ಪೋಸ್ಟ್‌ಗಳು

ಆಗಸ್ಟ್, 2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಗೊಂಡಾರಣ್ಯಕ್ಕೆ ಪ್ರವಾಸ

ಇಮೇಜ್
ನಾನು ದೆಹಲಿ ಐಐಟಿ ಸೇರಿದ ಹೊಸತು. ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾಗಿದ್ದ ಪ್ರೊ. ಇಂದೂಲ್ಕರ್ ನನ್ನನ್ನು ಕರೆದು "ನೋಡಿ, ಪ್ರತಿವರ್ಷ ಬಿ.ಟೆಕ್ ವಿದ್ಯಾರ್ಥಿಗಳು ಬೇಸಗೆ ತರಬೇತಿಗಾಗಿ ಯಾವುದಾದರೂ ಕಂಪನಿಗೆ ಹೋಗುತ್ತಾರೆ. ಅವರ ಪ್ರಾಜೆಕ್ಟ್ ನೋಡಿ ಅವರಿಗೆ ಸಲಹೆ ಕೊಡಲು ನಮ್ಮ ಕಡೆಯಿಂದ ಒಬ್ಬ ಉಪಾಧ್ಯಾಯರು ಹೋಗಬೇಕು. ಇಲ್ಲಿ ಲಿಸ್ಟ್ ಇದೆ. ನಿಮಗೆ ಇಷ್ಟವಾದದ್ದು ಯಾವುದಾದರೂ ಕಂಪನಿ ಇದ್ದರೆ ಆರಿಸಿಕೊಳ್ಳಿ" ಎಂದರು. ಈಗಾಗಲೇ ಬೆಂಗಳೂರು, ಬಾಂಬೆ, ಮದ್ರಾಸ್ ಮುಂತಾದ ಸಿಟಿಗಳಲ್ಲಿರುವ ಕಂಪನಿಗಳನ್ನು ಯಾರೋ ಆರಿಸಿಕೊಂಡುಬಿಟ್ಟಿದ್ದರು. ನನಗೆ ಆಗಿನ್ನೂ "ಸಾರಿ ಸರ್, ಇವು ಯಾವುದೂ ನನಗಿಷ್ಟವಿಲ್ಲ" ಎನ್ನುವಷ್ಟು ತಿಳಿವಳಿಕೆ ಇರಲಿಲ್ಲ.  ನನಗೆ ಆಗ ಇನ್ನೂ ಮದುವೆ ಆಗಿರಲಿಲ್ಲ. ಹೀಗಾಗಿ ಇವನು ಎಲ್ಲಿಗಾದರೂ ಹೋಗಲು ತಯಾರಾಗುತ್ತಾನೆ ಎಂದು ಅವರಿಗೆ ಅನ್ನಿಸಿರಬಹುದು! ನನಗೆ ಸಿಕ್ಕ ಎರಡು ಇಂಡಸ್ಟ್ರಿಗಳಲ್ಲಿ ಒಂದು ಉತ್ತರಪ್ರದೇಶದ ಗೊಂಡಾ ಎಂಬ ಕಡೆ ಇರುವ ಐಟಿಐ ಮತ್ತು ಇನ್ನೊಂದು ಅಲಾಹಾಬಾದಿನ ಹತ್ತಿರ ಇರುವ ನೈನಿ ಎಂಬಲ್ಲಿರುವ ಐಟಿಐ!  ಗೊಂಡಾ ಎಂಬ ಹೆಸರೇ ನಾನು ಕೇಳಿರಲಿಲ್ಲ. ಇದಾವುದೋ ಗೊಂಡಾರಣ್ಯದ ಅವಶೇಷವೇನೋ ಎಂದು ನನಗೆ ಅನ್ನಿಸಿತು. ನೈನಿ ಎಂಬ ಹೆಸರು ಕೇಳಿದ್ದು ಮಸುಕಾಗಿ ನೆನಪಿತ್ತು. ಆಗ ಇಂಟರ್ನೆಟ್ ಇರಲಿಲ್ಲ. ಅನಂತರ ನೈನಿ ಪ್ರಸಿದ್ಧವಾಗಿರುವುದು ಅಲ್ಲಿಯ ಜೈಲಿಗೆ ಎಂದು ತಿಳಿಯಿತು. ಅಲಾಹಾಬಾದಿನಲ್ಲಿ...

