ಹೊಸ ಅನುಭವ

ಮೂಲ ಕವಿತೆ - ಹರಿವಂಶರಾಯ್ ಬಚ್ಚನ್
ಕನ್ನಡಕ್ಕೆ - ಸಿ ಪಿ ರವಿಕುಮಾರ್


ಹಕ್ಕಿಯಲ್ಲಿ ನಾನು ತೋಡಿಕೊಂಡೆ ಬಯಕೆ:
ಬರೆಯಬೇಕಾಗಿದೆ ನಿನ್ನ ಬಗ್ಗೆ ಕವಿತೆ.
ಹಕ್ಕಿ ಕೇಳಿತು -"ನನ್ನ ರೆಕ್ಕೆಯ ಬಣ್ಣಗಳು
ನಿನ್ನ ಶಬ್ದಗಳಲ್ಲಿದೆಯೇ?"
"ಇಲ್ಲ" ಎಂದೆ ನಾನು.
"ನಿನ್ನ ಶಬ್ದಗಳಲ್ಲಿದೆಯೇ
ನನ್ನ ಕಂಠದಲ್ಲಿರುವ ಸಂಗೀತ?"
"ಇಲ್ಲ"
"ನನ್ನ ಹಾಗೆ ಹಾರಬಲ್ಲವೇ ನಿನ್ನ ಶಬ್ದಗಳು?"
"ಇಲ್ಲ"
"ಜೀವವಿದೆಯೇ ನಿನ್ನ ಶಬ್ದಗಳಲ್ಲಿ?"
"ಇಲ್ಲ"
"ಮತ್ತೆ, ಕವಿತೆ ಏನು ಬರೆಯುತ್ತೀ?"
"ನಿನ್ನಲ್ಲಿ ನನಗಿರುವ ಪ್ರೇಮ
ವ್ಯಕ್ತಗೊಳಿಸಲೇ ಬೇಕು, ಕವಿಯ ಕರ್ಮ"
"ಪ್ರೇಮಕ್ಕೂ ಶಬ್ದಗಳಿಗೂ ಸಂಬಂಧವೆಲ್ಲಿದೆ?'
ಹೊಳೆದು ಹೊಸದೇನೋ ಶರಣಾದೆ  ಮೌನಕ್ಕೆ.

ಕಾಮೆಂಟ್‌ಗಳು

  1. Original poem by Harivansh Ray Bachchan:

    मैनें चिड़िया से कहा, मैं तुम पर एक
    कविता लिखना चाहता हूँ।
    चिड़िया नें मुझ से पूछा, 'तुम्हारे शब्दों में
    मेरे परों की रंगीनी है?'
    मैंने कहा, 'नहीं'।
    'तुम्हारे शब्दों में मेरे कंठ का संगीत है?'
    'नहीं।'
    'तुम्हारे शब्दों में मेरे डैने की उड़ान है?'
    'नहीं।'
    'जान है?'
    'नहीं।'
    'तब तुम मुझ पर कविता क्या लिखोगे?'
    मैनें कहा, 'पर तुमसे मुझे प्यार है'
    चिड़िया बोली, 'प्यार का शब्दों से क्या सरोकार है?'
    एक अनुभव हुआ नया।
    मैं मौन हो गया!

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)