ನನ್ನ ಫೇಸ್ ಬುಕ್ ಮಿತ್ರ ಪ್ರಸನ್ನ ಆಡುವಳ್ಳಿ ಅವರ ವನ್ಯ ಛಾಯಾಚಿತ್ರಗಳು ಸ್ಫೂರ್ತಿದಾಯಕವಾಗಿವೆ. ಗೂಬೆಯ ಈ ಚಿತ್ರ ನೋಡಿದಾಗ ಎಡ್ವರ್ಡ್ ಥಾಮಸ್ ಬರೆದ ಕವಿತೆಯ ನೆನಪಾಯಿತು. ಇವನು ಇಂಗ್ಲೆಂಡ್ ದೇಶದಲ್ಲಿ 1878-1917 ಕಾಲದಲ್ಲಿ ಜೀವಿಸಿದ್ದ ಕವಿ. ಅವನ ಕವಿತೆಗಳಲ್ಲಿ ಯುದ್ಧ ವೇ ಪ್ರಮುಖ ವಸ್ತು. "ದ ಔಲ್" (ಗೂಗೆ) ಸುಮಾರು ನೂರುವರ್ಷಗಳ ಹಿಂದೆ ಬರೆದ ಕವಿತೆ. ರಾತ್ರಿ ಒಳ್ಳೆಯ ಊಟ ಮಾಡಿ ಸುಖವಾಗಿ ಮಲಗಿದವನನ್ನು ಗೂಗೆಯ ಸದ್ದು ನಡುನಡುವೆ ಎಚ್ಚರಿಸುತ್ತದೆ, ಕವಿಗೆ ಗೂಗೆಯ ಸದ್ದಿನಲ್ಲೂ ಒಂದು ಸಂದೇಶ ಕೇಳಿಸುತ್ತದೆ. ಮೂಲ ಕವಿತೆ - ಎಡ್ವರ್ಡ್ ಥಾಮಸ್ (1917) ಕನ್ನಡ ಅನುವಾದ - ಸಿ ಪಿ ರವಿಕುಮಾರ್ ಬೆಟ್ಟವಿಳಿದು ಬಂದಾಗ ಹಸಿದಿದ್ದರೂ ಹಪಹಪಿಯಿರಲಿಲ್ಲ ಕಾವಿತ್ತು ಮೈಯಲ್ಲಿ ಹೊರಗೆ ಚಳಿಯಿದ್ದರೂ. ಕಸುವಿತ್ತು ಕೊರೆವ ಚಳಿಗಾಳಿ ಎದುರಿಸಲು, ಬೇಡುತ್ತಿತ್ತು ದಣಿದ ಮೈ ಸ್ವಲ್ಪ ವಿಶ್ರಾಂತಿಯನ್ನು ಬೆಚ್ಚನೆಯ ಬೆಂಕಿಗೂಡು ವಿಶ್ರಾಂತಿಧಾಮದಲ್ಲಿ, ಬಿಸಿಯೂಟ, ಮಂಚ, ಮೆತ್ತನೆಯ ಹಾಸುಗೆ. ನಿದ್ರಿಸಿದೆ ಒರಗಿ ಕಣ್ಮುಚ್ಚಿದ ಕೂಡಲೇ ಹೊರಗೆ ನಿಶ್ಶಬ್ದ, ಹೊರತೊಂದು ಗೂಗೆ. ಯಾವ ಉಲಿವಿರಲಿಲ್ಲ ಗೂಗೆಯ ನಿನಾದದಲ್ಲಿ ನೋವಿನಲ್ಲಿ ಊಳಿಟ್ಟಂತೆ, ದೀರ್ಘ ಗೋಗರೆತ; ಬಣ್ಣಿಸಿದ ಹಾಗಿತ್ತು ಎಷ್ಟೋ ಜನರ ಪಾಡನ್ನು, ನಾನು ತಪ್ಪಿಸಿಕೊಂಡ ಸನ್ನಿವೇಶ. ಉಪ್ಪಿತ್ತು ನನ್ನ ಊಟದಲ್ಲಿ, ನನ್ನ ವಿಶ್ರಾಂತಿಯಲ್ಲೂ