ಶ್ರೀರಾಮಚಂದ್ರ ಕೃಪಾಳು ಭಜಮನ - ಕನ್ನಡದಲ್ಲಿ ಅರ್ಥ

ಇಮೇಜ್
ಶ್ರೀರಾಮಚಂದ್ರ ಕೃಪಾಳು ಭಜಮನ ಹರಣ ಭವಭಯ ದಾರುಣಮ್ ನವಕಂಜ ಲೋಚನ ಕಂಜಮುಖ ಕರಕಂಜ ಪದಕಂಜಾರುಣಮ್  ಮನಸ್ಸೇ, ಕೃಪಾಳುವಾದ ರಾಮಚಂದ್ರನನ್ನು ಭಜಿಸು -  ದಾರುಣವಾದ ಭವಭಯಗಳು ನಾಶವಾಗುತ್ತವೆ. ಶ್ರೀರಾಮನನ್ನು ಕಲ್ಪಿಸಿಕೋ - ಅವನ ಕಣ್ಣುಗಳು ಈಗತಾನೇ ಅರಳಿದ ಕಮಲಗಳಂತಿವೆ. ಅವನ ಮುಖವೂ ಕಮಲದಂತೆ ಅರಳಿದೆ. ಕೈಗಳೂ ಕಮಲದಂತೆ, ಪಾದಗಳೂ ಕೆಂಪುಕಮಲಗಳಂತಿವೆ. ಕಂದರ್ಪ ಅಗಣಿತ ಅಮಿತ ಛವಿ ನವನೀಲ ನೀರಜ ಸುಂದರಮ್  ಪಟಪೀತ ಮಾನಹು ತಡಿತ ರುಚಿ-ಶುಚಿ ನೌಮಿ ಜನಕಸುತಾವರಮ್   ಶ್ರೀರಾಮನ ಸೌಂದರ್ಯವು ಅಗಣಿತ ಸಂಖ್ಯೆಯ ಮನ್ಮಥರಿಗಿಂತಲೂ ಮೀರಿದ್ದು! ನೀರಿನಿಂದ ತುಂಬಿದ ನೀಲಮೇಘದ ಮೈಬಣ್ಣ.  ಹಳದಿಬಣ್ಣದ ವಸ್ತ್ರಗಳೋ  ಮೇಘಗಳ ಅಂಚಿನ ಮಿಂಚಿನಂತಿವೆ!  ಜನಕನ ಮಗಳಾದ ಸೀತೆಯನ್ನು ವರಿಸಿದ ಶ್ರೀರಾಮನ ಪಾವನಮೂರ್ತಿಗೆ ನಮಸ್ಕರಿಸು! ಭಜ ದೀನಬಂಧು ದಿನೇಶ ದಾನವ ದೈತ್ಯ ವಂಶನಿಕಂದನಮ್  ರಘುನಂದ ಆನಂದಕಂದ ಕೋಸಲಚಂದ ದಶರಥನಂದನಮ್ ಮನಸ್ಸೇ, ದೀನಬಂಧುವಾದ ರಾಮನನ್ನು ಭಜಿಸು!  ದೈತ್ಯರ ವಂಶವನ್ನು ತನ್ನ ಪ್ರಖರತೆಯಿಂದ ಬೇರುಸಹಿತ ನಿರ್ಮೂಲನ ಮಾಡಿದವನು.  ರಘುವಂಶದಲ್ಲಿ ಹುಟ್ಟಿದವನೂ ಎಲ್ಲ ಸಂತೋಷಕ್ಕೂ ಮೂಲ ಕಾರಣನಾದವನೂ,  ಕೋಸಲದೇಶವೆಂಬ ಆಕಾಶದಲ್ಲಿ  ಚಂದ್ರನಂತೆ ತಂಪಾಗಿ ಹೊಳೆಯುತ್ತಿರುವವನೂ ಆದ ಶ್ರೀರಾಮನನ್ನು ನೆನೆಸು! ಸಿರ ಮುಕುಟ ಕುಂಡಲ ತಿಲಕ ಚಾರು ಉದಾರ ಅಂಗ ವಿಭೂಷ...

