ಗೂಗೆ



ಚಿತ್ರ: ಪ್ರಕಾಶ್ ಆಡುವಳ್ಳಿ


ನನ್ನ ಫೇಸ್ ಬುಕ್ ಮಿತ್ರ ಪ್ರಸನ್ನ ಆಡುವಳ್ಳಿ ಅವರ ವನ್ಯ ಛಾಯಾಚಿತ್ರಗಳು ಸ್ಫೂರ್ತಿದಾಯಕವಾಗಿವೆ. ಗೂಬೆಯ ಈ ಚಿತ್ರ ನೋಡಿದಾಗ ಎಡ್ವರ್ಡ್ ಥಾಮಸ್ ಬರೆದ ಕವಿತೆಯ ನೆನಪಾಯಿತು. ಇವನು ಇಂಗ್ಲೆಂಡ್ ದೇಶದಲ್ಲಿ 1878-1917 ಕಾಲದಲ್ಲಿ ಜೀವಿಸಿದ್ದ ಕವಿ. ಅವನ ಕವಿತೆಗಳಲ್ಲಿ ಯುದ್ಧ ವೇ ಪ್ರಮುಖ ವಸ್ತು. "ದ ಔಲ್" (ಗೂಗೆ) ಸುಮಾರು ನೂರುವರ್ಷಗಳ ಹಿಂದೆ ಬರೆದ ಕವಿತೆ.  ರಾತ್ರಿ ಒಳ್ಳೆಯ ಊಟ ಮಾಡಿ ಸುಖವಾಗಿ ಮಲಗಿದವನನ್ನು ಗೂಗೆಯ ಸದ್ದು ನಡುನಡುವೆ ಎಚ್ಚರಿಸುತ್ತದೆ,  ಕವಿಗೆ ಗೂಗೆಯ ಸದ್ದಿನಲ್ಲೂ ಒಂದು ಸಂದೇಶ ಕೇಳಿಸುತ್ತದೆ. 


ಮೂಲ ಕವಿತೆ - ಎಡ್ವರ್ಡ್ ಥಾಮಸ್ (1917)
ಕನ್ನಡ ಅನುವಾದ - ಸಿ ಪಿ ರವಿಕುಮಾರ್ 
ಬೆಟ್ಟವಿಳಿದು ಬಂದಾಗ ಹಸಿದಿದ್ದರೂ ಹಪಹಪಿಯಿರಲಿಲ್ಲ
ಕಾವಿತ್ತು ಮೈಯಲ್ಲಿ ಹೊರಗೆ ಚಳಿಯಿದ್ದರೂ.
ಕಸುವಿತ್ತು ಕೊರೆವ ಚಳಿಗಾಳಿ ಎದುರಿಸಲು,
ಬೇಡುತ್ತಿತ್ತು ದಣಿದ ಮೈ ಸ್ವಲ್ಪ ವಿಶ್ರಾಂತಿಯನ್ನು

ಬೆಚ್ಚನೆಯ ಬೆಂಕಿಗೂಡು ವಿಶ್ರಾಂತಿಧಾಮದಲ್ಲಿ,
ಬಿಸಿಯೂಟ, ಮಂಚ, ಮೆತ್ತನೆಯ ಹಾಸುಗೆ.
ನಿದ್ರಿಸಿದೆ ಒರಗಿ ಕಣ್ಮುಚ್ಚಿದ ಕೂಡಲೇ
ಹೊರಗೆ ನಿಶ್ಶಬ್ದ, ಹೊರತೊಂದು ಗೂಗೆ. 
ಯಾವ ಉಲಿವಿರಲಿಲ್ಲ ಗೂಗೆಯ ನಿನಾದದಲ್ಲಿ
ನೋವಿನಲ್ಲಿ ಊಳಿಟ್ಟಂತೆ, ದೀರ್ಘ ಗೋಗರೆತ;
ಬಣ್ಣಿಸಿದ ಹಾಗಿತ್ತು ಎಷ್ಟೋ ಜನರ ಪಾಡನ್ನು,
ನಾನು ತಪ್ಪಿಸಿಕೊಂಡ ಸನ್ನಿವೇಶ.  
ಉಪ್ಪಿತ್ತು ನನ್ನ ಊಟದಲ್ಲಿ, ನನ್ನ ವಿಶ್ರಾಂತಿಯಲ್ಲೂ
ಉಪ್ಪು ಬೆರೆಸುತ್ತಾ ಹಕ್ಕಿದನಿ ನೀಡಿದ ಎಚ್ಚರಿಕೆ -
ನಿರ್ಭಾಗ್ಯರೆಷ್ಟೋ ಮಂದಿ, ನಿರ್ಗತಿಕರು, ಯೋಧರು,
ನಿದ್ರಿಸುತ್ತಿಹರು ನಡುಗುತ್ತ ನಕ್ಷತ್ರದ ಕೆಳಗೆ.
(c) 2015, C.P. Ravikumar 

ಕಾಮೆಂಟ್‌ಗಳು

  1. The Owl
    BY EDWARD THOMAS
    Downhill I came, hungry, and yet not starved;
    Cold, yet had heat within me that was proof
    Against the North wind; tired, yet so that rest
    Had seemed the sweetest thing under a roof.

    Then at the inn I had food, fire, and rest,
    Knowing how hungry, cold, and tired was I.
    All of the night was quite barred out except
    An owl’s cry, a most melancholy cry

    Shaken out long and clear upon the hill,
    No merry note, nor cause of merriment,
    But one telling me plain what I escaped
    And others could not, that night, as in I went.

    And salted was my food, and my repose,
    Salted and sobered, too, by the bird’s voice
    Speaking for all who lay under the stars,
    Soldiers and poor, unable to rejoice.

    Source: Poems (1917)

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)