ಶಕುಂತಲಾದೇವಿ ಅವರ ನೆನಪು

ನಾನು ಪಿಎಚ್.ಡಿ. ಮಾಡುತ್ತಿದ್ದ ದಿನಗಳು. ಒಮ್ಮೆ ಕಂಪ್ಯೂಟರ್ ವಿಭಾಗದಲ್ಲಿ ಭಾರತೀಯ ಮೂಲದ ಶಕುಂತಲಾದೇವಿ ಅವರೊಂದಿಗೆ ಒಂದು ಕಾರ್ಯಕ್ರಮ ಆಯೋಜಿಸಲಾಗಿದೆ ಎಂಬ ಪ್ರಕಟಣೆ ನೋಡಿ ನನಗೆ ಮತ್ತು ನನ್ನ ಭಾರತೀಯ ಮಿತ್ರರಿಗೆ ಎಲ್ಲಿಲ್ಲದ ಕುತೂಹಲ ಮತ್ತು ಸಂಭ್ರಮ ಉಂಟಾಯಿತು. ಶಕುಂತಲಾದೇವಿ ಅವರನ್ನು ಕುರಿತು ಸಾಕಷ್ಟು ಕೇಳಿದ್ದೆ. ಪತ್ರಿಕೆಗಳಲ್ಲಿ ಅವರ ಬಗ್ಗೆ ಸಾಕಷ್ಟು ವರ್ತಮಾನಗಳು ಪ್ರಕಟವಾಗುತ್ತಿದ್ದವು. ಅವರು ಒಬ್ಬ ಅಸಾಮಾನ್ಯ ವ್ಯಕ್ತಿ. ದೈವದತ್ತವಾಗಿದ್ದ ಅಸಾಧಾರಣ ಸ್ಮೃತಿಶಕ್ತಿಯನ್ನು ಬೆಳೆಸಿಕೊಂಡು ಅದರಿಂದಲೇ ಜೀವನೋಪಾಯ ಮಾರ್ಗವನ್ನು ಕಂಡುಕೊಂಡವರು. ಅವರಲ್ಲಿ ಶೋಮನ್ ಶಿಪ್ ಕೂಡಾ ಉತ್ತಮವಾಗಿತ್ತು. ಸಭಿಕರ ಮೇಲೆ ತಮ್ಮ ಸಮ್ಮೋಹನಾ ಶಕ್ತಿ ಬೀರುತ್ತಿದ್ದರು. ಬಹುಶಃ  ಚಿಕ್ಕಂದಿನಿಂದ ಶೋಗಳಲ್ಲಿ ಭಾಗವಹಿಸಿ ಅವರಿಗೆ ಇದು ಕರಗತವಾಗಿತ್ತು.  ನಾನು ಸ್ಕೂಲ್ ವಿದ್ಯಾರ್ಥಿಯಾಗಿದ್ದಾಗ ನಾವು ದೆಹಲಿಯಲ್ಲಿ ಕೆಲವು ವರ್ಷ ಇದ್ದೆವು. ಆಗ ನಮ್ಮ ತಂದೆ ಅಲ್ಲಿಯ ಪತ್ರಿಕೆಗಳಾದ ಹಿಂದೂಸ್ತಾನ್ ಟೈಮ್ಸ್, ಈವನಿಂಗ್ ನ್ಯೂಸ್ ಮುಂತಾದ ಪತ್ರಿಕೆಗಳಿಗೆ ಬರೆಯುತ್ತಿದ್ದರು. ಕರ್ನಾಟಕದ ಅನೇಕಾನೇಕ ಕಲಾವಿದರು ಮತ್ತು ಸಾಹಿತಿಗಳನ್ನು ಕುರಿತು ಅವರು ಬರೆದರು. ಶಕುಂತಲಾದೇವಿ ಅವರು ಒಮ್ಮೆ ದೆಹಲಿಗೆ ಭೇಟಿ ಕೊಟ್ಟರು. ನಮ್ಮ ತಂದೆ ಅವರನ್ನು ಭೇಟಿಯಾಗಿ ಅವರೊಂದಿಗೆ ಸಂದರ್ಶನ ನಡೆಸಿ ಪತ್ರಿಕೆಯಲ್ಲಿ ಲೇಖನ ಬರೆದರು. ಅದರಲ್ಲಿ ಶಕುಂತಲಾದೇವಿ ತಮ್ಮ ತಂದೆಯಿಂದ ಗಣಿತ ...